Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರು; ಬಾಕಿ ಹಣಕ್ಕಾಗಿ ಸಂಬಂಧಿಕರನ್ನು ಕೂಡಿಹಾಕಿದ ಆಸ್ಪತ್ರೆ!

ಬೆಂಗಳೂರು; ಬಾಕಿ ಹಣಕ್ಕಾಗಿ ಸಂಬಂಧಿಕರನ್ನು ಕೂಡಿಹಾಕಿದ ಆಸ್ಪತ್ರೆ!

Spread the love

ಬೆಂಗಳೂರು, ಮೇ 30; ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳ ಧನ ದಾಹಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕೋವಿಡ್‌ನಿಂದ ವ್ಯಕ್ತಿ ಮೃತಪಟ್ಟರೂ ಶವವನ್ನು ಕೊಡದೇ ಜೊತೆಗಿದ್ದ ಸಂಬಂಧಿಕರನ್ನು ಕೂಡಿಹಾಕಿದ ಘಟನೆ ನಡೆದಿದೆ.

42 ವರ್ಷದ ಲಕ್ಷ್ಮೀ ನಾರಾಯಣ ಚನ್ನಸಂದ್ರದ ಖಾಸಗಿ ಆಸ್ಪತ್ರೆಗೆ ಮೇ 17ರಂದು ದಾಖಲಾಗಿದ್ದರು. ಕೋವಿಡ್ ಸೋಂಕು ತಗುಲಿದ್ದ ಅವರು ಮೇ 27ರಂದು ಮೃತಪಟ್ಟಿದ್ದರು. ಒಟ್ಟು 8.17 ಲಕ್ಷ ರೂ. ಬಿಲ್ ಆಗಿತ್ತು. ಕುಟುಂಬದವರು 4.5 ಲಕ್ಷ ರೂ. ಪಾವತಿ ಮಾಡಿದ್ದರು.

 

ಬಾಕಿ ಹಣವನ್ನು ಕೊಡುವ ತನಕ ಶವವನ್ನು ಕೊಡುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಪಟ್ಟು ಹಿಡಿದರು. ವ್ಯಕ್ತಿಯನ್ನು ನೋಡಿಕೊಳ್ಳಲು ಆಗಮಿಸಿದ್ದ ಸಂಬಂಧಿಕರನ್ನು ಕೂಡಿ ಹಾಕಿದರು. 3.67 ಲಕ್ಷ ನೀಡಿ ಶವ ತೆಗೆದುಕೊಂಡು ಹೋಗಿ ಎಂದು ಪಟ್ಟು ಹಿಡಿದರು.

 

ಬೇರೆ ದಾರಿ ಕಾಣದೇ ಉಳಿದ ಹಣವನ್ನು ಹೊಂದಿಸಲು ಕುಟುಂಬ ಸದಸ್ಯರು ತೆರಳಿದರು. ಈ ವಿಚಾರ ಸ್ವಯಂ ಸೇವಕರಿಗೆ ತಿಳಿಯಿತು. ಅವರು ಪೊಲೀಸರಿಗೆ ವಿಚಾರ ಮುಟ್ಟಿಸಿದರು. ಆಸ್ಪತ್ರೆಗೆ ಬಂದ ಪೊಲೀಸರು ಶವವನ್ನು ಕೊಡಿಸಿದರು ಮತ್ತು ಕೂಡಿ ಹಾಕಿದ್ದ ಸಂಬಂಧಿಕರನ್ನು ಬಿಡುಗಡೆ ಮಾಡಿದರು.

 

ಐಪಿಸಿ ಸೆಕ್ಷನ್ 342, 504, 506 ಸೇರಿದಂತೆ ವಿವಿಧ ಕಾಯ್ದೆಯಡಿ ಆಸ್ಪತ್ರೆ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ಹಲವು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆ ಹಣದ ದಾಹ ಬೆಳಕಿಗೆ ಬಂದಿದೆ.

ಬೆಂಗಳೂರು ನಗರದಲದ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದು ಸಾಮಾನ್ಯ ಬೆಡ್‌ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಆದರೆ ಐಸಿಯು ಬೆಡ್‌ಗಳಿಗೆ ಬೇಡಿಕೆ ಇದೆ.

ಶನಿವಾರದ ವರದಿಯಂತೆ ಬೆಂಗಳೂರಿನಲ್ಲಿ 4,889 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,64,182.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ