ಬೆಂಗಳೂರು: ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದ್ದು, ರಾಜ್ಯ ಸರ್ಕಾರ ಕೆಲವು ನಿಯಮಗಳನ್ನು ಘೋಷಣೆ ಮಾಡಿದೆ.
ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ ಎಂದು ತಿಳಿಸಿದ ಸರ್ಕಾರ ಭಾನುವಾರದಂದು ಯಾವುದೇ ವ್ಯಾಪಾರ, ವಹಿವಾಟು ನಡೆಯಲ್ಲ.
ಭಾನುವಾರದಂದು ಮದ್ಯ ಮಾರಾಟ ಕೂಡ ಮಾಡುವಂತಿಲ್ಲ. ಹೀಗಾಗಿ ವಾರದ 6 ದಿನಗಳ ಕಾಲ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಅದೂ ಸಹ ಪಾರ್ಸೆಲ್ ಮಾತ್ರ ಅನುಮತಿ ಇರೋದು. 6 ದಿನ ಮಾರಾಟ ಮಾಡಿದರೂ, ಭಾನುವಾರ ಮಾತ್ರ ಮದ್ಯ ಮಾರಾಟಕ್ಕೂ ರಜೆ ಇರುತ್ತದೆ.