ಬೆಂಗಳೂರು, ಏ.30- ಎಪಿಎಂಸಿಯ 50 ಕೋಟಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿರುವ ಸಿಸಿಬಿ ಪೆÇಲೀಸರು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 12 ಆರೋಪಿಗಳ ವಿರುದ್ಧ ಸುಮಾರು 1400 ಪುಟಗಳ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಪ್ರಮುಖ ಆರೋಪಿ ಸಿಂಡಿಕೆಟ್ ಬ್ಯಾಂಕ್‍ನ ಸಹಾಯಕ ವ್ಯವಸ್ಥಾಪಕ ಸಿದ್ದಲಿಂಗಯ್ಯ ಹಾಗೂ ನಿವೃತ್ತ ಖಜಾನೆ ಅಧಿಕಾರಿ ಲಕ್ಷ್ಮಯ್ಯ ಸೇರಿದಂತೆ 12 ಮಂದಿ ಆರೋಪಿಗಳಲ್ಲಿ ಕೆಲವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ
ಕೃಷಿ ಉತ್ಪನ್ನ ಮಾರುಕಟ್ಟೆ ಮಹಾಮಂಡಳದ 50 ಕೋಟಿ ಆವರ್ತ ನಿಧಿ ಡಿಪಾಸಿಟ್ ಮಾಡುವ ಸಂಬಂಧ ವಂಚನೆ ನಡೆದಿದ್ದು, ಎಪಿಎಂಸಿ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ಕಮರ್ಷಿಯಲ್ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದರು.ಈ ದೂರನ್ನು ಸಿಸಿಬಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಸಿಬಿಯವರು ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದಾರೆ.
ಎಪಿಎಂಸಿಯ ಆವರ್ತನಿಧಿಯನ್ನು ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಇಡಲಾಗಿತ್ತು. 48 ಕೋಟಿ ರೂ.ಗಳನ್ನು ಅಕ್ರಮವಾಗಿ ವಂಚಿಸಲಾಗಿತ್ತು.
ಇದರಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿತ್ತು. ಪ್ರಕರಣವನ್ನು ಗೃಹ ಸಚಿವರು ಸಿಸಿಬಿಗೆ ವಹಿಸಿದ್ದರು.
ಹಗರಣ ಕುರಿತಂತೆ ಸಮಗ್ರ ತನಿಖೆ ನಡೆಸಿರುವ ತನಿಖಾಧಿಕಾರಿ ಪುನಿತ್ ಅವರು 1400 ಪುಟಗಳ ಪ್ರಾಥಮಿಕ ದೋಷಾರೋಪಣಾ ಪಟ್ಟಿಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.