Breaking News
Home / ರಾಜಕೀಯ / ದಿನಗೂಲಿ ಕಾರ್ಮಿಕರೂ ತೆರಿಗೆ ಕಟ್ಟುತ್ತಾರೆ’; ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ​ ತುಂಬದ ಧನುಷ್​ಗೆ ಕೋರ್ಟ್​​ ಛೀಮಾರಿ

ದಿನಗೂಲಿ ಕಾರ್ಮಿಕರೂ ತೆರಿಗೆ ಕಟ್ಟುತ್ತಾರೆ’; ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ​ ತುಂಬದ ಧನುಷ್​ಗೆ ಕೋರ್ಟ್​​ ಛೀಮಾರಿ

Spread the love

ತೆರಿಗೆ ತುಂಬದೇ ಐಷಾರಾಮಿ ಕಾರನ್ನು ಓಡಿಸಿದ ತಮಿಳು ನಟ ದಳಪತಿ ವಿಜಯ್​ಗೆ ಕೋರ್ಟ್​ ಛೀಮಾರಿ ಹಾಕಿತ್ತು. ಈಗ ನಟ ಧನುಷ್​ ಸರದಿ. ಅವರು ಆಮದು ಮಾಡಿಕೊಂಡ ಐಷಾರಾಮಿ ರೋಲ್ಸ್​ ರಾಯ್ಸ್​ ಕಾರಿಗೆ ತೆರಿಗೆ ವಿನಾಯಿತಿ ನೀಡುವಂತೆ 2015ರಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ಹಿಂಪಡೆಯಲು ಕೋರ್ಟ್​ ನಿರಾಕರಿಸಿದೆ. ಅಲ್ಲದೆ, ಧನುಷ್​ಗೆ ಈ ವಿಚಾರದಲ್ಲಿ ಕಿವಿ ಮಾತು ಕೂಡ ಹೇಳಿದೆ.

2015ರಲ್ಲಿ ಧನುಷ್​ ರೋಲ್ಸ್​ ರಾಯ್ಸ್​ ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಇದಕ್ಕೆ ಅವರು 60 ಲಕ್ಷ ರೂಪಾಯಿ ಎಂಟ್ರಿ ಟ್ಯಾಕ್ಸ್​ ಪಾವತಿ ಮಾಡಬೇಕಿತ್ತು. ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ನ ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್​ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಇಂದು ಧನುಷ್​ ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ಕೋರ್ಟ್​ಗೆ ಧನುಷ್​ ಪರ ವಕೀಲರು ಮನವಿ ಒಂದನ್ನು ಮಾಡಿಕೊಂಡರು. ‘ಧನುಷ್​ ಶೇ.50 ತೆರಿಗೆಯನ್ನು ತುಂಬಿದ್ದಾರೆ. ಉಳಿದ ತೆರಿಗೆಯನ್ನು ಪಾವತಿಸೋಕೆ ಅವರು ಇಚ್ಛಿಸಿದ್ದಾರೆ. ಹೀಗಾಗಿ, ಅರ್ಜಿ ಹಿಂಪಡೆಯೋಕೆ ಅವಕಾಶ ನೀಡಬೇಕು’ ಎಂದು ​ ವಕೀಲರು ಕೋರಿದರು. ಆದರೆ, ಕೋರ್ಟ್​ ಇದನ್ನು ನಿರಾಕರಿಸಿದೆ. ಅಲ್ಲದೆ, ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಕೂಡ ನೀಡಿದೆ.

‘ನಿಮ್ಮ ಉದ್ದೇಶ ನಿಜವಾಗಿದ್ದರೆ ನೀವು ತೆರಿಗೆಯನ್ನು ಈಗಾಗಲೇ ಪಾವತಿಸುತ್ತಿದ್ದಿರಿ. ಈಗ ಅರ್ಜಿ ವಿಚಾರಣೆಗೆ ಬಂದಾಗ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡುತ್ತಿದ್ದೀರಿ’ ಎಂದು ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್ ಮಾತು ಆರಂಭಿಸಿದ್ದಾರೆ.

‘ತೆರಿಗೆದಾರರ ಹಣವನ್ನು ಬಳಸಿಕೊಂಡು ನೀವು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಓಡಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್‌ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ’ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಎಸ್​.ಎಂ. ಸುಬ್ರಮಣಿಯಮ್ ಅವರು ಧನುಷ್​ಗೆ ಛೀಮಾರಿ ಹಾಕಿದರು. ಧನುಷ್​ ಪರ ವಕೀಲರು ಆಗಸ್ಟ್​ 9ರ ಒಳಗೆ ಬಾಕಿ ಇರುವ ತೆರಿಗೆ ಪಾವತಿ ಮಾಡುವುದಾಗಿ ಕೋರ್ಟ್​​ಗೆ ಭರವಸೆ ನೀಡಿದ್ದಾರೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ