Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ಲಾಕ್‍ಡೌನ್ ಯಶಸ್ವಿಗೊಳಿಸಲು ಮೋದಿಗೆ ಚಿಕ್ಕೋಡಿ ಗೃಹಿಣಿ ಪತ್ರ

ಲಾಕ್‍ಡೌನ್ ಯಶಸ್ವಿಗೊಳಿಸಲು ಮೋದಿಗೆ ಚಿಕ್ಕೋಡಿ ಗೃಹಿಣಿ ಪತ್ರ

Spread the love

ಚಿಕ್ಕೋಡಿ(ಬೆಳಗಾವಿ): ಲಾಕ್ ಡೌನ್ ಯಶಸ್ವಿಗೊಳಿಸಲು ಗೃಹಿಣಿಯೊಬ್ಬರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪತ್ರ ಬರೆದಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಗೃಹಿಣಿ ದೀಪಾ ಬಿ.ಕೆ, ಪ್ರಧಾನಿಗೆ ಪತ್ರ ಬರೆದು ರಾಜ್ಯದ ಎಲ್ಲ ಇಲಾಖೆಗಳನ್ನ ಲಾಕ್ ಡೌನ್ ಸೇವೆಗೆ ಬಳಸಿಕೊಳ್ಳಬೇಕು. ಕೇವಲ 5 ರಿಂದ 6 ಇಲಾಖೆಗಳು ಮಾತ್ರ ಲಾಕ್ ಡೌನ್ ಇದ್ದರೂ ಸೇವೆ ಸಲ್ಲಿಸುತ್ತಿವೆ. ಬಾಕಿ ಉಳಿದಿರುವ 50ಕ್ಕೂ ಹೆಚ್ಚು ಇಲಾಖೆಗಳ ನೌಕರರ ಸದ್ಬಳಕೆ ಮಾಡಿಕೊಂಡು ಕೊರೊನಾ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖವಾಗಿ ಲಾಕ್ ಡೌನ್ ಯಶಸ್ವಿಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಕ, ವೈದ್ಯಕೀಯ ಸೇವೆ ಹಾಗೂ ಪೊಲೀಸರು ಇಲ್ಲವಾದಲ್ಲಿ ಎನ್‍ಸಿಸಿ ಸೇವೆಯನ್ನ ಬಳಸಿಕೊಳ್ಳುವಂತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.

ಅಗತ್ಯ ವಸ್ತುಗಳ ಹೆಸರಲ್ಲಿ ಜನ ಹೊರಗೆ ಬಾರದಂತೆ ಆಹಾರ ಇಲಾಖೆಯ ಮೂಲಕ ಆಹಾರ ಪೂರೈಕೆಗೆ ಮಹಿಳೆ ಮನವಿ ಮಾಡಿದ್ದು ತುರ್ತು ಸೇವೆಗಳಿಗಾಗಿ ಮಾತ್ರ ಇಂಧನ ಸೇವೆ ನೀಡಬೇಕು. ಅನಗತ್ಯ ರಸ್ತೆಗೆ ಇಳಿದವರ ವಾಹನ ಸೀಜ್ ಮಾಡಿ ಅವುಗಳನ್ನು ತುರ್ತು ಸೇವೆಗೆ ಬಳಸಿಕೊಳ್ಳಬೇಕು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಲಾಕ್ ಡೌನ್ ಯಶಸ್ವಿ ಮಾಡಲು ಚಿಕ್ಕೋಡಿಯ ಗೃಹೀಣಿ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕ ವಿಧಾನಸಭಾ ಚುನಾವಣೆ : ಮೇ. 10 ರಂದು ಎಲ್ಲಾ ನೌಕರರಿಗೆ ವೇತನ ಸಹಿತ ರಜೆ ಘೋಷಣೆ

Spread the love ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ 2023ಕ್ಕೆ ( Karnataka Assembly Election 2023 ) ದಿನಾಂಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ