Breaking News

ಕ್ಯೂ ಜಾಸ್ತಿ ಇದ್ದರು ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕೆಂದು ಹಲ್ಲೆ..!

Spread the love

ಬೆಂಗಳೂರು: ಪೆಟ್ರೋಲ್ ಬಂಕ್ ನಲ್ಲಿ ಮೊದಲು ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಲ್ಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ. ಹಂಚಿಪುರದ ಪುಂಡರಿಂದ ಈ ಹಲ್ಲೆ ನಡೆದಿದೆ.

ಪೆಟ್ರೋಲ್ ಬಂಕ್ ನಲ್ಲಿ ತುಂಬಾ ಕ್ಯೂ ಇತ್ತು. ಕಾರಣ ಕ್ಯೂನಲ್ಲಿ ಬರದೆ ನನ್ನ ಗಾಡಿಗೆ ಪೆಟ್ರೋಲ್ ಹಾಕಬೇಕೆಂದು ಹಂಚಿಪುರದ ಡೈರಿ ರಾಮಚಂದ್ರಪ್ಪನ ಮಗ ಗುಣ ಎಗರಾಡಿದ್ದನಂತೆ. ಆ ಬಳಿಕ ಮಾತಿಗೆ ಮಾತು ಬೆಳೆದು ಗುಣನಿಂದ ಹಲ್ಲೆ ನಡೆದಿದ್ದು, ಗುಣನ ಜೊತೆಗೆ ಬಿಎಂಟಿಸಿ ಡ್ರೈವರ್ ಮೂರ್ತಿ ಎಂಬಾತ ಸಾಥ್ ಕೊಟ್ಟಿದ್ದಾನೆ.

ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಸ್‌ಎಲ್‌ಆರ್ ಬಂಕ್ ನ ಸಿಬ್ಬಂದಿ ವೆಂಕಟೇಶ್ ಹಲ್ಲೆಗೊಳಗಾದ ವ್ಯಕ್ತಿ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಗುಣ ಮತ್ತು ಸ್ನೇಹಿತರನ್ನು ವೆಂಕಟೇಶ್ ಪ್ರಶ್ನೆ ಮಾಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಹಲ್ಲೆ ಮಾಡಿದ್ದಾನೆ. ಸಿಸಿಟಿವಿ ಸಮೇತ ನೆಲಮಂಗಲ ಠಾಣೆಗೆ ದೂರು ನೀಡಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ