Breaking News
Home / Uncategorized / ಮದುವೆ ಸಮಾರಂಭ ದಲ್ಲಿ 200ಕ್ಕು ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್. ಚುನಾವಣೆ ಪ್ರಚಾರಕ್ಕೆ ಸೇರಿದರೆ ಇಲ್ಲವಾ …. ?

ಮದುವೆ ಸಮಾರಂಭ ದಲ್ಲಿ 200ಕ್ಕು ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್. ಚುನಾವಣೆ ಪ್ರಚಾರಕ್ಕೆ ಸೇರಿದರೆ ಇಲ್ಲವಾ …. ?

Spread the love

ಮೈಸೂರು: ಕೊರೊನಾ ಲಾಕ್‍ಡೌನ್ ಶುರುವಾಗಿದ್ದೇ ಬಂತು. ಚಿತ್ರಮಂದಿರ, ಕಲ್ಯಾಣ ಮಂಟಪ, ಸಾರ್ವಜನಿಕ ಸಭೆ- ಸಮಾರಂಭಗಳಿಗೆಲ್ಲ ಆತಂಕ ಶುರುವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಕಲ್ಯಾಣ ಮಂಟಪಗಳ ಹೊಸ ನಿಯಮ ಜಾರಿಯಾಗಿದೆ. ಹೆಚ್ಚು ಜನ ಸೇರಿದರೆ ಕ್ರಿಮಿನಲ್ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಇತ್ತ ಕಲ್ಯಾಣ ಮಂಟಪದ ಮಾಲೀಕರು ಸಹ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ಕೊರೊನಾ ಬಂದ ಮೇಲೆ ಜೀವನ ಶೈಲಿಯೇ ಬದಲಾಗುತ್ತಿದೆ. ಮೊದಲೆಲ್ಲ ಮದುವೆ, ಉಪನಯನ, ಹುಟ್ಟುಹಬ್ಬ, ಬೀಗರೂಟ ಹೀಗೆ ಶುಭ ಸಮಾರಂಭಗಳಿಗೆ ಬಂಧು- ಬಳಗದವರೆಲ್ಲ ಸೇರಿ ಸಂಭ್ರಮಿಸುತ್ತಿದ್ದರು. ಕೊರೊನಾ ಕಾಲಿಟ್ಟ ಬಳಿಕ ಶುಭ ಸಮಾರಂಭಗಳ ಚಿತ್ರಣವೇ ಬದಲಾಗಿ ಹೋಗಿದೆ. ಈ ನಡುವೆ ಮೈಸೂರು ಪೊಲೀಸರು ಕಲ್ಯಾಣ ಮಂಟಪಗಳಿಗೆ ಹೊಸ ಆದೇಶ ಜಾರಿ ಮಾಡಿದ್ದಾರೆ. ಮದುವೆಗಳಿಗೆ ಕೇವಲ 200 ಜನ ಮಾತ್ರ ಇರಬೇಕು.

ಹುಟ್ಟುಹಬ್ಬ, ನಾಮಕರಣದಂತಹ ಸಮಾರಂಭಗಳಿಗೂ ನಿಗದಿಪಡಿಸಿದಷ್ಟು ಜನ ಮಾತ್ರ ಸೇರಬೇಕು. ಹೆಚ್ಚು ಜನರಿದ್ದು ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾದ್ರೆ, ಕ್ರಿಮಿನಲ್ ಕೇಸ್ ಹಾಕ್ತೀವಿ ಅಂತ ಎಚ್ಚರಿಕೆ ನೀಡಿದ್ದಾರೆ.

ಈ ನಿಯಮ ಕಲ್ಯಾಣ ಮಂಟಪಗಳ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಡೀ ಮದುವೆ ಸೀಸನ್ ಕೊರೊನಾ ಲಾಕ್‍ಡೌನ್‍ನಲ್ಲೇ ಕಳೆದು ಹೋಯ್ತು. ಈಗಷ್ಟೆ ಒಂದೋ ಎರಡೋ ದಿನ ಬುಕ್ಕಿಂಗ್ ಸಿಗುತ್ತಿದೆ. ಅದಕ್ಕೂ ನಿಯಮ, ನಿಬಂಧನೆ ವಿಧಿಸಿದ್ರೆ ಜನ ಕಲ್ಯಾಣ ಮಂಟಪಗಳನ್ನೇ ಮರೆತು ಬಿಡ್ತಾರೆ ಎನ್ನುವ ಆತಂಕ ಶುರುವಾಗಿದೆ. ಕೆಲ ಕಲ್ಯಾಣ ಮಂಟಪಗಳ ಮಾಲೀಕರು ಪೊಲೀಸರ ಆದೇಶವನ್ನು ಸ್ವಾಗತಿಸಿದ್ದಾರೆ. ಆದರೆ ಬಹುತೇಕರು ಕ್ರಿಮಿನಲ್ ಪ್ರಕರಣ ದಾಖಲಿಸುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮಳೆ.. ಮಳೆ.. ಆರ್‌ಸಿಬಿ VS ಚೆನ್ನೈ ಮ್ಯಾಚ್ ರದ್ದು?

Spread the love ಮಳೆ.. ಮಳೆ.. ಎಲ್ಲೆಲ್ಲೂ ಮಳೆಯ ಅಬ್ಬರ ಶುರುವಾಗಿದೆ. ಅದರಲ್ಲೂ ಬೆಂಗಳೂರು & ಚೆನ್ನೈ ನಡುವೆ ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ