Breaking News

ಮಳೆಗೆ ಮನೆ ಗೋಡೆ‌ ಕುಸಿತ: ತಾಯಿ ಸಾವು, ಮಗ ಆಸ್ಪತ್ರೆಗೆ ದಾಖಲು

Spread the love

ಶಿವಮೊಗ್ಗ: ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿತ ಉಂಟಾಗಿ ಮನೆಯಲ್ಲಿದ್ದ ತಾಯಿ ಸಾವನ್ನಪ್ಪಿ, ಮಗ ಗಾಯಗೊಂಡಿರುವ ಘಟನೆ ಭದ್ರಾವತಿ ತಾಲೂಕಿನ‌ ಕಾವಗೊಂಡನಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಸುಜಾತ(60) ಮೃತಪಟ್ಟಿದ್ದು, ಇವರ ಮಗ ಕೃಷ್ಣಮೂರ್ತಿ(40) ಅವರ ಕಾಲಿಗೆ ಗಾಯವಾಗಿದ್ದು,ಇವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ 9:30 ರ ಹೊತ್ತಿಗೆ ಟಿವಿ ನೋಡುತ್ತಿರುವಾಗ ಏಕಾಏಕಿ ಮನೆಯ ಗೋಡೆ ಕುಸಿತವಾಗಿ ಇವರ ಮೇಲೆ ಬಿದ್ದಿದೆ. ಸ್ಥಳಕ್ಕೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.


Spread the love

About Laxminews 24x7

Check Also

ಶಿವಮೊಗ್ಗದಲ್ಲಿ ಹಾವು ಕಡಿದು 2 ವರ್ಷದ ಮಗು ಸಾವು

Spread the loveಶಿವಮೊಗ್ಗ: ಹಾವು ಕಡಿದು  2 ವರ್ಷದ ಮಗು  ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಸಾಗರ ಪಟ್ಟಣದ ಎಸ್.ಎಸ್ ನಗರದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ