Breaking News
Home / Uncategorized / ನಾಲ್ಕು ದಿನ ಹಸುಗೂಸಿಗೆ ವಿಷ ಕೊಟ್ಟು ಕೊಂದ ತಂದೆ, ಅಜ್ಜಿ

ನಾಲ್ಕು ದಿನ ಹಸುಗೂಸಿಗೆ ವಿಷ ಕೊಟ್ಟು ಕೊಂದ ತಂದೆ, ಅಜ್ಜಿ

Spread the love

ಚೆನ್ನೈ: ಮತ್ತೆ ಹೆಣ್ಣು ಮಗುವಾಯಿತು ಎಂದು ನಾಲ್ಕು ದಿನದ ಹಸುಗೂಸನ್ನು ಸ್ವಂತ ತಂದೆ ಮತ್ತು ಅಜ್ಜಿ ಸೇರಿಕೊಂಡು ಕೊಲೆ ಮಾಡಿರುವ ಅಮಾನವೀಯ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಜಿಲ್ಲೆಯ ಸೊಲವಂದನ್ ಪಂಚಾಯತ್ ಪಟ್ಟಣದಲ್ಲಿ ಮಗುವಿನ ತಾಯಿ ಚಿತ್ರಾ ಮನೆಯಲ್ಲಿ ಇಲ್ಲದಿದ್ದಾಗ ಕೊಲೆ ಮಾಡಲಾಗಿದೆ. ಇದೀಗ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಗಳನ್ನು ತವಾಮಣಿ (33) ಮತ್ತು ಆತನ ತಾಯಿ ಪಾಂಡಿಯಮ್ಮಲ್ (57) ಎಂದು ಗುರುತಿಸಲಾಗಿದೆ.

ಕುಟುಂಬದಲ್ಲಿ ನಾಲ್ಕನೇ ಬಾರಿಯೂ ಹೆಣ್ಣು ಮಗುವಾಗಿದ್ದಕ್ಕೆ ಆರೋಪಿಗಳಾದ ತವಾಮಣಿ ಮತ್ತು ಆತನ ತಾಯಿ ಪಾಂಡಿಯಮ್ಮಲ್ ಬೇಸರಗೊಂಡಿದ್ದರು. ಹೀಗಾಗಿ ತಾಯಿ ಮನೆಯಲ್ಲಿ ಇಲ್ಲದಿದ್ದಾಗ ನಾಲ್ಕು ದಿನದ ಕಂದಮ್ಮನಿಗೆ ವಿಷ ನೀಡಿ ಕೊಲೆ ಮಾಡಿದ್ದಾರೆ. ನಂತರ ವೈಗೈ ನದಿಯ ಬಳಿ ಸಮಾಧಿ ಮಾಡಿದ್ದಾರೆ.

ಸ್ಥಳೀಯರು ನೀಡಿದ ದೂರಿನ ಆಧಾರ ಮೇರೆಗೆ ಮಧುರೈ ಪೊಲೀಸರು ತನಿಖೆಗಾಗಿ ಶನಿವಾರ ಶಿಶುವಿನ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ವರದಿಯಲ್ಲಿ ಮಗುವನ್ನು ಕೊಲೆ ಮಾಡಿರುವುದು ದೃಢಪಟ್ಟಿದೆ. ಕೊಲೆ ಆರೋಪದ ಮೇಲೆ ಪೊಲೀಸರು ಭಾನುವಾರ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ಈ ವೇಳೆ ಆರೋಪಿಗಳು ಮಗು ನಿದ್ರೆಯಲ್ಲಿ ಮೃತಪಟ್ಟಿತ್ತು. ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್‌ಗೂ ಫೋನ್ ಮಾಡಿದ್ದೆವು ಎಂದು ಸುಳ್ಳು ಹೇಳಿದರು. ಮರಣೋತ್ತರ ವರದಿ ನೋಡಿದ ನಂತರ ಇಬ್ಬರನ್ನು ಮತ್ತೆ ತೀವ್ರ ವಿಚಾರಣೆ ನಡೆಸಲಾಗಿದೆ. ಆಗ ಇಬ್ಬರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡರು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ವನಿತಾ ತಿಳಿಸಿದರು.

ಮಗುವಿನ ತಂದೆ ಮತ್ತು ಅಜ್ಜಿ ಮೊದಲು ಶಿಶುವಿಗೆ ಗಿಡಮೂಲಿಕೆ ರಸವನ್ನು ನೀಡಿದ್ದರು. ವಿಷ ಕುಡಿಸಿದರೂ ಮಗು ಬದುಕಿರುವುದನ್ನು ನೋಡಿ ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಈ ಪ್ರಕರಣದಲ್ಲಿ ತಾಯಿ ಭಾಗಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯಕ್ಕೆ ತವಾಮಣಿ ಮತ್ತು ಆತನ ತಾಯಿ ಪಾಂಡಿಯಮ್ಮಲ್ ಇಬ್ಬರನ್ನು ಬಂಧಿಸಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Spread the love

About Laxminews 24x7

Check Also

ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವ ಅನಿವಾರ್ಯತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ನಡೆಸಬಹುದಾದ ಪ್ರಯತ್ನಗಳನ್ನು ಮಾಡುತ್ತಿದೆ

Spread the love ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸುವ ಅನಿವಾರ್ಯತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ನಡೆಸಬಹುದಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ