Breaking News
Home / ರಾಜಕೀಯ / ಕೊವಿಡ್​ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್​ ಬಚ್ಚನ್​

ಕೊವಿಡ್​ನಿಂದ ಬೇಗ ಗುಣಮುಖರಾಗೋದು ಹೇಗೆ?; ತಾವು ಉಪಯೋಗಿಸಿದ ತಂತ್ರ ಹೇಳಿದ ಅಭಿಷೇಕ್​ ಬಚ್ಚನ್​

Spread the love

ಅಭಿಷೇಕ್​ ಬಚ್ಚನ್​ ಅವರಿಗೆ ಕಳೆದ ವರ್ಷ ಕೊರೊನಾ ಕಾಣಿಸಿಕೊಂಡಿತ್ತು. 29 ದಿನಗಳ ಕಾಲ ಕೊವಿಡ್​ನಿಂದ ಬಳಲಿದ್ದ ಅವರು, ನಂತರ ಚೇತರಿಕೆ ಕಂಡಿದ್ದರು. ಈ ಅನುಭವ ಹೇಗಿತ್ತು ಎನ್ನುವ ಬಗ್ಗೆ ಅಭಿಷೇಕ್​ ಈಗ ಮಾತನಾಡಿದ್ದಾರೆ. ಕೊವಿಡ್​ 19ರ ವಿರುದ್ಧ ಹೋರಾಡುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಅನುಭವ ಹಂಚಿಕೊಂಡಿದ್ದಾರೆ.

‘ಕೊರೊನಾ ಬಂದ ದಿನಗಳು ನನಗೆ ಒಳ್ಳೆಯ ಅನುಭವ ಆಗಿರಲಿಲ್ಲ. ನನ್ನ ನಂಬಿಕೊಂಡಿದ್ದ ಕುಟುಂಬ ಕೂಡ ಇದರಿಂದ ತೊಂದರೆಗೆ ಒಳಗಾಗಿತ್ತು. ನಿಮಗೆ ರೋಗ ಬಂದಿದೆ ಎಂದರೆ, ನೀವು ತುಂಬಾ ಶಕ್ತಿಹೀನರಾಗಿದ್ದೀರಿ ಎಂದರ್ಥ. ನಾನು ಆಸ್ಪತ್ರೆಯಲ್ಲಿದ್ದಾಗ ಆರಂಭಿಕ ರಾತ್ರಿಗಳಲ್ಲಿ ನಿದ್ರೆ ಮಾಡುವುದು ಕಷ್ಟಕರವಾಗಿತ್ತು. ಮುಂದೇನಾಗುತ್ತದೆ ಎನ್ನುವ ಭಯ ನನ್ನನ್ನು ಬಲವಾಗಿ ಕಾಡಿತ್ತು’ ಎಂದಿದ್ದಾರೆ ಅಭಿಷೇಕ್​.

‘ನನ್ನ ತಂದೆ ಅಮಿತಾಭ್​ ವಯಸ್ಸು 78. ಆ ವಯಸ್ಸಿನಲ್ಲೂ ಅವರು ಕೊರೊನಾ ವಿರುದ್ಧ ಯಶಸ್ವಿ ಹೋರಾಟ ನಡೆಸಿದ್ದಾರೆ. ಕೊವಿಡ್​ ವಿರುದ್ಧದ ಹೋರಾಟದಲ್ಲಿ ಸದಾ ಪಾಸಿಟಿವ್​ ಆಲೋಚನೆಗಳನ್ನು ಮಾಡುತ್ತಿರಬೇಕು. ಹಾಗಾದಾಗ ಮಾತ್ರ ಇದರ ವಿರುಧ್ಧ ಜಯಿಸೋಕೆ ಸಾಧ್ಯ. ನಾನು ನನ್ನ ತಂದೆ ಇದೇ ತಂತ್ರ ಉಪಯೋಗಿಸಿದ್ದೇವೆ ಎಂದಿದ್ದಾರೆ ಅಮಿತಾಭ್​.

ಅಭಿಷೇಕ್​, ಅಮಿತಾಭ್​ ಸೇರಿ ಬಚ್ಚನ್​ ಕುಟುಂಬದ ಬಹುತೇಕರಿಗೆ ಕಳೆದ ಜುಲೈನಲ್ಲಿ ಕೊವಿಡ್​ ಆಗಿತ್ತು. ಅಮಿತಾಭ್​ ಹಾಗೂ ಅಭಿಷೇಕ್​ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹೀಗಾಗಿ, ಮಹಾರಾಷ್ಟ್ರ ಸೇರಿ ಸಾಕಷ್ಟು ಕಡೆಗಳಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಮನೆಯಿಂದ ಹೊರಹೋಗೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಐಶ್ವರ್ಯಾ ರೈ, ಅಭಿಷೇಕ್​ ಬಚ್ಚನ್​, ಆರಾಧ್ಯ ಮತ್ತು ಐಶ್ವರ್ಯಾ ತಾಯಿ ಬೃಂದ್ಯಾ ರೈ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಐಶ್ವರ್ಯಾ-ಅಭಿಷೇಕ್​ ಒಟ್ಟಾಗಿ ಸೇರಿ ಬೃಂದ್ಯಾ ರೈ ಅವರ 70ನೇ ಜನ್ಮದಿನ ಆಚರಣೆಯನ್ನು ಆಚರಣೆ ಮಾಡಿದ್ದರು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ