Breaking News
Home / ರಾಜಕೀಯ / ಈ ಊರಲ್ಲಿ ಮನೆಗೊಂದು ಕುದುರೆ: ಔಷಧಕ್ಕೂ, ಶಾಲೆಗೆ ಶಿಕ್ಷಕರು ಬರೋಕೂ, ಹೆಣ ಸಾಗಿಸೋಕೂ ಇಲ್ಲಿ ಕುದುರೆಗಳೇ ವಾಹನ !

ಈ ಊರಲ್ಲಿ ಮನೆಗೊಂದು ಕುದುರೆ: ಔಷಧಕ್ಕೂ, ಶಾಲೆಗೆ ಶಿಕ್ಷಕರು ಬರೋಕೂ, ಹೆಣ ಸಾಗಿಸೋಕೂ ಇಲ್ಲಿ ಕುದುರೆಗಳೇ ವಾಹನ !

Spread the love

ಹತ್ತಿರದ ಹಳ್ಳಿಗಳಿಗೆ ಅಥವಾ ಬೇರ್ಯಾವುದೇ ಕೆಲಸಕ್ಕೆ ಮತ್ತೊಂದೆಡೆ ಪ್ರಯಾಣಿಸಬೇಕು ಎಂದರೆ ಕುದುರೆಯ ಮೇಲೆ ಏರಿಯೇ ಹೋಗಬೇಕಾದ ಅನಿವಾರ್ಯತೆ ಈ ಜನರದ್ದು.

ಇವರು ವಾಸಿಸುವ ಸ್ಥಳಗಳಿಗೆ ತೆರಳಲು ರಸ್ತೆಯಾಗಲಿ, ವಾಹನ ಬರುವ ಸೌಕರ್ಯವಾಗಲಿ ಇಲ್ಲ, ಹಾಗಾಗಿ ಕುದುರೆಗಳೇ ಇಲ್ಲಿ ವಾಹನಗಳು.

ತಾವು ಬೆಳೆದ ಬೆಳೆಗಳನ್ನು ಮಾರಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಪ್ರತಿದಿನ ಈ ಆದಿವಾಸಿಗಳು ಕನಿಷ್ಟ 12ರಿಂದ 25 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ.

ಕುದುರೆಗಳ ಮೇಲೆ ಇಲ್ಲಿನ ಜನ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಹಾಗಾಗಿ ಅವುಗಳಿಗೆ ಉತ್ತಮ ಆಹಾರ, ನೀರು ಮಾತ್ರವಲ್ಲದೆ ಔಷಧೋಪಚಾರಗಳನ್ನೂ ಮಾಡಿ ಚೆನ್ನಾಗಿ ಸಾಕಿಕೊಂಡಿದ್ದಾರೆ.

ಜನರ ನಿತ್ಯ ಬಳಕೆ ಮಾತ್ರವಲ್ಲದೆ ಚುನಾವಣಾ ಸಿಬ್ಬಂದಿ ಮತ್ತು ಓಟಿಂಗ್ ಮಷೀನ್ಗಳನ್ನು ಒಂದು ಪ್ರದೇಶದಿಂದ ಮತ್ತೊಂದಕ್ಕೆ ಸಾಗಿಸಲು ಕೂಡಾ ಈ ಕುದುರೆಗಳು ಬಳಕೆಯಾಗಿವೆ. ಅಷ್ಟೇ ಅಲ್ಲ ಪೋಲೀಸರು ಮತ್ತು ಮಾವೋಯಿಸ್ಟ್ ನಡುವೆ ಜಟಾಪಟಿ ನಡೆದಾಗ ಸತ್ತವರ ಹೆಣ ಸಾಗಿಸಲೂ ಕುದುರೆಗಳನ್ನೇ ಬಳಸಾಗಿದೆ.

ಸುರ್ಲಪಾಲೆಮ್ ಹಳ್ಳಿಯವರೆಲ್ಲಾ ಸೇರಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಸಲು ಜಿ ವೆಂಕಟರಮಣ ಎನ್ನುವ ಶಿಕ್ಷಕರಿಗೆ ಒಂದು ಕುದುರೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆ ಶಿಕ್ಷಕ ದಿನಾ ಕುದುರೆ ಮೇಲೆ ಬಂದು ಮಕ್ಕಳಿಗೆ ಪಾಠ ಹೇಳಿ ಹೋಗ್ತಾರೆ.

ಇಲ್ಲಿ ಪ್ರತೀ ಮನೆಯಲ್ಲೂ ಒಂದೊಂದು ಕುದುರೆ ಇದ್ದೇ ಇದೆ. ಜಿ ಮದುಗುಲ, ಲಂಬಸಿಂಗಿ ಮುಂತಾದ ಪ್ರದೇಶಗಳ ಎಲ್ಲಾ ಬುಡಕಟ್ಟು ಮನೆಗಳಲ್ಲೂ ಕುದುರೆಗಳಿವೆ.

ಈ ಗ್ರಾಮಗಳಲ್ಲಿ ಸುಮಾರು 70 ಕುದುರೆಗಳಿವೆ. ಮದುಗುಲ ಮಂಡಲ ಮತ್ತು ಕೇಡಿಪೇಟಾ ಬಜಾರದಲ್ಲಿ ಒಂದು ಕುದುರೆ 15ರಿಂದ 20 ಸಾವಿರ ರೂಪಾಯಿಯಂತೆ ಮಾರಾಟಕ್ಕೆ ಸಿಗುತ್ತದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ