Breaking News
Home / ಜಿಲ್ಲೆ / ಕನಕಪುರ ತಾಲೂಕಿನ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಶೆಡ್ ಗಳನ್ನು ತೆರವುಗೊಳಿಸಲಾಗಿದೆ.

ಕನಕಪುರ ತಾಲೂಕಿನ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಶೆಡ್ ಗಳನ್ನು ತೆರವುಗೊಳಿಸಲಾಗಿದೆ.

Spread the love

ರಾಮನಗರ: ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿನ ಕನಕಪುರ ತಾಲೂಕಿನ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಶೆಡ್ ಗಳನ್ನು ತೆರವುಗೊಳಿಸಲಾಗಿದೆ.

2006ರ ಅರಣ್ಯ ಕಾಯ್ದೆಯಡಿ ಕಳೆದ ಮೂರು ತಿಂಗಳಿನಿಂದ ಅರಣ್ಯದಲ್ಲಿ ಶೆಡ್ ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಆದಿವಾಸಿಗಳ 76 ಕ್ಕೂ ಹೆಚ್ಚು ಶೆಡ್ ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬುಡುಗಯ್ಯನ ದೊಡ್ಡಿ ಗ್ರಾಮದ ಇರುಳಿಗ ಬುಡಕಟ್ಟು ಸಮುದಾಯದವರು ಕಳೆದ ಮೂರು ತಿಂಗಳಿನಿಂದ ಹಕ್ಕುಪತ್ರಗಳಿಗಾಗಿ ಹೋರಾಟ ನಡೆಸುತ್ತಿದ್ದರು.

ಹಕ್ಕುಪತ್ರ ಸಿಗುವ ತನಕ ಅರಣ್ಯ ಬಿಟ್ಟು ಹೊರಬರವುದಿಲ್ಲವೆಂದು ಅರಣ್ಯದಲ್ಲಿಯೇ ಶೆಡ್ ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈ ಬಿಟ್ಟಿದ್ದ ಆದಿವಾಸಿಗಳು ಶೆಡ್ ಗಳಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ 100 ಜನ ಸಿಬ್ಬಂದಿ ಜೊತೆ ಹೋಗಿ ಶೆಡ್ ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಸುಮ್ಮನಿದ್ದ ಅರಣ್ಯ ಇಲಾಖೆ ಅಧಿಕಾರಿ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಶೆಡ್ ಗಳನ್ನು ತೆರವುಗೊಳಿಸಿ, ಧ್ವಂಸಗೊಳಿಸಿರುವುದು ಇರುಳಿಗರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

Spread the love ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ