Breaking News
Home / ಕೊರೊನಾವೈರಸ್ / ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರಿಂದ ನಾಡಿನ ಜನತೆಗೆ ಕ್ಷಮೆಯಾಚನೆ

ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರಿಂದ ನಾಡಿನ ಜನತೆಗೆ ಕ್ಷಮೆಯಾಚನೆ

Spread the love

 

ಬೆಂಗಳೂರು :ಈ ಮೂಲಕ ತಮ್ಮೆಲ್ಲರಲ್ಲಿ ಹಂಚಿಕೊಂಡಿರುವುದು ಏನೆಂದರೆ ಈ ವಿಶ್ವದಲ್ಲಿ ಮಹಾಮಾರಿಯಾಗಿ ಜನಜೀವನಕ್ಕೆ ಹಾಗೂ ಜೀವಕ್ಕೆ ಕಂಟಕ ತಂದಿರುವ ಕೋರೋಣ ವೈರಸ್ ಸಮಯದಲ್ಲಿ ರಾಜ್ಯದ ಆರೋಗ್ಯ ಇಲಾಖೆಯ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರು ಮುಷ್ಕರದಲ್ಲಿರುವುದು ತಮ್ಮೆಲ್ಲರಿಗೂ ತಿಳಿದಿರುವ ವಿಷಯ ಅಥವಾ ತಿಳಿಯಪಡಿಸುತ್ತೇನೆ.

ನಮ್ಮ ಮುಷ್ಕರದಿಂದ ರಾಜ್ಯದ ಜನತೆಗೆ ಸಿಗಬೇಕಾದಂತಹ ಆರೋಗ್ಯ ಸೌಲಭ್ಯಗಳು ಸಿಗದಿರುವುದರಿಂದ ಈ ರಾಜ್ಯದ ಎಲ್ಲಾ ಜನಸಾಮಾನ್ಯರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಗುತ್ತಿಗೆ ಹೊರಗುತ್ತಿಗೆ ನೌಕರರು ಕ್ಷಮೆಯಾಚಿಸುತ್ತೇವೆ. ಗುತ್ತಿಗೆ ನೌಕರರ ಜೀವನವೂ ಸಹ ಸಂಕಷ್ಟದಲ್ಲಿರುವುದರಿಂದ ಈ ಮುಷ್ಕರ ಮಾಡಲೇಬೇಕಾದಂತಹ ಒಂದು ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹೊರಗುತ್ತಿಗೆ ನೌಕರರ ” ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಹೊರ ಗುತ್ತಿಗೆ ಪದ್ಧತಿ ನಿರ್ಮೂಲನೆ , ಹರಿಯಾಣಾ ಮಾದರಿಯ ಹೆಚ್.ಆರ್. ಪಾಲ್ಸಿ ನಿರ್ವಹಣೆ, ಈರೀತಿಯ ” 14 ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ಮುಷ್ಕರ ಮಾಡುತ್ತಲೇ ಬಂದಿದ್ದು ಹಾಗೂ 2019-20 ನೇ ಸಾಲಿನ ಒಂದು ವರ್ಷದಲ್ಲಿ ಈ ಸರ್ಕಾರಕ್ಕೆ ಗುತ್ತಿಗೆ ನೌಕರರ ಸಾಮಾನ್ಯ ಬೇಡಿಕೆಗಳನ್ನು ಈಡೇರಿಸಲು ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದಿದ್ದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ಸರ್ಕಾರದಿಂದ ದೊರೆತಿರುವುದಿಲ್ಲ.

ಸರ್ಕಾರದ ಮಟ್ಟದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ ಮೂರು ತಿಂಗಳುಗಳ ಕಾಲ ಕಾಲಾವಕಾಶವನ್ನು ತೆಗೆದುಕೊಂಡು ಈಗಾಗಲೇ ಆರು ತಿಂಗಳು ಕಳೆದರೂ ಸಹ ಈ ಒಂದು ಸಮಿತಿಯಿಂದ ಯಾವುದೇ ರೀತಿಯ ಸಭೆಗಳನ್ನು ನಡೆಸಿದ ಪ್ರೊಸಿಡಿಂಗ್ಸ್ ನೀಡಿರುವುದಿಲ್ಲ. ಇದೇ ಕಾರಣದಿಂದ ನಾವೆಲ್ಲರೂ ದಿನಾಂಕ:24-09-2020 ರಿಂದ ಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ 9 ನೇ ದಿನಕ್ಕೆ ಕಾಲಿಟ್ಟಿದೆ ಇದುವರೆಗೂ ಸ್ಪಂದಿಸದ ಇಲಾಖೆಯ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಹಾಗೂ ಮಾನ್ಯ ಆರೋಗ್ಯ ಸಚಿವರು ಬಿ ಶ್ರೀರಾಮುಲು ಅವರು.

ಆರೋಗ್ಯ ಇಲಾಖೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಗುತ್ತಿಗೆ ನೌಕರರು ಆಗಿರುವುದರಿಂದ ಇಲಾಖೆಯ ಎಲ್ಲಾ ರಾಷ್ಟ್ರೀಯ ಕಾರ್ಯಕ್ರಮಗಳಾದ ತಾಯಿ ಮತ್ತು ಮಕ್ಕಳ ಆರೋಗ್ಯ, ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸೌಲಭ್ಯ ವಂಚಿತವಾಗುತ್ತಿದೆ ಮತ್ತು ಬಾಣಂತಿಯರು ಆರೈಕೆ ಸೇವೆಗಳಿಂದ ವಂಚಿತರಾಗುತ್ತಿದ್ದು, ಕ್ಷಯ ರೋಗ ನಿಯಂತ್ರಣ, ಕುಷ್ಟ ರೋಗ ನಿಯಂತ್ರಣ, ಕುಟುಂಬ ಕಲ್ಯಾಣ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮಗಳು ಈರೀತಿಯ ಹಲವು ಕಾರ್ಯಕ್ರಮಗಳು ಕುಂಠಿತವಾಗುತ್ತಿವೆ.

ಮಹಾಮಾರಿಯಾಗಿ ಕಾಡುತ್ತಿರುವ ಕೋವಿಡ್ ರೋಗದ ಸಂದರ್ಭದಲ್ಲಿ ಮುಂಚೂಣಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ನಮ್ಮ ಗುತ್ತಿಗೆ ನೌಕರರು. ಇದೇ ಸರ್ಕಾರ ಕರೋನವೈರಸ್ ಎಂದು ಚಪ್ಪಾಳೆ ತಟ್ಟಿ ಪುರಸ್ಕಾರಗಳನ್ನು ನೀಡಿದೆ ಆದರೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮುಷ್ಕರವನ್ನು ಮಾಡಿದಾಗ ಇದೇ ಸರಕಾರಕ್ಕೆ ನಾವು ಕೋರೋಣ ವಾರಿಯರ್ಸ್ ಇವರಿಗೆ ವೈರಿಗಳಾಗಿ ಕಾಣುತ್ತಿದ್ದೇವೆ.

ಗುತ್ತಿಗೆ ನೌಕರರು ಮುಷ್ಕರದಲ್ಲಿ ಇರುವುದಾಗಿ ಮುಂಚಿತವಾಗಿ memorandum ನ್ನು ಮಾನ್ಯ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಿದರೂ ಸಹ ಅನಧಿಕೃತ ಸಿಬ್ಬಂದಿಗಳು ಗೈರು ಹಾಜರಾಗಿದ್ದಾರೆ ಎಂದು ಪರಿಗಣಿಸಿ ನೋಟಿಸನ್ನು ಜಾರಿಗೊಳಿಸುತ್ತಿದ್ದಾರೆ. ಇದೆಂಥ ವಿಪರ್ಯಾಸ ನಮ್ಮ ಬೇಡಿಕೆಗಳಿಗಾಗಿ ಮುಷ್ಕರ ಮಾಡಿದರು ನಮಗೆ ನೋಟೀಸನ್ನು ಜಾರಿ ಮಾಡುತ್ತಿದ್ದಾರೆ.

ಕೋವಿಡ ನ ಪರೀಕ್ಷೆಗಳ ಗುರಿ ನೆಲಕಚ್ಚಿದ್ದು ರಾಜ್ಯದಲ್ಲಿ ಕೋವಿಡ ಪಾಜಿಟಿವ್ ರೇಟ್ ಜಾಸ್ತಿಯಾಗಿದೆ. ಅಂದರೆ ಕೋವಿಡ್ ನಿಂದ ಬಳಲುತ್ತಿರುವವರ ಹಾಗೂ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾರಣ ಗುತ್ತಿಗೆ ನೌಕರರು ಮುಷ್ಕರದಲ್ಲಿ ಇರುವುದರಿಂದ.

ಆದಷ್ಟು ಬೇಗ ಆರೋಗ್ಯ ಇಲಾಖೆಯ ಗುತ್ತಿಗೆ ಬೇಡಿಕೆಗಳನ್ನು ಈ ಘನ ಸರ್ಕಾರ ಅತಿ ಶೀಘ್ರದಲ್ಲಿ ಈಡೇರಿಕೆ ಮಾಡದಿದ್ದರೆ ನಮ್ಮ ಈ ಅನಿರ್ಧಿಷ್ಟಾವಧಿ ಮುಷ್ಕರ ಮುಂದುವರಿಯಲಿದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಸರ್ಕಾರವೆ ಜನ ಸಾಮಾನ್ಯರಿಗೆ ಸಿಗಬೇಕಾದ ಆರೋಗ್ಯ ಸೇವೆಗಳನ್ನು ವಂಚನೆ ಮಾಡುವಲ್ಲಿ ನೇರ ಹೊಣೆಗಾರಿಕೆಯಾಗಿರುತ್ತದೆ.

 


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ