Breaking News
Home / ಜಿಲ್ಲೆ / ಬೆಂಗಳೂರು / ಎಸಿಬಿ ದಾಳಿ: 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲು

ಎಸಿಬಿ ದಾಳಿ: 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲು

Spread the love

ಬೆಂಗಳೂರು: ಭ್ರಷ್ಟ ಅಧಿಕಾರಿಗಳ ಮೇಲೆ ಸಮರ ಸಾರಿದ್ದ ಎಸಿಬಿ ಅಧಿಕಾರಿಗಳು ಇಂದು ಒಟ್ಟು 9 ಸರ್ಕಾರಿ ನೌಕರರಿಗೆ ಸೇರಿದ 43 ಸ್ಥಳಗಳಲ್ಲಿ ಒಟ್ಟು 310 ಅಧಿಕಾರಿಗಳಿಂದ 43 ತಂಡಗಳಾಗಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಬೆಳಕಿಗೆ ಬಂದಿದೆ. ದಾಳಿಯಲ್ಲಿ ಸಿಕ್ಕ ಆಸ್ತಿ-ಪಾಸ್ತಿ, ಚಿನ್ನ ಹಣದ ಅಂಕಿ ಅಂಶಗಳು ಹೀಗಿವೆ..

1. ಜಿ ಶ್ರೀಧರ್- ಕಾರ್ಯ ಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಡಿಸಿ ಕಚೇರಿ ಮಂಗಳೂರು.

  1. ಮೈಸೂರಿನಲ್ಲಿ ಒಂದು ಮನೆ, ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನಲ್ಲಿ ಒಂದು ಮನೆ
  2. ವಿವಿಧ ನಗರಗಳಲ್ಲಿ ನಾಲ್ಕು ಸೈಟ್ ಗಳು
  3. ಬ್ಯಾಂಕ್ ಉಳಿತಾಯ ಖಾತೆ ಡೆಪಾಸಿಟ್ ಇನ್ಶೂರೆನ್ಸ್, ಡೆಪಾಸಿಟ್ ಬಾಂಡ್ ಗಳು
  4. ಒಂದು ಕಾರು, ಎರಡು ದ್ವಿಚಕ್ರ, ಚಿನ್ನ ಬೆಳ್ಳಿ ಆಭರಣಗಳು ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು.

2. ಸುರೇಶ್- JE- ಗ್ರಾಮೀಣ ನೀರು ಸರಬರಾಜು ಅಭಿವೃದ್ಧಿ ಉಪ ವಿಭಾಗ ಬಸವ ಕಲ್ಯಾಣ ಬೀದರ್ ಜಿಲ್ಲೆ

  1. ಬಸವ ಕಲ್ಯಾಣದಲ್ಲಿ ಒಂದು ಮನೆ..
  2. ಬೀದರ್ ಜಿಲ್ಲೆ ಬಾಲ್ಕಿಯಲ್ಲಿ ಒಂದು ಪೆಟ್ರೋಲ್ ಬಂಕ್..
  3. ನಾಲ್ಕು ‌ನಿವೇಶನ, ವಿವಿಧ ಬ್ಯಾಂಕ್ ಗಳಲ್ಲಿ ಎಫ್ಡಿ ಡೆಪಾಸಿಟ್,
  4. ಬೆಲೆ ಬಾಳುವ ಚಿನ್ನಾ ಭರಣಗಳು, ಒಂದು‌ದ್ವಿಚಕ್ರ ವಾಹನ ಪತ್ತೆ

 

 

3. ಆರ್ ಪಿ ಕುಲಕರ್ಣಿ- ಪ್ರಧಾನ ಇಂಜಿನಿಯರ್, ಮುಖ್ಯ ಯೋಜನಾಧಿಕಾರಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು

  1. ಬೆಂಗಳೂರಲ್ಲಿ ಒಂದು ಮನೆ, ನಾಲ್ಕು ಫ್ಲ್ಯಾಟ್, ವಿವಿಧ ಕಡೆ ಮೂರಿ ನಿವೇಶನ..
  2. ಎರಡು ಕಾರು, ಒಂದು‌ ದ್ವಿಚಕ್ರ ವಾಹನ, ಚಿನ್ನಾ ಬೆಳ್ಳಿ ಆಭರಣಗಳು..
  3. ಬ್ಯಾಂಕ್‌ಖಾತೆಗಳಲ್ಲಿ ಠೇವಣಿಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಪತ್ತೆ.

4. ಎ ಕೃಷ್ಣಮೂರ್ತಿ- ಹಿರಿಯ ಮೋಟಾರು ವಾಹನ ನಿರೀಕ್ಷಕರು.. ಕೋರಮಂಗಲ ಆರ್ಟಿಓ ಕಚೇರಿ ಬೆಂಗಳೂರು..

  1. ಬೆಂಗಳೂರಿನ ಹಂಪಿ ನಗರದಲ್ಲಿ ಒಂದು ಮನೆ..
  2. ದೊಮ್ಮಲೂರಲ್ಲಿ ಒಂದು‌ಮನೆ..
  3. ಬೆಂಗಳೂರಲ್ಲಿ ಒಂದು ಶಾಲಾ ಕಟ್ಟಡ..
  4. ತುಮಕೂರು ಕೊರಟಗೆರೆಯಲ್ಲಿ ಫಾರ್ಮ್ ಹೌಸ್..
  5. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 30 ಸೈಟ್ ಗಳಿವೆ..
  6. ಚಿನ್ನಾ ಬೆಳ್ಳಿ ಆಭರಣಗಳು, ವಿವಿಧ ಕಡೆಗಳಲ್ಲಿ 82 ಎಕರೆ ಕೃಷಿ ಜಮೀನು..
  7. ನಾಲ್ಕು ದ್ವಿಚಕ್ರ ವಾಹನ, ಮೂರು‌ ಕಾರುಗಳು, ಒಂದು ಟೆಂಪೋ ಮ್ಯಾಕ್ಸ್ ಕ್ಯಾಬ್..
  8. ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

 

 

5. ಕೃಷ್ಣ ಎಸ್ ಹೆಬ್ಬೂರು- ಕಾರ್ಯ ನಿರ್ವಾಹಕ ಅಭಿಯಂತರ, ಕೆಆರ್ ಐಡಿ ಎಲ್ ಉಡುಪಿ ಜಿಲ್ಲೆ..

  1. ಉಡುಪಿಯಲ್ಲಿ ಒಂದು ಮನೆ, ಬೆಂಗಳೂರು ನಗರ ಜಿಗಣಿಯಲ್ಲಿ ಒಂದು ಮನೆ..
  2. ಹುಬ್ಬಳ್ಳಿಯಲ್ಲಿ ಒಂದು ಮನೆ‌..
  3. ಉಡುಪಿ ಜಿಲ್ಲೆ ಶಿವಳ್ಳಿ ಗ್ರಾಮದಲ್ಲಿ 15.66 ಸೆಂಟ್ಸ್ ನಿವೇಶನ..
  4. ಎರಡು ದ್ವಿಚಕ್ರ ವಾಹನ, ಒಂದು‌ಕಾರು, ಚಿನ್ನಾಬೆಳ್ಳಿ ಆಭರಣಗಳು.
  5. ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

6. ಟಿ ವೆಂಕಟೇಶ್- ಉಪ ಅರಣ್ಯ ಸಂರಕ್ಷಣಾಧಿಕಾರಿ.. ಸಾಮಾಜಿಕ ಅರಣ್ಯ, ಮಂಡ್ಯ ಜಿಲ್ಲೆ..

  1. ಮೈಸೂರು ನಗರದಲ್ಲಿ ಎರಡು ಮನೆ..
  2. ವಿವಿಧ ನಗರಗಳಲ್ಲಿ 9 ನಿವೇಶನ..
  3. 12 ಎಕರೆ ಕೃಷಿ ಜಮೀನು, ಒಂದು ಕಾರು..
  4. ಮೂರಿ ದ್ವಿಚಕ್ರ ವಾಹನ, ಚಿನ್ನಾ ಬೆಳ್ಳಿ ಆಭರಣಗಳು..
  5. ನಗದು ಹಣ, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

7. ಹೆಚ್ ಆರ್ ಕೃಷ್ಣಮೂರ್ತಿ- ಸಹಾಯಕ ನಿರ್ದೇಶಕರು ಮಾಲೂರು ಟೌನ್ ಪ್ಲ್ಯಾನಿಂಗ್ ಅಥಾರಿಟಿ ಮಾಲೂರು ಕೋಲಾರ‌ ಜಿಲ್ಲೆ..

  1. ಬೆಂಗಳೂರು ವಮೊಗ್ಗ, ದಾವಣಗೆರೆಯಲ್ಲಿ ತಲಾ ಒಂದೊಂದು ಮನೆ..
  2. ವಿವಿಧ ಪ್ರಮುಖ ನಗರಗಳಲ್ಲಿ ನಾಲ್ಕು ನಿವೇಶನ..
  3. ಚನ್ನಗಿರಿಯಲ್ಲಿ 15 ಎಕರೆ 15 ಗುಂಟೆ ಕೃಷಿ ಜಮೀನು..
  4. ಎರಡು ದ್ವಿಚಕ್ರ ವಾಹನ, ಒಂದು ಕಾರು..
  5. ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

8. ಸಿದ್ದರಾಮ ಮಲ್ಲಿಕಾರ್ಜುನ ಬೀರಾದಾರ AEE- ಒನ್ 10 ಕೆವಿ ನೋಡೆಲ್ ಅಧಿಕಾರಿ.. ಕೆಪಿಟಿಸಿಎಲ್, ಪ್ರಭಾರಿ EE- ವಿಜಯಪುರ..

  1. ವಿಜಯಪುರದಲ್ಲಿ ಮೂರು ವಾಸದ ಮನೆ..
  2. ವಿವಿಧ ಕಡೆಗಳಲ್ಲಿ ನಾಲ್ಕು ನಿವೇಶನ..
  3. 35 ಎಕರೆ ಕೃಷಿ ಜಮೀನು..
  4. ಒಂದು ಕಾರು ಎರಡು ದ್ವಿಚಕ್ರ ವಾಹನ..
  5. ಚಿನ್ನ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

9. ಎ ಎನ್‌ವಿಜಯ್ ಕುಮಾರ್- ಎಲೆಕ್ಟ್ರಿಕಲ್‌ಇನ್ಸ್ ಪೆಕ್ಟರ್.. ಜೆಸ್ಕಾಂ ಬಳ್ಳಾರಿ..

  1. ಬೆಂಗಳೂರು, ಬಳ್ಳಾರಿಯಲ್ಲಿ ತಲಾ ಒಂದರಂತೆ ಒಂದೊಂದು ಮನೆ..
  2. ವಿವಿಧ ನಗರಗಳಲ್ಲಿ ಒಂಟು ಎಂಟು ನಿವೇಶನ..
  3. ಎರಡು ಕಾರು, ಒಂದು ದ್ವಿಚಕ್ರ ವಾಹನ..
  4. ಚಿನ್ನಾ ಬೆಳ್ಳಿ ಆಭರಣಗಳು, ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು..

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ