Breaking News
Home / new delhi / ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಕೊಲೆ : ಆರು ಮಂದಿ ಆರೋಪಿಗಳ ಸೆರೆ

ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಕೊಲೆ : ಆರು ಮಂದಿ ಆರೋಪಿಗಳ ಸೆರೆ

Spread the love

ಟಿ.ನರಸೀಪುರ, -ತಾಲೂಕಿನ ಕೇತುಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬನ್ನೂರು ಪೋಲೀಸರು ಯಶಸ್ವಿಯಾಗಿದ್ದು ಘಟನೆಯ ಸಂಬಂಧ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೇತುಪುರ ಗ್ರಾಮದ ಕೆ.ಆರ್.ಸುಭಾಷ್ (23),ಚಂದನ್(22),ಸಂಜಯ (24),ಪುನೀತ್ (22), ವಿನಯ (30),ರವಿ(24) ಹಾಗು ಚಂದ್ರು(25) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಸೆ.12 ರಂದು ಬನ್ನೂರು ಪೋಲೀಸ್ ಠಾಣಾ ವ್ಯಾಪ್ತಿಯ ಕೇತುಪುರ ಗ್ರಾಮದಲ್ಲಿ ಕೃಷ್ಣೇಗೌಡ ಎಂಬುವರ ಪುತ್ರ ಸಿದ್ದರಾಜು ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಠಾಣೆಗೆ ಮೃತನ ತಾಯಿ ದೂರು ನೀಡಿದ್ದರು. ಆರೋಪಿಗಳ ಪತ್ತೆಗಾಗಿ ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್ ಪಿ ರ್‌ಆ.ಶಿವಕುಮಾರ್, ನಂಜನಗೂಡು ಡಿವೈಎಸ್ ಪಿ ಪ್ರಭಾಕರ್ ರಾವ್ ಸಿಂಧೆ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಆರ್.ಲವ ಹಾಗು ಪಿಎಸ್ ಐ ಪುನೀತ್ ಒಳಗೊಂಡ ತನಿಖಾ ತಂಡ ರಚನೆ ಮಾಡಲಾಗಿತ್ತು.

ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೊಲೆ: ಮೃತ ಸಿದ್ದರಾಜುವಿನ ಪತ್ನಿ ಪೂvಳೊಂದಿಗೆ ಆರೋಪಿ ಸಂಜಯ್ ಅಕ್ರಮ ಸಂಬಂಧ ಇಟ್ಟು ಕೊಂಡಿದ್ದುದೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ.

ಸೆ.10 ರಂದು ಮೃತ ಸಿದ್ದರಾಜುವಿನ ಮನೆ ಮುಂದೆ ಬೈಕ್ ವ್ಹೀಲಿಂಗ್ ವಿಷಯಕ್ಕೆ ಗಲಾಟೆಯಾಗಿದ್ದು, ಸಿದ್ದರಾಜು ಬದುಕಿದ್ದರೆ ತನ್ನ ಅಕ್ರಮ ಸಂಬಂಧಕ್ಕೆ ತೊಂದರೆ ಕೊಡುತ್ತಾನೆಂದು ಸಂಜಯ್ ತನ್ನ ಸ್ನೇಹಿತರೊಂದಿಗೆ ಸಂಚು ರೂಪಿಸಿ ಸಿದ್ದರಾಜುವಿನ ಮನೆಯಲ್ಲಿಯೇ ಸೆ.12 ರ ರಾತ್ರಿ 12.45ರ ಸಮಯದಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು,ಮೋರ್ಟಾ ಬೈಕ್ ಹಾಗು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಪಿಐ ಎಂ.ಆರ್.ಲವ,ಪಿಎಸ್ ಐ ಪುನೀತ್,ಮುಖ್ಯ ಪೇದೆ ಪ್ರಭಾರ್ಕ,ಸತೀಶ್, ಭಾಸ್ಕರ್ ,ರಮೇಶ, ಪಚ್ಚೇಗೌಡ,ನಾರಾಯಣ, ಮಂಜುನಾಥ್,ಆರ್.ಸೋಮಶೇಖರ್, ಮುಕುಂದ,ಸೋಮ ಶೇಖರ್ ,ಪೇದೆಗಳಾದ ಇಸ್ಮಾಯಿಲï, ಜೆ.ಕೆ.ಮಂಜು,ಶಂಕರ,ಗಿರೀಶ್, ನೂರು, ಗೋಪಾಲಸ್ವಾಮಿ,ಚೌಡಯ್ಯ,ಚಾಲಕರಾದ ಪುಟ್ಟಸ್ವಾಮಿ, ಮಹದೇವ,ಟೆಕ್ನಿಕಲ್ ಸೆಲ್ ನ ವಸಂತï,ರೇಖಾ,ಸುನೀತಾ ಭಾಗವಹಿಸಿದ್ದು ಇವರ ಕಾರ್ಯ ಕ್ಷಮತೆಯನ್ನು ಪ್ರಶಂಸಿಸಿ ಮೈಸೂರು ಎಸ್ಪಿ ಸಿ.ಬಿ.ರಿಷ್ಯಂತ್ ನಗದು ಬಹುಮಾನ ಘೋಷಿಸಿz್ದÁರೆ.


Spread the love

About Laxminews 24x7

Check Also

ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Spread the love ಸೋಷಿಯಲ್‌ ಮೀಡಿಯಾ ಕುರಿತು ಹಲವು ನಟ-ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತುಗಳನ್ನು ತಿರುಚುವ, ಥಂಬ್‌ನೈಲ್‌ ಮೂಲಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ