Breaking News

ಬಿಡೆನ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಲಿರುವ ಮಂಡ್ಯದ ಡಾ.ವಿವೇಕ್ ಮೂರ್ತಿ..!

ವಾಷಿಂಗ್ಟನ್, ನ.18- ಅಮೆರಿಕದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಜೋಬಿಡೆನ್ ನೇತೃತ್ವದ ಸರ್ಕಾರದಲ್ಲಿ ಮಂಡ್ಯದ ಡಾ.ವಿವೇಕ್ ಮೂರ್ತಿ ಆರೋಗ್ಯ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಅಮೆರಿಕದ ಮಾಜಿ ಸರ್ಜನ್ ಜನರಲ್ ಆಗಿರುವ 43 ವರ್ಷದ ಡಾ.ವಿವೇಕ್ ಮೂರ್ತಿ ಮೊದಲಿನಿಂದಲೂ ಜೋಬಿಡೆನ್ ಅವರಿಗೆ ಪರಮಾಪ್ತರು. ಅಲ್ಲದೆ ಅಮೆರಿಕದ ಚುನಾಯಿತ ಅಧ್ಯಕ್ಷ ಬಿಡೆನ್ ಅವರಿಗೆ ಆಪ್ತ ಸಲಹೆಗಾರರಾಗಿರುವ ಅಗ್ರಮಾನ್ಯರಲ್ಲಿ ಡಾ.ಮೂರ್ತಿ ಅವರು ಸಹ ಒಬ್ಬರು. ಅಲ್ಲದೆ ಪ್ರಸ್ತುತ ಕೋವಿಡ್ ನಿಯಂತ್ರಣಕ್ಕಾಗಿ ಬಿಡೆನ್ ರಚಿಸಿರುವ ಸಲಹಾ ಸಮಿತಿಯ …

Read More »

ಅಜಿತ್ ಪವಾರ್ ಹೇಳಿಕೆ ಖಂಡಿಸಿ ರಾಜ್ಯದಾದ್ಯಂತ ಕನ್ನಡಪರ ಸಂಘಟನೆಗಳು ಪ್ರತಿಭಟನೆ

ಬೆಳಗಾವಿ, ನ.18- ರಾಜ್ಯ ಸರಕಾರ ಮರಾಠಿಗರ ಓಲೈಕೆಗಾಗಿ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 50 ಕೋಟಿ ರೂ. ಮೀಸಲಿಟ್ಟಿರುವ ಬೆನ್ನಲೆ ಕಾರವಾರ, ಬೆಳಗಾವಿ, ಖಾನಾಪುರ, ನಿಪ್ಪಾಣಿ ಮಹಾರಾಷ್ಟ್ರದ್ದು ಎಂದು ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಹೇಳಿಕೆ ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರದ ಒಂದು ಭಾಗ ಎಂದು ಬಾಳಾಸಾಹೇಬ್ ಠಾಕ್ರೆ ಅವರ ಕನಸಾಗಿತ್ತು. ಠಾಕ್ರೆ ಕನಸು ನನಸು ಮಾಡಲು ಪಣ ತೋಡಬೇಕು. ಈ ಭಾಗದಲ್ಲಿ …

Read More »

ಅಜಿತ್ ಪವಾರ್ ಕ್ಯಾತೆ ತೆಗೆಯುವ ಪ್ಲಾನ್ ಮಾಡಿದ್ದಾರೆ.: B.S.Y.

ಬೆಂಗಳೂರು: ಅಜಿತ್ ಪವಾರ್ ಕ್ಯಾತೆ ತೆಗೆಯುವ ಪ್ಲಾನ್ ಮಾಡಿದ್ದಾರೆ. ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಗಡಿ ವಿಚಾರದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದಾಗ್ಯೂ ಅಜಿತ್ ಅವರ ಈ ಹೇಳಿಕೆ ಉದ್ಧಟತನದಿಂದ ಕೂಡಿದೆ ಎಂದು ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಮಾರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಕರ್ನಾಟಕದಲ್ಲಿರುವ ಮರಾಠಿಗರ ಅಭಿವೃದ್ಧಿಗೆ ಹೊರತು ಬೇರಾವ ಉದ್ದೇಶದಿಂದಲ್ಲ. ಈ ಬಗ್ಗೆ ಗೊಂದಲಗಳು ಬೇಡ ಎಂದು ಹೇಳಿದರು. …

Read More »

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಲಕ್ಷ್ಮಣಸವದಿ

ಬೆಂಗಳೂರು: ಬೆಳಗಾವಿ ಕರ್ನಾಟಕದ್ದು, ಸೂರ್ಯ-ಚಂದ್ರರಿರುವರೆಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಡಿಸಿಎಂ ಲಕ್ಷ್ಮಣಸವದಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿಕೆ ಖಂಡನೀಯ. ಅನಗತ್ಯ ಗೊಂದಲವನ್ನುಂಟು ಮಾಡುವ ಉದ್ದೇಶದಿಂದ ಅವರು ಅಂತಹ ಹೇಳಿಕೆಗಳನ್ನು ನೀಡುತ್ತಿ ರಾಜ್ಯದ ಯಾವುದೇ ಭಾಗದ ಬಗ್ಗೆಯೂ ಕ್ಯಾತೆ ತೆಗೆಯುವ ಗತ್ಯವಿಲ್ಲ ಎಂದರು. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ನಿನ್ನೆ ಬೆಳಗಾವಿ, ನಿಪ್ಪಾಣಿ, ಕಾರವಾರ ನಮ್ಮದು. ಅಖಂಡ ಮಹಾರಾಷ್ಟ್ರಾ ಠಾಕ್ರೆ ಅವರ …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆಕುಟುಂಬ ಸದಸ್ಯರಿಗೆ ಬಿಜೆಪಿ ನಾಯಕರು ಮಣೆ ಹಾಕುವುದು ವಿರಳ……..?

ಬೆಂಗಳೂರು, ನ.17- ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೆ, ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಮಾತ್ರ ವಿಸ್ತರಿಸುತ್ತಲೇ ಇದೆ. ಮತ್ತೊಂದೆಡೆ ಬೆಳಗಾವಿ ಉಪ ಸಮರದ ಟಿಕೆಟ್ ಅಂಗಡಿ ಕುಟುಂಬಕ್ಕೋ? ರಾಜಕೀಯ ವಂಚಿತರಿಗೋ? ಅಥವಾ ಹೊಸಬರಿಗೋ ಎಂಬುವುದೂ ಜಿಜ್ಞಾಸೆಗೆ ಕಾರಣವಾಗಿದೆ. ಬೆಳಗಾವಿ ಕ್ಷೇತ್ರದಿಂದ ನಾಲ್ಕು ಸಲ ಗೆದ್ದಿದ್ದ ಅವರು, ಪ್ರಸಕ್ತ ಮೋದಿ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿದ್ದರು. …

Read More »

ಎರಡು ಟ್ರಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯ.

ಗುಜರಾತ್: ಎರಡು ಟ್ರಕ್‍ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿ, 15 ಮಂದಿ ಗಾಯಗೊಂಡಿರುವ ಘಟನೆ ಗುಜರಾತ್‍ನ ವಡೋದರಾದಲ್ಲಿ ನಡೆದಿದೆ. ಇಂದು ಮುಂಜಾನೆ ವಡೋದರಾದ ವಘೋಡಿಯಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಪಾವಘಡದಿಂದ ಸೂರತ್‍ಗೆ ಹೋಗುವ ಟ್ರಕ್ ಮತ್ತು ಇನ್ನೊಂದು ಟ್ರಕ್ ಒಂದಕ್ಕೊಂದು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ವಡೋದರಾದ ಎಸ್‍ಎಸ್‍ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಐವರು ಮಹಿಳೆಯರು ಸೇರಿದಂತೆ ಕನಿಷ್ಠ 10 …

Read More »

ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ:ಆನಂದ್ ಸಿಂಗ್

ಬೆಂಗಳೂರು: ವಿಜಯನಗರ ಪ್ರತ್ಯೇಕ ಜಿಲ್ಲೆ ಮಾಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಬಹುದಿನದ ಬೇಡಿಕೆ ಈಡೇರಿದೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ ಎಂದು ಹೇಳಿದರು.ಈ ಬೇಡಿಕೆ ನನ್ನ ಒಬ್ಬನದ್ದಲ್ಲ. ಬೇಡಿಕೆ ಇಟ್ಟವರ ಧ್ವನಿಯಾಗಿ ಇಂದು …

Read More »

ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ಇಲ್ಲಾ….

ಬೆಂಗಳೂರು : ಡಿಸೆಂಬರ್ 7 ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ ದಿನಾಂಕ ನಿಗದಿಯಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಕೇವಲ ಹತ್ತೇ ನಿಮಿಷದಲ್ಲಿ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಈ ಬಾರಿ ಅಧಿವೇಶನವನ್ನು ಬೆಳಗಾವಿಯ ಬದಲಾಗಿ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

Read More »

ಕನ್ನಡಿಗರನ್ನು ಕೆಣಕುವ ಚಾಳಿಮಹಾರಾಷ್ಟ್ರದ ರಾಜಕಾರಣಿಗಳು ಮುಂದುವರಿಸಿದ್ದಾರೆ.

ಬೆಳಗಾವಿ: ಪದೇ, ಪದೇ ಬೆಳಗಾವಿ ಗಡಿ ವಿವಾದದ ಕ್ಯಾತೆ ತೆಗೆದು ಜನರ ಮಧ್ಯೆ ಭಾಷಾ ವೈಷ್ಯಮದ ಬೀಜ ಬಿತ್ತಿ ಕನ್ನಡಿಗರನ್ನು ಕೆಣಕುವ ಚಾಳಿಯನ್ನು ಮಹಾರಾಷ್ಟ್ರದ ರಾಜಕಾರಣಿಗಳು ಮುಂದುವರಿಸಿದ್ದಾರೆ. ಬೆಳಗಾವಿ, ನಿಪ್ಪಾಣಿ ಬೀದರ್, ಬಾಲ್ಕೀ, ಮಹಾರಾಷ್ಟ್ರಕ್ಕೆ ಸೇರಿಸುವುದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು, ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು ನನಸು ಮಾಡುತ್ತದೆ ಎಂದು ಡಿಸಿಎಂ, ಎನ್‍ಸಿಪಿ ಅಜೀತ್ ಪವಾರ್ ಹೇಳಿಕೆ ನೀಡುವ ಮೂಲಕ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ. …

Read More »

ರಾಜ್ಯದಲ್ಲಿ ಕೊರೊನಾ ಪ್ರಕರಣಳ ಸಂಖ್ಯೆ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಳ ಸಂಖ್ಯೆ ಇಳಿಮುಖವಾಗಿದ್ದು, ಇಂದು 23 ಜಿಲ್ಲೆಗಳಲ್ಲಿ ಶೂನ್ಯ ಮರಣ ದಾಖಲಾಗಿದೆ. ಇಂದು 1,336 ಹೊಸ ಪ್ರಕರಣಗಳು ವರದಿಯಾಗಿದ್ದು, 2,100 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೂ ರಾಜ್ಯದಲ್ಲಿ 8,27,241 ಜನ ಗುಣಮುಖರಾಗಿದ್ದು, ಚೇತರಿಕೆ ದರ ಶೇ.95.72ರಷ್ಟಿದೆ. ಇನ್ನು ಕೋವಿಡ್ ಮರಣ ಪ್ರಮಾಣ ಶೇ.1.39 ಮತ್ತು ಖಚಿತ ಪ್ರಕರಣಗಳ ಪ್ರಮಾಣ ಶೇ.1.77ರಷ್ಟಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8,64,140ಕ್ಕೆ ಏರಿಕೆಯಾಗಿದ್ದು, 25,323 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ …

Read More »