ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೋಕಿನ ಬಿಂಡಿಗನವಿಲೆ ಹೋಬಳಿಯ ಸಾತೇನಹಳ್ಳಿ ಗ್ರಾಮದಲ್ಲಿ ಕರೋನ (ಕೋವಿಡ್19) 1 ಪಾಸಿಟಿವ್ ಬಂದ ಇನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೋಕಿನ ಗಡಿಭಾಗವಾದ ಕಾರಣ, ನಾಗಮಂಗಲ ಹಾಗೂ ಕೆ ಆರ್ ಪೇಟೆ ಮಾರ್ಗಗಳನ್ನ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಹಾಗೂ ಸಂತೇಬಾಚಹಳ್ಳಿ ಹಾಗೂ ತಾಲೋಕಿನ ಜನತೆಯ ಇತರಕ್ಷಣೆಗಾಗಿ ಅಂಗಡಿ ಮುಂಗಟ್ಟನ್ನ ಲಕ್ ಡೌನ್ ಮಾಡಲಾಗಿದೆ.
ಇದರಬಗ್ಗೆ ಸಂತೇಬಾಚಹಳ್ಳಿ ಗ್ರಾಮಪಂಚಾಯತ್ ಸದಸ್ಯರು ಹಾಗೂ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಕುಮಾರ್ ಮಾತನಾಡಿ ತಾಲೋಕಿನ ದಕ್ಷ ಪ್ರಾಮಾಣಿಕರಾದ ಬಿ.ಪಿ ಬ್ಯಾಟರಾಯಗೌಡರು ಹಾಗೂ ಸಂತೇಬಾಚಹಳ್ಳಿ ಹೊರಠಾಣೆಯ ಮುಖ್ಯ ಪೇದೆ ಮಹೇಶ್ ಹಾಗೂ ಪಾಟೀಲ್, ಸಿಬ್ಬಂದಿಗಳು ಮತ್ತು ಅರೋಗ್ಯ ಇಲಖೆ ಸಿಬ್ಬಂದಿಗಳು, ತಾಲೋಕು ಆಡಳಿತಾಧಿಕಾರಿಗಳು ಎಂ. ಶಿವಮೂರ್ತಿ ಸರ್ ರವರು ಹಾಗೂ ತಾಲೋಕ್ ಆರೋಗ್ಯಾಧಿಕಾರಿಗಳು ಡಾ. ಹರೀಶ್ ರವರು, ಡಾ. ಮಧುಸೂದನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎಲ್ಲರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಯಿಸುತಿದ್ದರೆ ತಾವೇ ಕುದ್ದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಾರೆ ಎಂದು ಕೃತಜ್ಞತೆಯನ್ನು ಅಧಿಕಾರಿಗಳಿಗೆ ತಿಳಿಸಿದರು.