Breaking News
Home / Uncategorized / ಚಿಕನ್ ಗೆ ಫುಲ್ ಡಿಮ್ಯಾಂಡ್; ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಬೇಡಿಕೆಯಷ್ಟು ಕೋಳಿ

ಚಿಕನ್ ಗೆ ಫುಲ್ ಡಿಮ್ಯಾಂಡ್; ದುಡ್ಡು ಕೊಟ್ಟರೂ ಸಿಗುತ್ತಿಲ್ಲ ಬೇಡಿಕೆಯಷ್ಟು ಕೋಳಿ

Spread the love

ಬೆಂಗಳೂರು (ಮೇ 21); ಕೊರೊನೋ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ಲಾಕ್ ಡೌನ್ ಆಗಿ ಸಾಕಷ್ಟು ಉದ್ಯಮಗಳು ಸಂಕಷ್ಟಕ್ಕೀಡಾಗಿದ್ದರೆ, ಮಾಂಸಾಹಾರ ವ್ಯಾಪಾರ ಮಾತ್ರ ಇಂದಿಗೂ ಫುಲ್ ಡಿಮ್ಯಾಂಡ್ ಉಳಿಸಿಕೊಂಡಿದೆ. ಪ್ರಸ್ತುತ ಚಿಕನ್‌ಗೆ ಎಲ್ಲಿಲ್ಲಿದ ಬೇಡಿಕೆಯಿದ್ದು, ಚಿಕನ್ ವ್ಯಾಪಾರಿಗಳಿಗೆ ಮುಂಗಡ ದುಡ್ಡು ಕೊಟ್ಟರೂ ಬೇಡಿಕೆಯಷ್ಟು ಚಿಕನ್ ಸಿಗುತ್ತಿಲ್ಲ. ಪರಿಣಾಮ ಚಿಕನ್ ದರವೂ ಏರುತ್ತಿದೆ.

ಕಳೆದೆರಡು ತಿಂಗಳ‌ ಹಿಂದೆ ಚಿಕನ್ ವ್ಯಾಪಾರ ಸಾಕಷ್ಟು ಕಳೆಗುಂದಿತ್ತು‌. ಚಿಕನ್ ತಿಂದರೆ ಕೊರೋನಾ ಬರುತ್ತೆ ಎಂಬ ಭಯಕ್ಕೆ ಚಿಕನ್ ವ್ಯಾಪಾರ ಫುಲ್ ಡಲ್ ಆಗಿತ್ತು. ಕೇಜಿಗೆ 50 ರಿಂದ 100 ರೂ ಇದ್ದರೂ ಕೇಳುವವರಿದ್ದಿಲ್ಲ. ಉಚಿತವಾಗಿ ಕೋಳಿ‌ ಕೊಡ್ತೀವಿ ಎಂದ್ರೂ ತೆಗೆದುಕೊಳ್ಳಲು ಹಿಂದುಮುಂದು ನೋಡುತ್ತಿದ್ದರು. ಚಿಕನ್ ‌ಮೇಳ ಮಾಡಿ ಕೊರೋನಾದಿಂದಾಗಲಿ, ಹಕ್ಕಿ ಜ್ವರದಿಂದಾಗಲಿ ಚಿಕನ್‌ ತಿಂದರೆ ರೋಗ ಬರುವುದಿಲ್ಲ ಎಂದು ಜಾಗೃತಿ ಮೂಡಿಸಲಾಯಿತು.

ಇಷ್ಟಾದ ಮೇಲೂ ಹೇಳಿಕೊಳ್ಳುವ ರೀತಿ ಕುಕ್ಕುಟೋದ್ಯಮ ಚೇತರಿಕೆ ಕಂಡಿಲ್ಲ. ಯಾವಾಗ ಮಟನ್ ರೇಟು ಗಗನಕ್ಕೇರಿತೋ ಆಗ ಚಿಕನ್ ವ್ಯಾಪಾವೂ ಹೆಚ್ಚಾಗ ತೊಡಗಿತು. ಇದೇ ಸಂದರ್ಭದಲ್ಲಿ ಚಿಕನ್‌ ತಿನ್ನುವುದರಿಂದ ಕೊರೋನಾ‌, ಹಕ್ಕಿ ಜ್ವರ ಬರುವುದಿಲ್ಲ ಎಂಬುದು ಜನರಲ್ಲಿ ಖಚಿತವಾಗುತ್ತಿದ್ದಂತೆ ಚಿಕನ್‌ ಬೇಡಿಕೆ ಹೆಚ್ಚಾಯಿತು. ಇದೀಗ‌ ಚಿಕನ್ ದರ ಕೊರೋನಾ ಮುಂಚಿತವಾಗಿದ್ದ ದರಕ್ಕಿಂತ ಶೇ.40ರಷ್ಟು ಹೆಚ್ಚಳ ಕಂಡಿದೆ.

ಪ್ರಸ್ತುತ 250 ರೂಪಾಯಿಗೆ ಒಂದು ಕೇಜಿ ಚಿಕನ್ ಮಾರಾಟವಾಗುತ್ತಿದೆ. ಕಳೆದ ವಾರ ಇದರ ದರ 220 ರೂ. ಇದ್ರೆ ಕಳೆದ‌ ತಿಂಗಳು 150-200 ರವರೆಗೆ ಕೇಜಿ ದರವಿತ್ತು. ಇದೀಗ ಚಿಕನ್ ಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಕೋಳಿ ಪೂರೈಕೆಯಾಗುತ್ತಿಲ್ಲ. ಮಹಾನಗರಿ ಬೆಂಗಳೂರಿನಲ್ಲಿ ಚಿಕನ್ ದರ ಇನ್ನೊಂದು ತಿಂಗಳು ಇದೇ ರೀತಿ ಇರಲಿದ್ದು, ಇನ್ನಷ್ಟು ಹೆಚ್ಚಳವಾದ್ರೂ ಅಚ್ಚರಿಯಿಲ್ಲ.

ಏಕೆಂದರೆ ಕೋಳಿ ಫಾರಂ ಸಾಗಾಣಿಕೆ ಕಡಿಮೆಯಾಗುತ್ತಿದೆ. ಕೊರೊನೋದಿಂದ ಎರಡು ತಿಂಗಳು‌ ಲಾಕ್ ಡೌನ್ ಆಗಿ ಕೋಳಿ ಫಾರಂ‌ ನಡೆಸುವವರು ಸಂಕಷ್ಟದಲ್ಲಿದ್ದರು‌. ಕಾರ್ಮಿಕರು ಸಿಗದೇ ಕೋಳಿ‌ ಉತ್ಪಾದನೆಯೂ ಶೇ.55ರಷ್ಟು ಕಡಿಮೆಯಾಗಿತ್ತು. ಇದರಿಂದ ಚಿಕನ್ ದರ ಸದ್ಯ ಬೆಂಗಳೂರಿನಲ್ಲಿ 250 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಹೋಲ್‌ ಸೇಲ್‌ನಲ್ಲಿ 200-230ರ ವರೆಗೆ ಮಾರಾಟವಾಗುತ್ತಿದೆ.

ಕೋಳಿ‌ ಉತ್ಪಾದನೆ ಕಡಿತ;ಕೊರೊನೋ ಸಂಕಷ್ಟದಿಂದ ಚಿಕನ್ ದರ ಹೆಚ್ಚಾಗಿ, ಸದ್ಯ ಬೇಡಿಕೆಯೇನೋ ಇದೆ. ಆದರೆ ಅದಕ್ಕೆ ತಕ್ಕಂತೆ ಕೋಳಿ ಪೂರೈಕೆಯಾಗುತ್ತಿಲ್ಲ. ಬೆಂಗಳೂರಿಗೆ ಸುತ್ತಲ ಜಿಲ್ಲೆಗಳಿಂದ ಕೋಳಿ ಪೂರೈಕೆಯಾಗುತ್ತಿತ್ತು. ಅದರಲ್ಲೂ ಚಿತ್ರದುರ್ಗ ಜಿಲ್ಲೆಯಲ್ಲಿರುವ ಕೋಳಿ ಫೌಲ್ಟ್ರಿಗಳಿಂದ ಹೆಚ್ಚು ಬೆಂಗಳೂರಿಗೆ ಪೂರೈಕೆಯಾಗುತ್ತಿತ್ತು. ಆದರೆ ಕಳೆದೆರಡು ತಿಂಗಳ‌ ಲಾಕ್ ಡೌನ್‌ನಿಂದ ಪೌಲ್ಟ್ರಿ ಸಮರ್ಕವಾಗಿ ನಡೆಸಲು ಆಗಿಲ್ಲ.

ಮೊದಲೆಲ್ಲ ಕೋಳಿ ಪೂರೈಕೆಯಾದ‌ ಮೇಲೆ ದುಡ್ಡು ಕೊಡುತ್ತಿದ್ದೆವು. ಆದರೀಗ ಮುಂಗಡವಾಗಿ ದುಡ್ಡು ಕೊಟ್ಟರೂ ಬೇಡಿಕೆಯಷ್ಟು ಉತ್ತಮ ಕೋಳಿಗಳು ಸಿಗುತ್ತಿಲ್ಲ ಎಂದು ಹೇಳುತ್ತಾರೆ ಕುಕ್ಕುಟೋದ್ಯಮ ಉದ್ಯಮಿ, ಕೋಳಿ ವ್ಯಾಪಾರಿ ಬೆಂಗಳೂರಿನ ರಾಕೇಶ್.

ಮೊದಲೆಲ್ಲ ಚಿಕನ್ ಕಡಿಮೆ‌ ದರಕ್ಕೆ ಮಾರಾಟವಾದ್ರೂ ಕೇಳೋರಿದ್ದಿಲ್ಲ. ಇದೀಗ ಚಿಕನ್ ತಿನ್ನೊದ್ರಿಂದ ಯಾವುದೇ‌ ಭೀತಿಯಿಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಬ್ಯುಸಿನೆಸ್ ಜೋರಿದೆ. ಸದ್ಯ 250 ಕೇಜಿಗೆ ಚಿಕನ್‌ಮಾರಾಟ ಮಾಡುತ್ತಿದ್ದೇವೆ. ಇನ್ನೊಂದು ತಿಂಗಳು ದರ‌ ಕಡಿಮೆಯಾಗೋದು ಡೌಟು. ಇನ್ನು ಹೆಚ್ಚಾಗುತ್ತೆ ಎನ್ನುತ್ತಾರೆ ಬೆಂಗಳೂರಿನ ಗುರುಗುಂಟೆಪಾಳ್ಯದ ಚಿಕನ್ ವ್ಯಾಪಾರಿ ಕುಮಾರ್.


Spread the love

About Laxminews 24x7

Check Also

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

Spread the love ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ