Home / ನವದೆಹಲಿ / BREAKING : ಲಾಕ್‍ಡೌನ್ ಸಡಿಲಿಕೆ ಕುರಿತು ಇಲ್ಲಿದೆ ಸಿಹಿಸುದ್ದಿ..!

BREAKING : ಲಾಕ್‍ಡೌನ್ ಸಡಿಲಿಕೆ ಕುರಿತು ಇಲ್ಲಿದೆ ಸಿಹಿಸುದ್ದಿ..!

Spread the love

ನವದೆಹಲಿ,ಏ.30-ಎರಡನೇ ಅವಧಿಗೆ ವಿಸ್ತರಣೆಯಾಗಿರುವ ದೇಶವ್ಯಾಪಿ ಲಾಕ್‍ಡೌನ್ ಮೇ 3ರಂದು ಕೊನೆಗೊಳ್ಳಲಿದ್ದು, ಮರುದಿನದಿಂದಲೇ ಭಾರತದ ಬಹುತೇಕ ಜಿಲ್ಲೆಗಳು ಅನ್‍ಲಾಕ್ ಆಗುವ ಬಗ್ಗೆ ಕೇಂದ್ರ ಗೃಹಸಚಿವಾಲಯ ಮುನ್ಸೂಚನೆ ನೀಡಿದೆ.

ಆದರೆ ಹಾಟ್‍ಸ್ಟಾಟ್ ಮತ್ತು ರೆಡ್‍ಜೋನ್ ಜಿಲ್ಲೆಗಳಲ್ಲಿ ಮೇ 3ರ ನಂತರವೂ ಕಠಿಣ ನಿರ್ಬಂಧ ಯಥಾಸ್ಥಿತಿಯಲ್ಲೇ ಮುಂದುವರೆಯಲಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಅತಿ ಶೀಘ್ರದಲ್ಲೇ ಹೊಸ ಮತ್ತು ಪರಿಸ್ಕøತ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಲಾಗಿದೆ.

ದೇಶದಲ್ಲಿ ಒಟ್ಟು 739 ಜಿಲ್ಲೆಗಳಿವೆ. ಅನೇಕ ಜಿಲ್ಲೆಗಳಲ್ಲಿ ಲಾಕ್‍ಡೌನ್‍ನಿಂದಾಗಿ ಪರಿಸ್ಥಿತಿ ಸುಧಾರಣೆಯಾಗಿರುವುದರಿಂದ ಶೇ.50ಕ್ಕಿಂತ ಹೆಚ್ಚು ಜಿಲ್ಲೆಗಳು ಲಾಕ್‍ಡೌನ್‍ನಿಂದ ಸಡಿಲವಾಗಲಿದ್ದು, ವಾಣಿಜ್ಯ ಚಟುವಟಿಕೆ ಮತ್ತು ಜನಜೀವನ ಹಂತ ಹಂತವಾಗಿ ಸಹಜ ಸ್ಥಿತಿಗೆ ಬರಲಿದೆ.

ಕೇಂದ್ರ ಸರ್ಕಾರ ಅತಿ ಶೀಘ್ರದಲ್ಲೇ ಹೊಸ ಮತ್ತು ಪರಿಷ್ಕøತ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಲಿದೆ. ಮೇ 4ರಿಂದ ಹಲವು ಜಿಲ್ಲೆಗಳು ಲಾಕ್‍ಡೌನ್‍ನಿಂದ ವಿನಾಯ್ತಿ ಪಡೆಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿರುವುದರಿಂದ ಬಹುತೇಕ ಜಿಲ್ಲೆಗಳು ಸಹಜ ಸ್ಥಿತಿಯತ್ತ ಮರಳುವ ಮುನ್ಸೂಚನೆ ಲಭಿಸಿದೆ.

ಆದರೆ ಸುಮಾರು ಶೇ. 40ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಯಥಾಸ್ಥಿತಿಯಲ್ಲಿ ಮುಂದುವರೆಯುವುದರಿಂದ ಹಾಗೂ ಹಾಟ್‍ಸ್ಪಾಟ್/ರೆಡ್‍ಜೋನ್ ಎಂದು ಪರಿಗಣಿತವಾಗಿರುವ ಪ್ರದೇಶಗಳಲ್ಲಿ ಮೇ3ರ ನಂತರವು ಕಠಿಣ ನಿರ್ಬಂಧ ಮುಂದುವರೆಸುವ ಬಗ್ಗೆ ಗೃಹ ಸಚಿವಾಲಯ ಸ್ಪಷ್ಟ ಸೂಚನೆ ನೀಡಿದೆ.

ಒಂದು ಮತ್ತು 2ನೇ ಹಂತದ ಲಾಕ್‍ಡೌನ್‍ನಲ್ಲಿ ದೇಶದ ಸುಮಾರು ಅರ್ಧದಷ್ಟು ಜಿಲ್ಲೆಗಳಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ. ಈ ಲಾಭವನ್ನು ಜನರಿಗೆ ನೀಡುವ ಉದ್ದೇಶದಿಂದ ಲಾಕ್‍ಡೌನ್‍ನನ್ನು ಕೆಲವು ನೀತಿ ನಿಯಮಗಳಿಗೆ ಒಳಪಟ್ಟು ಸಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಬಳ್ಳ ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.

ಈ ಸಂಬಂಧ ಹೊಸ ಮತ್ತು ಪರಿಷ್ಕøತ ಮಾರ್ಗದರ್ಶಿ ಸಿದ್ದವಾಗಿದ್ದು, ಅತಿ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಲಾಕ್‍ಡೌನ್ ಸಡಿಲಿಸಿದ ಮಾತ್ರಕ್ಕೆ ಈ ಜಿಲ್ಲೆಗಳು ಕೊರೊನಾ ಸೋಂಕು ಆತಂಕದಿಂದ ಪೂರ್ಣವಾಗಿ ಮುಕ್ತವಾಗಿ ಎಂದು ಭಾವಿಸಬೇಕಿಲ್ಲ.

ಈಗ ಜಾರಿಯಲ್ಲಿರುವ ಸಾಮಾಜಿಕ ಅಂತಹ ಮಹತ್ವ ಬಳಕೆ ಮತ್ತು ಕೆಲವು ನಿರ್ಬಂಧಗಳು ಮೇ 4ರ ನಂತರವು ಮುಂದುವರೆಯಲಿದೆ ಎಂದು ಗೃಹಸಚಿವಾಲಯ ತಿಳಿಸಿದೆ.


Spread the love

About Laxminews 24x7

Check Also

‘ಅಂಬರೀಶ್ ಆಶೀರ್ವಾದದಿಂದ ಮಗನ ಸಿನಿಮಾ ಬಿಡುಗಡೆ’: ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ

Spread the love ಮಂಡ್ಯ: ಇಂದು ಕನ್ನಡಿಗರ ಮೆಚ್ಚಿನ ನಟ ಅಂಬರೀಶ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ, ಮಂಡ್ಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ