Breaking News

ಶಾಲಾ ಶಿಕ್ಷಕರಿಗೆ ಗುಡ್ ನ್ಯೂಸ್ : ಮಧ್ಯಂತರ ರಜೆಯನ್ನು ಘೋಷಿಸಿದ ಬಿಎಸ್‌ವೈ

ಬೆಂಗಳೂರು : ಕೊರೋನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಅ.12ರಿಂದ ಅ.30ರವರೆಗೆ ಮೂರು ವಾರಗಳ ಮಧ್ಯಂತರ ರಜೆಯನ್ನು ಘೋಷಿಸಿ ಬಿಎಸ್‌ವೈ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪತ್ರದಲ್ಲಿ ಮಾಹಿತಿ ನೀಡಿದ್ದು, ಕೋವಿಡ್-19 ಸೋಂಕಿನ ಹಿನ್ನಲೆಯಲ್ಲಿ ಸದ್ಯಕ್ಕೆ ಶಾಲೆಗಳನ್ನು ಪ್ರಾರಂಭಿಸದಿರಲು ಮತ್ತು ವಿದ್ಯಾಗಮ ಕಾರ್ಯಕ್ರಮವನ್ನು ಸಹ ಸ್ಥಗಿತಗೊಳಿಸಲು ಈಗಾಗಲೇ ಆದೇಶಿಸಲಾಗಿದೆ.   ಹಲವಾರು ಶಿಕ್ಷಕರು ಸಹ ಕೋವಿಡ್-19 ಸೋಂಕಿಗೆ ಒಳಗಾಗಿರುವುದನ್ನ ಮಾಧ್ಯಮದ ಮೂಲಕ …

Read More »

ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ನವದೆಹಲಿ: ಬಡ ವ್ಯಕ್ತಿಯೊಬ್ಬನ ರಿಕ್ಷಾವನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಕೆಲದಿನಗಳಿಂದ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ದೇಶದ ಅನೇಕ ಜಾಲತಾಣಿಗರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಈ ದೇಶದ ಕಾನೂನು ಕೇವಲ ಬಡವರಿಗೆ ಮಾತ್ರ ಎಂದು ಅಡಿಬರಹ ಬರೆದು, ಭಾರತ, ನರೇಂದ್ರಮೋದಿ, ಬಿಜೆಪಿ ಮತ್ತು ಅರವಿಂದ್​ಕೇಜ್ರಿವಾಲ್​ ಎಂಬ ಹ್ಯಾಷ್​ಟ್ಯಾಗ್​ನಿಂದವಿಡಿಯೋ ವೈರಲ್​ ಮಾಡಿದ್ದಾರೆ. ರಿಕ್ಷಾ ವಶಕ್ಕೆ …

Read More »

ಲೋಕಸಭಾ ಉಪಚುನಾವಣೆಗೆ ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಎಂಟ್ರಿ ಕೊಡ್ತಾರಾ!

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯ ದಿನಾಂಕ ನಿಗದಿ ಆಗದಿದ್ದರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದಾರೆ. ಬಿಜೆಪಿಯಲ್ಲಿ ಆಕಾಂಕ್ಷೆಗಳ ದಂಡೆ ಇದೆ. ವಿಶೇಷ ಏನೆಂದರೆ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದಂತ ಪ್ರತಿಷ್ಠೆ ಹೊಂದಿರುವ ಕುಟುಂಬದವೆಂದರೆ ಅದು ಜಾರಕಿಹೊಳಿ ಕುಟುಂಬ.ಜಾರಕಿಹೊಳಿ ಕುಟುಂಬದವರ ತಾವು ಹಿಡಿದ ಹಠವನ್ನು ಸಾಧಿಸದೆ ಬಿಡದ ಕುಟುಂಬ ಎಂದು ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ರಾಜಕಾರಣದಲ್ಲಿ ಹಠವಾದಿ ಎಂದೇ ಖಾತ್ಯಿಯಾಗಿರುವ ಜಲಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ. …

Read More »

ಕೊಟ್ಟಿಗೆ ಹಾರದಲ್ಲಿ ಕಸ್ತೂರಿ ಮಹಲ್ ಸಿನಿ ಚಿತ್ತಾರ

ಕರುನಾಡ ಪ್ರಕೃತಿ ಸೌಂದರ್ಯ ಹೆಚ್ಚಿಸಿರುವಲ್ಲಿ ಕೊಟ್ಟಿಗೆ ಹಾರದ್ದು ಮಹತ್ವದ ಪಾತ್ರವಿದೆ. ಮಳೆಗಾಲದಲ್ಲಿ ಇದರ ವೈಭವ ಕೇಳುವುದೇ ಬೇಡ. ಇಂತಹ ಸುಂದರ ಪರಿಸರದಲ್ಲಿ ಕಸ್ತೂರಿ ಮಹಲ್ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಅಕ್ಟೋಬರ್ 5ರಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮಾತಿನ ಭಾಗದ ಚಿತ್ರೀಕರಣ ‌ಬಿರುಸಿನಿಂದ ಸಾಗಿದೆ.‌ ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಹಾರಾರ್ ಥ್ರಿಲ್ಲರ್ …

Read More »

ರಾಜ್ಯಾದ್ಯಂತ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ.

ಬೆಂಗಳೂರು, – ವಿದ್ಯಾಗಮ ಯೋಜನೆಯಡಿ ಶಿಕ್ಷಕರಿಗೂ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ರಾಜ್ಯಾದ್ಯಂತ ಶಾಲೆಗಳಿಗೆ ಮೂರು ವಾರಗಳ ಕಾಲ ರಜೆ ಘೋಷಣೆ ಮಾಡಿದೆ. ವಿಶೇಷವೆಂದರೆ ನಿನ್ನೆಯಷ್ಟೆ ವಿದ್ಯಾಗಮ ಯೋಜನೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಸರ್ಕಾರ ಆದೇಶ ಹೊರಡಿಸಿತ್ತು. ಮಕ್ಕಳಿಗೂ ಸೋಂಕು ಹರಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ರಾಜ್ಯದ ಹಲವೆಡೆ ಶಿಕ್ಷಕರಿಗೂ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಇದೇ ತಿಂಗಳ 30ರ ವರೆಗೆ …

Read More »

ಆ ಜೋಡೆತ್ತುಗಳನ್ನು 8 ಲಕ್ಷಕ್ಕೆ ಮಾರಿದ್ದರು, ಮತ್ತೆ 17 ಲಕ್ಷ ಕೊಟ್ಟು ಖರೀದಿಸಿದರು! ಏನಿದರ ವಿಶೇಷ?

ಬಾಗಲಕೋಟೆ: ಒಂದಲ್ಲ ಎರಡಲ್ಲ ಬರೊಬ್ಬರಿ 17 ಲಕ್ಷಕ್ಕೆ ಜೋಡೆತ್ತುಗಳು ಮಾರಾಟವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ‍ ಇಂತಹ ದಾಖಲೆಯ ಅಪರೂಪದ ವ್ಯಾಪಾರ ನಡೆದಿದೆ. ಗ್ರಾಮದ ಸಂಗಪ್ಪ ಮುಗಳಖೋಡ ಎಂಬುವವರ ಜೋಡೆತ್ತುಗಳು 17 ಲಕ್ಷಕ್ಕೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಇದೇ ಮಲ್ಲಪ್ಪ ಬೋರಡ್ಡಿಯವರಿಂದ ಇದೇ ಎತ್ತುಗಳನ್ನು ಸಂಗಪ್ಪ ಎಂಟು ಲಕ್ಷಕ್ಕೆ ಖರೀದಿ ಮಾಡಿದ್ದರು.‌ ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ …

Read More »

ಅತ್ಯಾಚಾರ ಆರೋಪಿಗೆ ‘ಕೈ’ ಟಿಕೆಟ್: ಪ್ರಶ್ನಿಸಿದಕ್ಕೆ ಕಾರ್ಯಕರ್ತೆ ಮೇಲೆ ಸ್ವಪಕ್ಷೀಯರಿಂದ ಹಲ್ಲೆ

ಲಕ್ನೋ: ಅತ್ಯಾಚಾರ ಆರೋಪಿಗೆ ಉಪಚುನಾವಣೆಯ ಟಿಕೆಟ್​ ಏಕೆ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದಕ್ಕೆ ಸ್ವಪಕ್ಷೀಯರಿಂದಲೇ ಕಾಂಗ್ರೆಸ್​ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿರುವ ಘಟನೆ ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಕಾಂಗ್ರೆಸ್​ ಕಾರ್ಯಕರ್ತೆ ತಾರಾ ಯಾದವ್​ ಮೇಲೆ ಆಕೆಯ ಪಕ್ಷದವರೇ ನಿನ್ನೆ ನಡೆದ ಮೀಟಿಂಗ್​ ವೇಳೆ ಹಲ್ಲೆ ನಡೆಸಿದ್ದಾರೆ. ಅತ್ಯಾಚಾರದ ಆರೋಪ ಹೊತ್ತಿರುವ ಮುಕುಂದ್​ ಭಾಸ್ಕರ್​ಗೆ ಟಿಕೆಟ್​ ನೀಡುವುದನ್ನು ಪ್ರಶ್ನಿಸಿದಕ್ಕೆ ತಾರಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಘಟನೆಯ ವಿಡಿಯೋ ಬೆಳಕಿಗೆ …

Read More »

IPL 2020: RR vs SRH Live Score ಹೈದ್ರಾಬಾದ್​ಗೆ ರಾಜಸ್ಥಾನ ರಾಯಲ್​ ಚಾಲೆಂಜ್..

ಇಂದಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್​ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರೋ ರಾಜಸ್ಥಾನ ಗೆಲುವಿನ ಟ್ರ್ಯಾಕ್​ಗೆ ಮರಳೋ ವಿಶ್ವಾಸದಲ್ಲಿದೆ. ಇಂದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹಾಗೂ ಜೋಫ್ರಾ ಅರ್ಚರ್ ನಡುವೆ ಪ್ಲೇಯರ್ ಬ್ಯಾಟಲ್ ನಡೆಯಲಿದೆ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ನಾಲ್ಕು ಬಾರಿ ಡೇವಿಡ್ ವಾರ್ನರ್​ರನ್ನ ಜೋಫ್ರಾ ಅರ್ಚರ್, ಬಲಿ ಪಡೆದಿದ್ದಾರೆ. ಹೈದ್ರಾಬಾದ್ ವಿರುದ್ಧದ ಪಂದ್ಯದೊಂದಿಗೆ ಸಂಜು ಸ್ಯಾಮ್ಸನ್, ಐಪಿಎಲ್​ನಲ್ಲಿ 200ನೇ ಪಂದ್ಯವನ್ನ …

Read More »

ನಾನಿನ್ನೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಎಂದರು : ಪ್ರಭಾಕರ ಕೋರೆ

ಬೆಳಗಾವಿ: ‘ಬೆಳಗಾವಿಯಲ್ಲಿ ಏನೇ ವಿಚಾರ ಬಂದರೂ ನನ್ನ ಹೆಸರು ಕೇಳಿಬರುತ್ತದೆ’. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೀರಾ ಎಂಬ ಪ್ರಶ್ನೆಗೆ ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉತ್ತರಿಸಿದ್ದು ಹೀಗೆ. ಶನಿವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಅವರನ್ನು ಭೇಟಿಯಾಗಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ‘ಈ ಬಾರಿ ಯುವಕರಿಗೆ ಕೊಟ್ಟರೂ ಸಂತೋಷ. ಯಾರಿಗೆ ಕೊಟ್ಟರೂ ಸಂತೋಷ. ನಾನಿನ್ನೂ ರಾಜಕೀಯದಿಂದ ನಿವೃತ್ತಿಯಾಗಿಲ್ಲ’ ಎಂದರು. ‘ಪಕ್ಷ …

Read More »

ಅಪರಿಚಿತ ವಾಹನ ಡಿಕ್ಕಿ: ಚಿತ್ರದುರ್ಗದಲ್ಲಿ ಚಿರತೆ; ಉತ್ತರ ಕನ್ನಡದಲ್ಲಿ ರಾಸುಗಳು ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿತ್ರದುರ್ಗ ಜಿಲ್ಲೆಯ ಗುಡ್ಡದರಂಗವ್ವನಹಳ್ಳಿ‌ ಬಳಿ ಚಿರತೆಯೊಂದು ಸಾವನ್ನಪ್ಪಿದೆ. ಏಳು ತಿಂಗಳ ಹೆಣ್ಣು ಚಿರತೆ‌ ರಸ್ತೆ ದಾಟುವ ವೇಳೆ‌ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಘಟನೆ ನಡೆದ ಕೂಡಲೇ ಚಾಲಕ‌ ವಾಹನ ಸಮೇತ ಪರಾರಿಯಾಗಿದ್ದಾನೆ. ಇತ್ತ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಿಡಾಡಿ ದನಗಳು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ನಡೆದಿದೆ. …

Read More »