ನವದೆಹಲಿ: ಬೈಡೆನ್ ಅಮೆರಿಕ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಅಮೆರಿಕಾ ಪ್ರವಾಸ ಕೈಗೊಳ್ತಿದ್ದಾರೆ. ಇಂದು ಅಮೆರಿಕಾಕ್ಕೆ ಹೊರಡಲಿರುವ ಮೋದಿ, ಕ್ವಾಡ್ ಶೃಂಗ ಸಮ್ಮೇಳನ, ವಿಶ್ವಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಜೋ ಬೈಡೆನ್ ಜತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಹೀಗಾಗಿ ಮೋದಿ-ಬೈಡೆನ್ ಭೇಟಿ ಮಹತ್ವ ಪಡೆದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಮಾಹಿತಿ ನೀಡಿರುವ ಪ್ರಧಾನಿ ಮೋದಿ..ಭೇಟಿ ವೇಳೆ ಗ್ಲೋಬಲ್ ಪಾರ್ಟನರ್ಶಿಪ್ ಬಗ್ಗೆ ಸಮಗ್ರವಾಗಿ ಅಧ್ಯಕ್ಷ ಜೋ ಬೈಡನ್ ಜೊತೆ ಚರ್ಚಿಸುತ್ತೇನೆ. ಪರಸ್ಪರ ಆಸಕ್ತಿ ವಿಷಯಗಳ ಜೊತೆಗೆ ಗ್ಲೋಬಲ್ ಸಮಸ್ಯೆ ಮತ್ತು ಪ್ರಾದೇಶಿಕ ವಿಚಾರಗಳ ಬಗ್ಗೆ ವಿನಿಮಯ ಮಾಡಿಕೊಳ್ಳುವುದು.
ಜೊತೆಗೆ ಯುಎಸ್ಎ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಅವರ ಭೇಟಿಯನ್ನೂ ಕೂಡ ಎದುರು ನೋಡುತ್ತಿದ್ದೇನೆ. ಹ್ಯಾರಿಸ್ ಜೊತೆ ಜಾಗತಿಕ ವಿಚಾರಗಳು ಮತ್ತು ಎರಡು ದೇಶಗಳ ಪರಸ್ಪರ ಸಹಕಾರದ ಬಗ್ಗೆ ಚರ್ಚೆಯಾಗಲಿದೆ.
ಜೊತೆಗೆ ಅಧ್ಯಕ್ಷ ಜೋ ಬೈಡನ್ ನೇತೃತ್ವದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದೇನೆ. ಇದೇ ಮೊದಲ ಬಾರಿಗೆ ಕ್ವಾಡ್ ಲೀಡರ್ಗಳ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ತಿಳಿಸಿದ್ದಾರೆ.