Breaking News

ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಸಿಕ್ಕಿ ಬಿದ್ದಿದೆ.

ಬೆಂಗಳೂರು: ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಸಿಕ್ಕಿ ಬಿದ್ದಿದೆ. ಸುಧಾ ಅತ್ಯಾಪ್ತೆ ರೇಣುಕಾ ಚಂದ್ರಶೇಖರ್ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು ಸಿಕ್ಕಿದ ಸಂಪತ್ತುಗಳನ್ನು ನೋಡಿ  ದಂಗಾಗಿ ಹೋಗಿದ್ದಾರೆ. ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಪ್ಲಾಟ್‍ನಲ್ಲಿ ಮಣಬಾರದಷ್ಟು ಚಿನ್ನಾಭರಣ, ನಗ-ನಾಣ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ 250 …

Read More »

ಕಾಲೇಜುಗಳು ಬಾಗಿಲು ಮುಚ್ಚಿರುವುದರಿಂದ ಉದ್ಯೋಗವಿಲ್ಲದೇ ಕುರಿಗಾಯಿಯಾದ ಉಪನ್ಯಾಸಕ

ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಾಗಿಲು ಮುಚ್ಚಿರುವುದರಿಂದ ಜಿಲ್ಲೆಯ ಅತಿಥಿ ಉಪನ್ಯಾಸಕರೊಬ್ಬರು ದಿನಗೂಲಿ ಕುರಿಗಾಯಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ನಿಭಾಯಿಸಲು ನಿತ್ಯ 200ರೂ ಕೂಲಿಯಂತೆ ಕುರಿ ಮೇಯಿಸಲು ಹೋಗುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿ ಕುರಿ ಮೇಯಿಸುತ್ತಿದ್ದಾರೆ. ಎಂಎ, ಬಿಎಡ್ ಪದವೀಧರ ವೀರನಗೌಡ ಸರ್ಕಾರಿ ಪದವಿ ಕಾಲೇಜು ಮಸ್ಕಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ …

Read More »

13 ವರ್ಷ ಪ್ರೀತಿ, ದೈಹಿಕ ಸಂಪರ್ಕ – ಮದುವೆ ದಿನ ಹುಡುಗ ಎಸ್ಕೇಪ್

ಉಡುಪಿ: ಯುವತಿಯನ್ನ 13 ವರ್ಷ ಪ್ರೀತಿಸಿ ಮದುವೆಯ ದಿನ ಮಂಟಪಕ್ಕೆ ಬಾರದೆ ಕೈಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಮಣಿಪಾಲದ ಪ್ರೇಮಿಗಳಾದ ಮಮತಾ ಮತ್ತು ಪರ್ಕಳದ ಗಣೇಶ್ ಅವರ ದಶಕದ ಪ್ರೇಮ ಕಥೆಯಿದು. ಹ್ಯಾಂಗ್ಯೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ 13 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದೆ. ಮದುವೆಯಾಗುವುದಾಗಿ ಯುವಕ ನಂಬಿಸಿ 13 ವರ್ಷ ದಿನ ದೂಡಿದ್ದಾನೆ. ಎರಡು ಬಾರಿ ಅಬಾರ್ಷನ್ …

Read More »

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ : ನರೇಂದ್ರ ಮೋದಿ

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಐತಿಹಾಸಿಕಾ ನೋಟು ನಿಷೇಧ ನಿರ್ಧಾರಕ್ಕೆ 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ ಈ ನಿರ್ಧಾರದಿಂದ ಪಾರದರ್ಶಕತೆ ಹೆಚ್ಚಾಗಿದ್ದು ರಾಷ್ಟ್ರೀಯ ಅಭಿವೃದ್ಧಿಗೆ ನೆರವಾಗಿದೆ ಎಂದು ತಿಳಿಸಿದ್ದಾರೆ. ಟ್ವೀಟ್‌ನಲ್ಲೇ ಏನು ಬದಲಾವಣೆಯಾಗಿದೆ ಎಂಬುದನ್ನು ಪ್ರಧಾನಿ ಮೋದಿ ತಿಳಿಸಿದ್ದಾರೆ. ಟ್ವೀಟ್‌ನಲ್ಲಿ ಏನಿದೆ? ನೋಟು ನಿಷೇಧದ ಬಳಿಕ ‘ಆಪರೇಷನ್‌ ಕ್ಲೀನ್‌ ಮನಿʼ ಬಳಿಕ …

Read More »

ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದೊಂದಿಗೆ, ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಉಚಿತ ಟ್ಯಾಬ್

ಯಾದಗಿರಿ: ಪಬ್ಲಿಕ್ ಟಿವಿ ಮತ್ತು ರೋಟರಿ ಕ್ಲಬ್ ಸಂಯೋಗದೊಂದಿಗೆ, ರಾಜ್ಯದ ಸರ್ಕಾರಿ ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಉಚಿತ ಟ್ಯಾಬ್ ನೀಡಲಾಯಿತು. ಜ್ಞಾನ ದೀವಿಗೆ ಯೋಜನೆ ಮೊದಲ ಹಂತದಲ್ಲಿ ಮೊಟ್ಟ ಮೊದಲ ಬಾರಿಗೆ, ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಹತ್ತಿಕುಣಿಯ ಸರ್ಕಾರಿ ಪ್ರೌಢಶಾಲೆ ಆಯ್ಕೆಯಾಗಿದೆ. ಇಂದು ಪಬ್ಲಿಕ್ ಟಿವಿ ಜ್ಞಾನ ದೀವಿಗೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಪಬ್ಲಿಕ್ ಟಿವಿ ಕ್ಯಾಪ್ಟನ್ ಹೆಚ್.ಆರ್ ರಂಗನಾಥ್ …

Read More »

ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಜಯಭೇರಿ ಹಿಂದೆ ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಪಾತ್ರ ದೊಡ್ಡದು.

ಮಂಡ್ಯ: ವಿಶ್ವದ ದೊಡ್ಡಣ್ಣ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಜಯಭೇರಿ ಹಿಂದೆ ಮಂಡ್ಯ ಮೂಲದ ಡಾ.ವಿವೇಕ್ ಮೂರ್ತಿ ಪಾತ್ರ ದೊಡ್ಡದು. ಬೈಡನ್ ಪರ ಚುನಾವಣಾ ತಂತ್ರಗಾರರ ಪೈಕಿ ವಿವೇಕ್ ಕೂಡ ಒಬ್ಬರು. ಈ ನಡುವೆಯೆ ವಿವೇಕ್ ಅವರಿಗೆ ಮಹತ್ವದ ಹುದ್ದೆ ಸಿಗೋದು ಪಕ್ಕ ಆಗಿದ್ದು, ಆ ಮೂಲಕ ಮಂಡ್ಯದ ಹೆಸರು ಅಮೆರಿಕಾದಲ್ಲೂ ಕಮಾಲ್ ಮಾಡುತ್ತಿದೆ. ಅಂದಹಾಗೆ ಡಾ.ವಿವೇಕ್ ಮೂರ್ತಿ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರು. ಡಾ.ಎಚ್.ಎನ್.ಲಕ್ಷ್ಮಿನಾರಾಯಣಮೂರ್ತಿ ಮತ್ತು ಮೈತ್ರೇಯಿ …

Read More »

ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದೇನೆ. ಹೀಗಾಗಿ ನಾನು ಮತ್ತೆ ಸಚಿವನಾಗ್ತೇನೆ.: ವಿಶ್ವನಾಥ್‍

ನವದೆಹಲಿ:  ಉಪ ಚುನಾವಣೆ ಬಳಿಕ ಸಂಪುಟ ಸರ್ಜರಿ ಮಾಡುತ್ತೇನೆ. ದೆಹಲಿಗೆ ಹೋಗಿ ಹೈಕಮಾಂಡ್ ಒಪ್ಪಿಗೆ ಪಡೆಯುತ್ತೇನೆ ಎಂದು ಸಿಎಂ ಯಡಯೂರಪ್ಪ ಘೋಷಿಸಿದ್ದೇ ತಡ ಸಚಿವ ಸ್ಥಾನದ ಆಕಾಂಕ್ಷಿಗಳ ಚಟುವಟಿಕೆ ತೀವ್ರಗೊಂಡಿದೆ. ಮಂತ್ರಿಗಿರಿಗಾಗಿ ಆಕಾಂಕ್ಷಿಗಳು ತಮ್ಮದೇ ಮೂಲಗಳ ಮೂಲಕ ಲಾಬಿ ಆರಂಭಿಸಿದ್ದಾರೆ. ವಿಶ್ವನಾಥ್‍ಗೆ ಮಂತ್ರಿಸ್ಥಾನ ಕೈತಪ್ಪಬಹುದು ಎಂಬ ಸುದ್ದಿ ಹರಡಿರುವ ಹಿನ್ನೆಲೆಯಲ್ಲಿ ಅವರು, ಇನ್ನೋರ್ವ ಆಕಾಂಕ್ಷಿ ಶಂಕರ್ ಜೊತೆ ಸಿಎಂಗೆ ಮುನ್ನವೇ ದೆಹಲಿಗೆ ದೌಡಾಯಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, …

Read More »

ಮದುವೆ ಸಮಾರಂಭ ದಲ್ಲಿ 200ಕ್ಕು ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್. ಚುನಾವಣೆ ಪ್ರಚಾರಕ್ಕೆ ಸೇರಿದರೆ ಇಲ್ಲವಾ …. ?

ಮೈಸೂರು: ಕೊರೊನಾ ಲಾಕ್‍ಡೌನ್ ಶುರುವಾಗಿದ್ದೇ ಬಂತು. ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭಗಳಿಗೆಲ್ಲ ಆತಂಕ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳ ಹೊಸ ನಿಯಮ ಜಾರಿಯಾಗಿದೆ. ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇತ್ತ ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಕೊರೊನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಉಪನಯನ, ಹುಟ್ಟುಹಬ್ಬ, ಬೀಗರೂಟ ಹೀಗೆ ಶುಭ ಸಮಾರಂಭಗಳಿಗೆ …

Read More »

ಅಭಿಮಾನಿಗಳು, ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ, ಗೌರವ ಇಟ್ಟಿದ್ದಾರೆ. ನನ್ನ ಕೊನೆ ಉಸಿರಿನವರೆಗೂ ಅವರಿಗಾಗಿ ಹೋರಾಟ ಮಾಡ್ತೀನಿ:ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಅಭಿಮಾನಿಗಳು, ಕಾರ್ಯಕರ್ತರು ನನ್ನ ಮೇಲೆ ವಿಶೇಷ ಪ್ರೀತಿ, ಗೌರವ ಇಟ್ಟಿದ್ದಾರೆ. ನನ್ನ ಕೊನೆ ಉಸಿರಿನವರೆಗೂ ಅವರಿಗಾಗಿ ಹೋರಾಟ ಮಾಡ್ತೀನಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ ನೀಡಿದ ನಿಖಿಲ್ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು. ಮತ್ತೊಮ್ಮೆ ರೈತರ ಆತ್ಮಹತ್ಯೆ ದಿನನಿತ್ಯ ನಡೆಯುತ್ತಿದೆ. ಇದು ನಿಲ್ಲಬೇಕು ಎಂದು ಹೇಳಿದರು. ಇಂದು ಮಂಡ್ಯ ಜಿಲ್ಲೆಯ ಕೆಆರ್ …

Read More »

ಜಿಲ್ಲಾಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐಗೆ ತಗ್ಲಾಕೊಂಡಿರುವ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಲವಿಲ ಒದ್ದಾಡ್ತಿದ್ದಾರೆ.

ಹುಬ್ಬಳ್ಳಿ: ಧಾರವಾಡ ಜಿಲ್ಲಾಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐಗೆ ತಗ್ಲಾಕೊಂಡಿರುವ ಕಾಂಗ್ರೆಸ್ಸಿನ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಲವಿಲ ಒದ್ದಾಡ್ತಿದ್ದಾರೆ. ಇದರ ನಡುವೆ ವಿನಯ್ ಕುಲಕರ್ಣಿಗೆ ಮತ್ತೆ ಕಸ್ಟಡಿನೋ..? ಕಂಬಿಯೋ ಅನ್ನೋದು ಇಂದು ನಿರ್ಧಾರವಾಗಲಿದೆ.ವಿನಯ್ ಕುಲಕರ್ಣಿ ಸಿಬಿಐ ಸುಳಿಯಲ್ಲಿ ಸಿಲಕಿ ಒದ್ದಾಡುತ್ತಿದ್ದಾರೆ. ಕಳೆದೆರಡು ದಿನಗಳಿಂದ ತಮ್ಮ ಕಸ್ಟಡಿಯಲ್ಲಿರುವ ಕುಲಕರ್ಣಿಯನ್ನ ಸಿಬಿಐ ಅಧಿಕಾರಿಗಳು ದಾಖಲೆಗಳನ್ನಿಟ್ಟು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನಾಶ, ಸುಳ್ಳು …

Read More »