Breaking News
Home / Uncategorized / ಬೆಳಗಾವಿ: ಭಾರಿ ಮಳೆಗೆ ನಾಲ್ಕು ಸೇತುವೆಗಳು ಮುಳುಗಡೆ, ಸಂಚಾರ್ ಬಂದ್

ಬೆಳಗಾವಿ: ಭಾರಿ ಮಳೆಗೆ ನಾಲ್ಕು ಸೇತುವೆಗಳು ಮುಳುಗಡೆ, ಸಂಚಾರ್ ಬಂದ್

Spread the love

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೆಳಹಂತದ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಎರಡು ಬದಿಗೆ ಪೊಲೀಸರು ಬ್ಯಾರಿಕೇಡ್ ಹಾಕಿ ಜನರ ಓಡಾಟವನ್ನು ಬಂದ್ ಮಾಡಿದ್ದಾರೆ. ನಿಪ್ಪಾಣಿ ತಾಲೂಕಿನ ದೂಧಗಂಗಾ ನದಿಗೆ ಕಟ್ಟಲಾದ ಕಾರದಗಾ-ಭೋಜ್, ವೇದಗಂಗಾ ನದಿಯಿಂದ ಭೋಜವಾಡಿ ಕುನ್ನೂರ-ಸಿದ್ನಾಳ ಅಕ್ಕೋಳ ಸೇತುವೆ ಹಾಗೂ ಜತ್ರಾಟ-ಭೀಮಶಿ‌ ಸೇತುವೆಗಳು ಜಲಾವೃತವಾಗಿವೆ. ಸದ್ಯ ಮಹಾರಾಷ್ಟ್ರ ಘಟ್ಟ ಪ್ರದೇಶ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕೃಷ್ಣಾ ನದಿತೀರದ ಜನರ ಆತಂಕಕ್ಕೆ ಕಾರಣವಾಗಿದೆ.

ಕಾಳಜಿ ಕೇಂದ್ರ

 

ಬೆಳಗಾವಿ ನಗರದಲ್ಲೂ ಮಳೆರಾಯನ ಆರ್ಭಟಕ್ಕೆ ಐದಕ್ಕೂ ಹೆಚ್ಚು‌ ಮನೆಗಳು ನೆಲಸಮವಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ನಗರ ಪ್ರದೇಶದಲ್ಲಿ ಕಾಳಜಿ ಕೇಂದ್ರ ತೆರೆದಿದೆ.


Spread the love

About Laxminews 24x7

Check Also

ಮತದಾನ ಮೊದಲು ನಂತರ ಮದುವೆ: ಓಡಿ ಬಂದು ಮತ ಹಾಕಿದ ವರ-ವಧು

Spread the love ಚಾಮರಾಜನಗರ ಏಪ್ರಿಲ್ 26: ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ವರನೊಬ್ಬ ಓಡಿ ಬಂದು ಮತ ಚಲಾಯಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ