Breaking News

ಮೂರು ಕ್ಷೇತ್ರ ಮೂವರು ಪ್ರಭಾವಿ ನಾಯಕರ ಬೆಂಬಗರಿಗೆ ಒಲಿದ ಅದೃಷ್ಟ

  ಬೆಳಗಾವಿ:   ಡಿಸಿಸಿ  ಬ್ಯಾಂಕ್ 3 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ನೇಕಾರ  ಸಹಕಾರಿ ಸಂಘದಿಂದ  ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಆಪ್ತ ಕೃಷ್ಣಾ ಅನಗೋಳ್ಕರ್   ಗೆಲವು  ಸಾಧಿಸಿದ್ದಾರೆ. ರಾಮದುರ್ಗ, ಖಾನಾಪುರ ಹಾಗೂ ಸಹಕಾರಿ ಸಂಘ  ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧ ಆಯ್ಕೆ ವಿರೋಧಿಸಿದ್ದರು.  ಈ ಹಿನ್ನೆಲೆಯಲ್ಲಿ ಮೂರು ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದ್ದು,  ಫಲಿತಾಂಶ ಪ್ರಕಟಗೊಂಡಿದೆ. ಮೂರು ಕ್ಷೇತ್ರದ ಫಲಿತಾಂಶದಲ್ಲಿ ಮೂವರು ಪ್ರಭಾವಿ ನಾಯಕರ …

Read More »

ಓಡ್ನಿ-ತೋಡ್ನಿ ಸೇರಿ ಒಟ್ಟಾರೆ ಪ್ರತಿ ಟನ್ ಕಬ್ಬಿಗೆ 3050 ರೂ. ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400 ರೂ.ಗಳನ್ನು ಮುಂಗಡ ಹಣವನ್ನಾಗಿ ಪಾವತಿಸಲು ನಿರ್ಧರಿಸಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಶುಕ್ರವಾರದಂದು ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪ್ರತಿ 15 ದಿನಗಳಿಗೊಮ್ಮೆ ನಿರಂತರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು …

Read More »

ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ

ಬೆಳಗಾವಿ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೇಕಾರ ಸಹಕಾರಿ ಸಂಘದ ಪ್ರತಿನಿಧಿಯಾಗಿ ಸತೀಶ್ ಜಾರಕಿಹೊಳಿ ಆಪ್ತ ಕೃಷ್ಣಾ ಅನಿಗೋಳ್ಕರ್ ಜಯಭೇರಿ ಬಾರಿಸಿದ್ದಾರೆ. ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ ಯಾಗಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ರಮೇಶ್ ಸಾಹುಕಾರ್ ಕ್ಯಾಂಡಿಡೇಟ್ ಅರವಿಂದ್ ಪಾಟೀಲ ರೋಚಕ ಗೆಲವು ಸಾಧಿಸಿದ್ದಾರೆ

Read More »

ತೀವ್ರ ಕುತೂಹಲ ಕೆರಳಿಸಿದ  ಖಾನಾಪುರ ಡಿಡಿಸಿ ಬ್ಯಾಂಕ್ ಚುನಾವಣೆ   ಫಲಿತಾಂಶ ಹೊರ ಬಿದ್ದಿದ್ದು, ಎಂಇಎಸ್ ಅಭ್ಯರ್ಥಿ  ಅರವಿಂದ  ಪಾಟೀಲ್ ಜಯ

ಬೆಳಗಾವಿ:  ತೀವ್ರ ಕುತೂಹಲ ಕೆರಳಿಸಿದ  ಖಾನಾಪುರ ಡಿಡಿಸಿ ಬ್ಯಾಂಕ್ ಚುನಾವಣೆ   ಫಲಿತಾಂಶ ಹೊರ ಬಿದ್ದಿದ್ದು, ಎಂಇಎಸ್ ಅಭ್ಯರ್ಥಿ  ಅರವಿಂದ  ಪಾಟೀಲ್ ಜಯಗಳಿಸಿದ್ದಾರೆ. ಎಂಇಎಸ್ ಅಭ್ಯರ್ಥಿ 27 ಮತಗಳ ಪಡೆದು ವಿಜಯಶಾಲಿಯಾದರೆ, ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ 25 ಮತಗಳ ಪಡೆಯುವ ಮೂಲಕ 2 ಮತಗಳ ಅಂತರದಲ್ಲಿ  ಪರಾಭವಗೊಂಡಿದ್ದಾರೆ. ಕೋರ್ಟ್ ಆದೇಶ ಪಡೆಯುವ ಮೂಲಕ ಕೊನೆಯ  ಕ್ಷಣದಲ್ಲಿ ನಾಲ್ವರು ಮತ ಚಾಲಯಿಸಿದ ಬಳಿಕ ಅಚ್ಚರಿಯ ಫಲಿತಾಶ ಪ್ರಕಟಗೊಂಡಿದೆ. ಇಂದು ಬೆಳಗ್ಗೆ …

Read More »

ನಾನೇ ಅಮೆರಿಕಾದ ಮುಂದಿನ ಅಧ್ಯಕ್ಷ, ಕಮಲಾ ಉಪಾಧ್ಯೆಕ್ಷೆ : ಬಿಡೆನ್‍ ಘೋಷಣೆ

ವಾಷಿಂಗ್ಟನ್/ನ್ಯೂಯಾರ್ಕ್,ನ.6- ನಾನು ಮತ್ತು ಕಮಲಾ ಹ್ಯಾರಿಸ್ ವಿಜೇತರಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷೆ ಹುದ್ದೆಗಳನ್ನು ಅಲಂಕರಿಸುವುದಾಗಿ ಮಾಜಿ ಉಪಾಧ್ಯಕ್ಷ ಮತ್ತು ಅಧ್ಯಕ್ಷ ಗದ್ದುಗೆ ಏರುವ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಧುರೀಣ ಜೋ ಬಿಡೆನ್ ಹೇಳಿದ್ದಾರೆ. ತಮ್ಮ ತವರು ರಾಜ್ಯ ಡೆಲವೇರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ರಾಜ್ಯಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ಅಧಿಕೃತ ಫಲಿತಾಂಶ ಪ್ರಕಟವಾಗುವ ತನಕ ಜನರು ತಾಳ್ಮೆಯಿಂದ ಇರುವಂತೆ ಅವರು ಮನವಿ ಮಾಡಿದ್ದಾರೆ. ಈ ಮಧ್ಯೆ, ಚುನಾವಣೆಗಳಲ್ಲಿ …

Read More »

ಸಂಪುಟ ವಿಸ್ತರಣೆಗೆ ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸಲಾಗುವುದು.

ಬೆಂಗಳೂರು,ನ.6- ಬಹುನೀರಿಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರ ಜೊತೆ ಚರ್ಚಿಸಲು ಇದೇ 11ರಂದು ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಫಲಿತಾಂಶಕ್ಕಾಗಿ ನಾನು ಕೂಡ ಕಾತುರದಿಂದ ಎದುರು ನೋಡುತ್ತಿದ್ದೇನೆ. ಫಲಿತಾಂಶ ಪ್ರಕಟಗೊಂಡ ನಂತರ ಮೊದಲು ಫೋನ್ ಮೂಲಕ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿ ಸಂಪುಟ ವಿಸ್ತರಣೆ ಮಾಡಬೇಕೆ ಇಲ್ಲವೇ ದೆಹಲಿಗೆ ಬರಬೇಕೇ ಎಂದು ಕೇಳುತ್ತೇನೆ. ನಿಮ್ಮ ವಿವೇಚನೆಯಂತೆ ನಿರ್ಧಾರ ಕೈಗೊಳ್ಳಿ ಎಂದು ವರಿಷ್ಠರು ಸೂಚಿಸಿದರೆ ಸಂಪುಟ …

Read More »

ಗ್ರಾಮ ಪಂಚಾಯಿತಿ ಚುನಾವಣೆ2021 ಫೆಬ್ರವರಿಗೆ ಮುಂದೂಡುವ ಸಾಧ್ಯತೆ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಡಿಸೆಂಬರನಲ್ಲಿ ನಡೆಯಬೇಕಿತ್ತು. ಡಾ.ಎಂ.ಕೆ.ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಚುನಾವಣೆ ನಡೆಸುವುದು ಅಪಾಯಕಾರಿ ಎಂದು ವರದಿ ಸಲ್ಲಿಸಿದೆ. ಆದ ಕಾರಣ 2021 ಫೆಬ್ರವರಿಗೆ ಮುಂದೂಡುವ ಸಾಧ್ಯತೆ ಇದೆ. ತಜ್ಞರ ಸಮಿತಿಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದು ಈ ವೇಳೆ ನಡೆಸುವುದು ಸೂಕ್ತವಲ್ಲ ಎಂಬ ವರದಿ ನೀಡಿರುವುದರಿಂದ ರಾಜ್ಯ ಸರ್ಕಾರ, ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಮುಂದಾಗಿದೆ.  ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. …

Read More »

ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌ಗೆ ಕೊರೊನಾ ಸೋಂಕು ದೃಢ

ಬೀದರ್: ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 4 ದಿನಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದ ವೇಳೆ ಸೋಂಕು ದೃಢಪಟ್ಟಿದೆ. ಯಾವುದೇ ಗುಣಲಕ್ಷಣಗಳು ಕಂಡು ಬರದಿದ್ದರೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ದೃಢಪಡುತ್ತಿದ್ದಂತೆ …

Read More »

ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡೋದು ಸರಿಯಲ್ಲ: ಮುತಾಲಿಕ್

ಬೆಳಗಾವಿ/ಚಿಕ್ಕೋಡಿ: ದೀಪಾವಳಿ ಹಬ್ಬ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡುವುದು ಸರಿಯಲ್ಲ. ಪಟಾಕಿಯಿಂದಲೇ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಆಚರಣೆಗಳು ನಡೆಯುವ ಕಾರಣ ಪಟಾಕಿಯನ್ನು ಬ್ಯಾನ್ ಮಾಡಬಾರದು. ಪಟಾಕಿಯಿಂದ ಮಾತ್ರ ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ ಎಂಬುದು ಸುಳ್ಳು. ಇವತ್ತು …

Read More »

ನನ್ನನ್ನು ಜೈಲಿಗೆ ಹಾಕಲಿ,ನಾಚಿಕೆಯಾಗಬೇಕು ಇದೊಂದು ಸರ್ಕಾರ ಅಂತಾರೇನ್ರೀ:

ಹಾಸನ: ನನ್ನನ್ನು ಜೈಲಿಗೆ ಹಾಕಲಿ, ನಾನು ಹೋರಾಟ ಮಾಡುತ್ತೇನೆ. ಜೈಲಿನಲ್ಲೇ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಉಪಚುನಾವಣೆ ಕಳೆದ ಬಳಿಕ ಕೆಇಬಿ ಬಿಲ್ ಹೆಚ್ಚು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂಬಾನಿ ಕಂಪನಿಗೆ ಕೊಡಲಾಗಿದೆ. ಇನ್ನೂ ಈ ಕೆಇಬಿಯನ್ನ ಯಾವ ಕಂಪನಿಗೆ ಮಾರಾಟ ಮಾಡ್ತಾರೋ ಗೊತ್ತಿಲ್ಲಾ …

Read More »