Breaking News
Home / ಅಂತರಾಷ್ಟ್ರೀಯ / ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

Spread the love

ನವದೆಹಲಿ: ಬಡ ವ್ಯಕ್ತಿಯೊಬ್ಬನ ರಿಕ್ಷಾವನ್ನು ಅಧಿಕಾರಿಗಳು ವಶಕ್ಕೆ ಪಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಕೆಲದಿನಗಳಿಂದ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈ ಘಟನೆ ಭಾರತದಲ್ಲಿ ನಡೆದಿದೆ ಎಂಬುದು ಕೆಲವರ ವಾದ. ಆದರೆ, ಘಟನೆಯ ನಿಜಾಂಶ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ.

ದೇಶದ ಅನೇಕ ಜಾಲತಾಣಿಗರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಈ ದೇಶದ ಕಾನೂನು ಕೇವಲ ಬಡವರಿಗೆ ಮಾತ್ರ ಎಂದು ಅಡಿಬರಹ ಬರೆದು, ಭಾರತ, ನರೇಂದ್ರಮೋದಿ, ಬಿಜೆಪಿ ಮತ್ತು ಅರವಿಂದ್​ಕೇಜ್ರಿವಾಲ್​ ಎಂಬ ಹ್ಯಾಷ್​ಟ್ಯಾಗ್​ನಿಂದವಿಡಿಯೋ ವೈರಲ್​ ಮಾಡಿದ್ದಾರೆ.

ರಿಕ್ಷಾ ವಶಕ್ಕೆ ಪಡೆದಿರುವ ಘಟನೆ ನಡೆದಿದ್ದು ಭಾರತದಲ್ಲಲ್ಲ, ಬದಲಾಗಿ ಪಕ್ಕದ ಬಾಂಗ್ಲಾದೇಶದಲ್ಲಿ. ಢಾಕಾದ ಸರ್ಕಾರಿ ಅಧಿಕಾರಿಗಳು ಈ ಅಮಾನವೀಯ ಕೆಲಸ ಮಾಡಿದವರು.

ವಿಡಿಯೋದಲ್ಲಿ ಗಮನಹರಿಸಲಾಗ ಕೆಲವು ಪದಗಳು ಬಾಂಗ್ಲಾ ಭಾಷೆಯಲ್ಲಿರುವುದನ್ನು ನೋಡಬಹುದಾಗಿದೆ. ವಿಡಿಯೋದಲ್ಲಿರುವ ಸ್ಟೋರ್​ಗಳಲ್ಲಿಯೂ ಸಹ ಬಾಂಗ್ಲಾ ಭಾಷೆಯಲ್ಲೇ ಬರೆಯಲಾಗಿದೆ. ಇನ್ನು ಸಂತ್ರಸ್ತ ವ್ಯಕ್ತಿಯ ಮುಂದೆ ಹಿಡಿದಿರುವ ನ್ಯೂಸ್​ ಚಾನೆಲ್​ ಮೈಕ್​ನಲ್ಲೂ ಸಹ ಜಮುನಾ ಟಿವಿ ಎಂಬ ಲೋಗೋ ಇದೆ. ಇದು ಬಾಂಗ್ಲಾದೇಶದ ಮೂಲದ ನ್ಯೂಸ್​ ಚಾನೆಲ್​ ಆಗಿದೆ.

ಸೂಕ್ತ ಕೀವರ್ಡ್ಸ್​ಗಳ ಸಹಾಯದಿಂದ ಗೂಗಲ್​ನಲ್ಲಿ ಹುಡುಕಾಡಿದಾಗ ಘಟನೆಗೆ ಸಂಬಂಧಿಸಿದ ಮಾಹಿತಿ ದೊರಕಿತು. ಈ ಘಟನೆ ಬಾಂಗ್ಲಾ ರಾಜಧಾಣಿ ಢಾಕಾದಲ್ಲಿ ನಡೆದಿದೆ. ವಿಡಿಯೋದಲ್ಲಿ ಅಳುತ್ತಿರುವ ವ್ಯಕ್ತಿಯನ್ನು ಫಜ್ಲುರ್​ ರಹಮಾನ್​ ಎಂದು ಗುರುತಿಸಲಾಗಿದ್ದು, ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್​ ಅಧಿಕಾರಿಗಳು ಒಕ್ಕಲೆಬ್ಬಿಸುವ ಸಮಯದಲ್ಲಿ ರಿಕ್ಷಾವನ್ನು ವಶಕ್ಕೆ ಪಡೆದಿದ್ದರು.

ವರದಿಯ ಪ್ರಕಾರ ಕರೊನಾ ಹಿನ್ನೆಲೆಯಲ್ಲಿ ತನ್ನ ಹಿಂದಿನ ಕೆಲಸವನ್ನು ಕಳೆದುಕೊಂಡಿದ್ದ ಫಜ್ಲುರ್, ಲೋನ್​ ಮೂಲಕ ಸುಮಾರು 80 ಸಾವಿರ ರೂ. ಮೌಲ್ಯದ ಬ್ಯಾಟರಿ ಪವರ್​ವುಳ್ಳು ರಿಕ್ಷಾ ಕೊಂಡಿದ್ದರು. ಆದರೆ, ಅಕ್ಟೋಬರ್​ 5ರಂದು ಬ್ಯಾಟರಿ ಪವರ್​ವುಳ್ಳು ರಿಕ್ಷಾವನ್ನು ಹೊರಹಾಕುವ ಕಾರ್ಯಾಚರಣೆಗೆ ಇಳಿದ ಢಾಕಾ ದಕ್ಷಿಣ ನಗರದ ಕಾರ್ಪೋರೇಷನ್​ ಅಧಿಕಾರಿಗಳು ಫಜ್ಲುರ್​ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದರು.

ಢಾಕಾ ಟ್ರಿಬ್ಯೂನ್​ ಸಹ ವರದಿ ಮಾಡಿದ್ದು, ಮನಕಲಕುವ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಬಾಂಗ್ಲಾ ಮೂಲದ ಶ್ವಪ್ನೋ ಹೆಸರಿನ ಗ್ರಾಸರಿ ಡೆಲಿವರಿ ಸರ್ವೀಸ್​ ಕಂಪನಿ ಮುಂದೆ ಬಂದು ಎರಡು ರಿಕ್ಷಾ ತೆಗೆದುಕೊಡುವುದಾಗಿ ಭರವಸೆ ನೀಡಿತು. ಅದರಂತೆ ಸಹಾಯವನ್ನೂ ಮಾಡಿತು. ಇದೇ ವರದಿಯನ್ನು ಅನೇಕ ವೆಬ್​ಸೈಟ್​ಗಳು ಸಹ ಪ್ರಕಟಿಸಿವೆ.


Spread the love

About Laxminews 24x7

Check Also

100 ರನ್​ಗಳಿಂದ ಗೆದ್ದ ಭಾರತ; ವಿಶ್ವಕಪ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ …

Spread the loveಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ