Breaking News
Home / ಜಿಲ್ಲೆ / ಕಲಬುರ್ಗಿ / ಆಸ್ಪತ್ರೆ ವರೆಗೆ ಬಂದರೂ ಸೋಂಕಿತನನ್ನು ಅಡ್ಮಿಟ್ ಮಾಡಿಕೊಳ್ಳದ ಜಿಮ್ಸ್ ಸಿಬ್ಬಂದಿ ; ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬಟಾಬಯಲು

ಆಸ್ಪತ್ರೆ ವರೆಗೆ ಬಂದರೂ ಸೋಂಕಿತನನ್ನು ಅಡ್ಮಿಟ್ ಮಾಡಿಕೊಳ್ಳದ ಜಿಮ್ಸ್ ಸಿಬ್ಬಂದಿ ; ಆರೋಗ್ಯ ಇಲಾಖೆ ನಿರ್ಲಕ್ಷ್ಯ ಬಟಾಬಯಲು

Spread the love

ಕಲಬುರ್ಗಿ: ಕಲಬುರ್ಗಿಯಲ್ಲಿ ಕೊರೋನಾ ದಿನೇ ದಿನೇ ವ್ಯಾಪಕಗೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೂ ಕಾರಣವಾಗುತ್ತಿದೆ. ಕಲಬುರ್ಗಿ ನಗರಗಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಎಷ್ಟರಮಟ್ಟಿಗೆ ಇದೇ ಎನ್ನುವುದು ಬಟಾಬಯಲಾಗಿದೆ. ವ್ಯಕ್ತಿಗೆ ಸೋಂಕು ದೃಢವಾಗಿ ಒಂದು ದಿನವಾದ್ರೂ ಕೇರ್ ಮಾಡದ ಸಿಬ್ಬಂದಿ. ಮೊನ್ನೆ ಸೋಂಕು ಬಂದ್ರು ಆಸ್ಪತ್ರೆಗೆ ಕರೆದೊಯ್ಯದೆ ಸಿಬ್ಬಂದಿ ನಿರ್ಲಕ್ಷ್ಯ. ಆಸ್ಪತ್ರೆಗೆ ಬಂದರೂ ಅಡ್ಮಿಟ್ ಮಾಡಿಕೊಳ್ಳದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಕೊರೋನಾ ಸೋಂಕಿತನನ್ನು ಮನೆಯಿಂದ ಕರೆದೊಯ್ಯದ ಆರೋಗ್ಯ ಇಲಾಖೆ ಸಿಬ್ಬಂದಿ. ಕೊನೆಗೆ ಸಂಬಂಧಿಕರು ಸೋಂಕಿತನನ್ನೇ ಜಿಮ್ಸ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆಗಲೂ ಸೋಂಕಿನನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೆ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ತಾಳಿದೆ. ತನ್ನನ್ನು ಎಲ್ಲಾದ್ರು ದಾಖಲು ಮಾಡಿ ಚಿಕಿತ್ಸೆ ಕೊಡಿ ಎಂದು ಸೋಂಕಿತ ವ್ಯಕ್ತಿ ಮನವಿ ಮಾಡಿಕೊಂಡಿದ್ದಾನೆ. ಈ ವೇಳೆ ಆತನನ್ನು ಆಸ್ಪತ್ರೆಗೆ ಸೇರಿಸಿಕೊಂಡು ಚಿಕಿತ್ಸೆ ನೀಡುವ ಬದಲಿಗೆ, ಆರೋಗ್ಯ ಇಲಾಖೆ ಸಿಬ್ಬಂದಿ ಒಬ್ಬರ ಮೇಲೆ ಮತ್ತೊಬ್ಬರು ಹಾಕಿ ಜಾರಿಕೊಂಡಿದ್ದಾರೆ. ಆರೋಗ್ಯ ಇಲಾಖೆ ವಿರುದ್ಧ ಸೋಂಕಿತನ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವಾಗಿಯೇ ಕರೆದುಕೊಂಡು ಬಂದಿದ್ದರೂ ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಸೂಕ್ತ ಚಿಕಿತ್ಸೆಯನ್ನೂ ನೀಡದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ. ಕಲಬುರ್ಗಿ ನಗರದ ಜಿ ಆರ್ ಕಾಲೋನಿಯ ನಿವಾಸಿಗೆ ಸೋಂಕು ದೃಢಪಟ್ಟಿತ್ತು. ನಿನ್ನೆ ನಲವತ್ತು ವರ್ಷದ ವ್ಯಕ್ತಿ ಗೆ ಕೊರೋನಾ ಇರುವುದನ್ನು ಸ್ವತಹ ಆರೋಗ್ಯ ಇಲಾಖೆ ಸಿಬ್ಬಂದಿ ದೃಢಪಡಿಸಿತ್ತು. ಮನೆಗೆ ಬಂದು ತಾವೇ ಕರೆದುಕೊಂಡು ಹೋಗುವುದಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಹೇಳಿದ್ದರು. ಆದರೆ ನಿನ್ನೆ ಸಹ ಬಂದು ಕರೆದೊಯ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಲೆಂದು ಸೋಂಕಿತನೆ ಜಿಮ್ಸ್ ಗೆ ಬಂದಿದ್ದಾನೆ.

ಆದರೂ ಆತನನ್ನು ಅಡ್ಮಿಟ್ ಮಾಡಿಕೊಳ್ಳದ ಪರಿಣಾಮ ಸಂಬಂಧಿಕರು ಸೋಂಕಿತನನ್ನು ಮನೆಗೆ ವಾಪಸ್ ಕರೆದೊಯ್ದಿದ್ದಾರೆ. ಪರಿಣಾಮ ಯಾವುದೇ ಚಿಕಿತ್ಸೆ ಇಲ್ಲದೆಯೇ ಸೋಂಕಿತ ಮನೆಯಲ್ಲಿರುವಂತಾಗಿದೆ. ಅದರ ಜೊತೆಗೆ ಆತ ಆಸ್ಪತ್ರೆಯವರೆಗೂ ಬಂದು ಹೋಗಿರೋದ್ರಿಂದ ಯಾರ್ಯಾರಿಗೆ ಸೋಂಕು ಹರಡಿದೆಯೋ ಎಂಬ ಭೀತಿಯೂ ಸೃಷ್ಟಿಯಾಗಿದೆ.

: ಕರೆ ಮಾಡಿದಲ್ಲಿಗೆ ಹೋಗಿ ತರಕಾರಿ ವಿತರಣೆ; ತುರುವೇಕೆರೆ ಬೀದಿ ವ್ಯಾಪಾರಿಗಳ ವಿನೂತನ ಪ್ರಯತ್ನಕ್ಕೆ ಜನ ಮೆಚ್ಚುಗೆ

ಕಳೆದ ವಾರ ಇದೇ ರೀತಿ ಗಾಜಿಪುರದಲ್ಲಿ 74 ವರ್ಷದ ವೃದ್ಧೆಗೆ ಸೋಂಕು ದೃಢಪಟ್ಟಿದ್ದ ವೇಳೆ ಕರೆತರಲು ಹೋಗಿದ್ದ ಆಯಂಬುಲೆನ್ಸ್ ಸಿಬ್ಬಂದಿ ಸುಮ್ಮನೆ ವಾಪಸ್ ಆಗಿದ್ದರು. ವೃದ್ಧೆಗೆ ಕಾಲು ಮುರಿದಿದ್ದರಿಂದ ಕೆಳಗೆ ಕರೆತರಲು ಸಹಾಯ ಮಾಡುವಂತೆ ಕೇಳಿಕೊಂಡರು ಆಯಂಬುಲೆನ್ಸ್ ಸಿಬ್ಬಂದಿ ಸಹಾಯ ಮಾಡಿರಲಿಲ್ಲ. ಆಯಂಬುಲೆನ್ಸ್ ನಲ್ಲಿ ತಂದು ಕೂಡಿಸಿದರೆ ಮಾತ್ರ ಕರೆದೊಯ್ಯುವುದಾಗಿ ಹೇಳಿದ್ದ ಸಿಬ್ಬಂದಿ, ಕೊನೆಗೆ ಬರಿಗೈಲಿ ವಾಪಸ್ಸಾಗಿದ್ದರು.
ಮನೆ ಮಾಲೀಕ ಅಜ್ಜಿಯನ್ನು ಮನೆ ಬಿಡಸಿದ್ದರಿಂದ ಅನಿವಾರ್ಯವಾಗಿ ಸೋಂಕಿತ ವೃದ್ಧೆಯನ್ನು ಸಂಬಂಧಿಕರು ಬೆಂಗಳೂರಿಗೆ ಕರೆದೊಯ್ದಿದ್ದರು. ಈ ವೇಳೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ವೃದ್ಧೆಯ ವಿರುದ್ಧವೇ ಕೇಸು ದಾಖಲಿಸಲು ಆರೋಗ್ಯ ಇಲಾಖೆ ಮುಂದಾಗಿತ್ತು. ಇದೀಗ ಸೋಂಕಿತನೇ ಜಿಮ್ಸ್ ಆಸ್ಪತ್ರೆವರೆಗೆ ಬಂದರೂ ದಾಖಲಿಸಿಕೊಳ್ಳದೆ ವಾಪಸ್ ಕಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.


Spread the love

About Laxminews 24x7

Check Also

ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’

Spread the love ಗದಗ : ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ