Breaking News
Home / ಜಿಲ್ಲೆ / ಬೆಂಗಳೂರು / ಹೆಚ್ಚಿದ ಅಗರಬತ್ತಿ ಬೇಡಿಕೆ, ವಿದೇಶಕ್ಕೂ ಪಸರಿಸಿದ ಪರಿಮಳ..!

ಹೆಚ್ಚಿದ ಅಗರಬತ್ತಿ ಬೇಡಿಕೆ, ವಿದೇಶಕ್ಕೂ ಪಸರಿಸಿದ ಪರಿಮಳ..!

Spread the love

ಬೆಂಗಳೂರು, ಡಿ.2- ಭಾರತೀಯ ಅಗರ್‍ಬತ್ತಿ ಉದ್ಯಮವು ದೇಶೀಯ ಮಾರುಕಟ್ಟೆಯಲ್ಲಿ ಕಳೆದ ಎರಡು ವರ್ಷಗಳಿಂದ ಕ್ಷಿಪ್ರಗತಿಯಲ್ಲಿ ರಫ್ತಿನಲ್ಲೂ ಸಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ ಎಂದು ಅಖಿಲ ಭಾರತ ಅಗರ್‍ಬತ್ತಿ ಉತ್ಪಾದಕರ ಸಂಘದ ಅಧ್ಯಕ್ಷ ಅರ್ಜುನ್ ರಂಗಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ಆದಾಯಕ್ಕೆ ಹೋಲಿಸಿದರೆ ಈ ವರ್ಷ ಕೇವಲ 10 ತಿಂಗಳಲ್ಲೇ ದಾಖಲೆಯ ವಹಿವಾಟು ನಡೆದಿದೆ. ಅಮೆರಿಕ, ಇಂಗ್ಲೆಂಡ್, ಮಲೇಷಿಯಾ, ನೈಜೀರಿಯಾ ರಾಷ್ಟ್ರಗಳು ಅಗರ್‍ಬತ್ತಿ ಹಾಗೂ ಸಂಬಂಧಿತ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದರು

ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ತಯಾರಾಗುವ ಅಗರ್‍ಬತ್ತಿಯನ್ನು 150ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡಲಾಗುತ್ತಿದ್ದು, ಸುಗಂಧ ದ್ರವ್ಯ, ಗುಣಮಟ್ಟದ ಪ್ಯಾಕೇಜಿಂಗ್ ಕ್ರಮ ಗ್ರಾಹಕರ ಮನಸೂರೆಗೊಳಿಸುತ್ತಿದೆ ಎಂದರು. ಉತ್ತಮ ಜೀವನಶೈಲಿ, ಚಿಂತನೆಗೆ ಪೂರಕವಾದ ಯೋಗ ಮತ್ತು ಆಯುರ್ವೇದ ಭಾರತೀಯ ಅಗರ್‍ಬತ್ತಿ ಮತ್ತು ಅದ್ಯಾತ್ಮ ಮತ್ತು ಉತ್ತಮ ಜೀವನಶೈಲಿ ಕ್ರಮವು ಏರುತ್ತಿದೆ ಎಂದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ