Breaking News
Home / ಅಂತರಾಷ್ಟ್ರೀಯ / ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ : ಮಾರಿಹಾಳ ಗ್ರಾಪಂ.ಗೆ 5 ಸ್ಥಾನಗಳು ಅವಿರೋಧ ಆಯ್ಕೆ

ಸಚಿವ ರಮೇಶ್ ಜಾರಕಿಹೊಳಿ ಪ್ರಯತ್ನ : ಮಾರಿಹಾಳ ಗ್ರಾಪಂ.ಗೆ 5 ಸ್ಥಾನಗಳು ಅವಿರೋಧ ಆಯ್ಕೆ

Spread the love

ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರ ಪ್ರಯತ್ನ ದಿಂದ ಸಮೀಪದ ಮಾರಿಹಾಳ ಗ್ರಾಮ ಪಂಚಾಯತಿಯ 18 ಸ್ಥಾನಗಳ ಪೈಕಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಅವಿರೋಧ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಗ್ರಾಮಗಳ ಅಭ್ಯುದಯಕ್ಕಾಗಿ ಗ್ರಾಮ ಪಂಚಾಯತಿಯಲ್ಲಿ ಸರ್ವ ಸಮ್ಮತ ಅರ್ಹವ್ಯಕ್ತಿಗಳ ಅವಿರೋಧ ಆಯ್ಕೆಯಾಗಬೇಕು ಇದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ನೆಮ್ಮದಿಯ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗೆ ವಾರ್ಷಿಕವಾಗಿ ಕೊಟ್ಯಾಂತರ ರೂಪಾಯಿ ಅನುದಾನ ನೀಡುತ್ತಿದೆ. ಸಮರ್ಪಕ ಬಳಕೆಗೆ ಗ್ರಾಮ ಪಂಚಾಯತಿ ಆಡಳಿತ ಅತ್ಯಂತ ಅವಶ್ಯಕವಾಗಿದ್ದು ಹಾಗು ಚ್ಚಿನ ಸಂಖ್ಯೆಯಲ್ಲಿ ಅವಿರೊಧ ಆಯ್ಕೆಗೆ ಪ್ರತಿ ಗ್ರಾಮದಲ್ಲಿ ಗ್ರಾಮಸ್ಥರು ಚಿಂತನೆ ಮಾಡಬೇಕೆಂದರು.

ಬಸವರಾಜ ಮಾದಮ್ಮನವರ, ಮಲ್ಲವ್ವ ಕುಳ್ಳನ್ನವರ, ರೇಖಾ ತಳವಾರ, ಗಂಗವ್ವ ಅಮಾತಿ ಹಾಗೂ ತೌಸೀಫ ಫಣಿಬಂಧ ಅವಿರೊಧ ಆಯ್ಕೆಯಾಗಿದ್ದಾರೆ.

ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಖಂಜಾಚಿ ಮಲ್ಲಿಕಾರ್ಜುನ ಮಾದಮ್ಮನವರ, ಗ್ರಾಮದ ಹಿರಿಯರಾದ ಮಹಾಂತಯ್ಯ ಪೂಜಾರ, ವಿಠ್ಠಲ ಮಲ್ಲಾರಿ ಇತರರು ಇದ್ದರು.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ