Breaking News
Home / ಜಿಲ್ಲೆ / ಬೆಂಗಳೂರು / ಪ್ಯಾಕೇಜ್ ನೀಡಿದ ನಂತರವೇ ಲಾಕ್ ಡೌನ್ ಘೋಷಿಸಿ: ಕಾಂಗ್ರೆಸ್

ಪ್ಯಾಕೇಜ್ ನೀಡಿದ ನಂತರವೇ ಲಾಕ್ ಡೌನ್ ಘೋಷಿಸಿ: ಕಾಂಗ್ರೆಸ್

Spread the love

ಬೆಂಗಳೂರು: ಸರಕಾರ ಲಾಕ್‌ಡೌನ್ ವಿಸ್ತರಿಸುವ ಚಿಂತನೆ ನಡೆಸಿದೆ ಎಂದರೆ ಕಳೆದ ಒಂದು ತಿಂಗಳಿಂದ ಲಾಕ್‌ಡೌನ್ ವಿಫಲವಾಗಿದೆ ಎಂದರ್ಥ. ಆಗಿರುವ ಲೋಪದ ಬಗ್ಗೆ ಸರಕಾರ ತಜ್ಞರೊಂದಿಗೆ ವಿಮರ್ಶೆ ನಡೆಸದೆ ತನ್ನ ಮನಸಿಗೆ ತೋಚಿದ್ದನ್ನ ಮಾಡುತ್ತಿದೆ. ವೈದ್ಯಕೀಯ ತಜ್ಞರಷ್ಟೇ ಅಲ್ಲ ಆರ್ಥಿಕ ತಜ್ಞರಲ್ಲಿಯೂ ಲಾಕ್‌ಡೌನ್ ಬಗ್ಗೆ ಚರ್ಚಿಸುವ ಅಗತ್ಯವಿದೆ ಯಡಿಯೂರಪ್ಪ ಅವರೇ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ತಿಳಿಸಿದೆ.

ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಜನತೆ ಲಾಕ್‌ಡೌನ್ ವಿಸ್ತರಣೆಯನ್ನು ಭರಿಸುವ ಶಕ್ತಿ ಹೊಂದಿದ್ದರೆಯೇ ಎಂದು ಚಿಂತಿಸಿದ್ದೀರಾ ಯಡಿಯೂರಪ್ಪ ಅವರೇ? ಕೈಗಾರಿಕೆಗಳು, ರೈತರ ಪರಿಸ್ಥಿತಿಯ ಅವಲೋಕನ ನಡೆಸಿದ್ದೀರಾ? ನಿಮ್ಮ ನೆಪಮಾತ್ರದ ಪ್ಯಾಕೇಜ್ ಜನತೆಗೆ ತಲುಪಿದೆಯೇ, ಬದುಕಲು ಅದು ಸಾಲುತ್ತದೆಯೇ? ಇದೆಲ್ಲವನ್ನೂ ಚಿಂತಿಸಬೇಕಲ್ಲವೇ? ಎಂದು ಪ್ರಶ್ನಿಸಿದೆ.

ಸರಕಾರ ಲಾಕ್‌ಡೌನ್ ವಿಸ್ತರಿಸುವುದೇ ಆದರೆ ಕೂಡಲೇ ಸಮರ್ಪಕ ಪ್ಯಾಕೇಜ್ ನೀಡಬೇಕು. ಪ್ರತಿ ಬಡ ಕುಟುಂಬಗಳಿಗೂ ರೇಷನ್ ಕಿಟ್‌ಗಳನ್ನು ಸರಕಾರವೇ ಒದಗಿಸಬೇಕು. ರೈತರ ಬೆಳೆ ಖರೀದಿ ಮಾಡಬೇಕು. ಎಲ್ಲಾ ಅರ್ಹರಿಗೆ ಕನಿಷ್ಠ 10,000 ರೂ ನೀಡಬೇಕು. ಇಲ್ಲದಿದ್ದಲ್ಲಿ ಕೊರೋನಗಿಂತಲೂ ಹೆಚ್ಚು ಹಸಿವು, ಬಡತನ ಜನರನ್ನು ಬಲಿಪಡೆಯುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ