Home / new delhi / ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ : ನರೇಂದ್ರ ಮೋದಿ

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ : ನರೇಂದ್ರ ಮೋದಿ

Spread the love

ನವದೆಹಲಿ: ನೋಟು ನಿಷೇಧ ನಿರ್ಧಾರದಿಂದ ಕಪ್ಪು ಹಣ ಕಡಿಮೆಯಾಗಿದ್ದು, ತೆರಿಗೆ ಹೆಚ್ಚಳವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಐತಿಹಾಸಿಕಾ ನೋಟು ನಿಷೇಧ ನಿರ್ಧಾರಕ್ಕೆ 4 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಮೋದಿ ಈ ನಿರ್ಧಾರದಿಂದ ಪಾರದರ್ಶಕತೆ ಹೆಚ್ಚಾಗಿದ್ದು ರಾಷ್ಟ್ರೀಯ ಅಭಿವೃದ್ಧಿಗೆ ನೆರವಾಗಿದೆ ಎಂದು ತಿಳಿಸಿದ್ದಾರೆ. ಟ್ವೀಟ್‌ನಲ್ಲೇ ಏನು ಬದಲಾವಣೆಯಾಗಿದೆ ಎಂಬುದನ್ನು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ನೋಟು ನಿಷೇಧದ ಬಳಿಕ ‘ಆಪರೇಷನ್‌ ಕ್ಲೀನ್‌ ಮನಿʼ ಬಳಿಕ ಸ್ವ ಮೌಲ್ಯ ಮಾಪನ ಮಾಡಿ13 ಸಾವಿರ ಕೋಟಿಗೂ ಅಧಿಕ ಹಣ ಪಾವತಿಯಾಗಿದೆ.

3.4 ಲಕ್ಷ ಜನರು 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದರು. ಈ ಮೂಲಕ ಐಟಿ ರಿಟರ್ನ್‌ ಸಲ್ಲಿಸಿದವರ ವಿವರ ಬಹಿರಂಗೊಂಡಿತು. ಇದಾದ ಬಳಿಕ 2.9 ಲಕ್ಷ ಜನ ತೆರಿಗೆಯಾಗಿ 6,531 ಕೋಟಿ ರೂ. ಹಣವನ್ನು ಪಾವತಿ ಮಾಡಿದ್ದಾರೆ.

ನೋಟು ನಿಷೇಧದ ಬಳಿಕ ತೆರಿಗೆ/ ಜಿಡಿಪಿ ಅನುಪಾತ ಹೆಚ್ಚಳವಾಗಿದೆ. 2015-16ರ ಹಣಕಾಸು ವರ್ಷದಲ್ಲಿ 16.41 ಲಕ್ಷ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿತ್ತು 2014-15ಕ್ಕೆ ಹೋಲಿಸಿದರೆ ಶೇ.14.51 ಹೆಚ್ಚಳವಾಗಿತ್ತು. ಇದೇ ಲೆಕ್ಕಾಚಾರವನ್ನು ಪರಿಗಣಿಸಿದ್ದರೆ 2019-20ರ ವೇಳೆಗೆ ದೇಶದಲ್ಲಿ 28.49 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇರಬೇಕಿತ್ತು. ಆದರೆ ಸದ್ಯ 2019-20ರ ಹಣಕಾಸು ವರ್ಷದಲ್ಲಿ 24.20 ಲಕ್ಷ ಕೋಟಿ ರೂ. ಹಣ ಚಲಾವಣೆಯಲ್ಲಿದೆ. ಡಿಜಿಟಲ್‌ ಹಣ ಪಾವತಿ ಹೆಚ್ಚಳದಿಂದಾಗಿ ನೋಟುಗಳ ಸಂಖ್ಯೆ ಕಡಿಮೆಯಾಗಿದೆ.

ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2016ರ ನವೆಂಬರ್ 8ರ ರಾತ್ರಿ ಏಕಾಏಕಿಯಾಗಿ 500ರೂ ಹಾಗೂ 1,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು.


Spread the love

About Laxminews 24x7

Check Also

ಜಾರಕಿಹೊಳಿ ಸಾಮ್ರಾಜ್ಯ ನಿರ್ಮಿಸುವಲ್ಲಿ ಕಲಾಲ ಸಮಾಜದ ಕೊಡುಗೆ ಅಪಾರ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love  ಮೂಡಲಗಿ : ಕಳೆದ ಐದು ದಶಕಗಳ ಹಿಂದೆ ನಮ್ಮ ಕುಟುಂಬ ಸ್ಥಾಪಿಸಿರುವ ಸಾಮ್ರಾಜ್ಯದಲ್ಲಿ ಕಲಾಲ ಸಮಾಜದವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ