Breaking News
Home / ರಾಜಕೀಯ / ಗ್ರಾಮಗಳಲ್ಲೇ ಕೊರೊನಾ ತಡೆಗೆ ಸ್ವಂತ ಟಫ್ ರೂಲ್ಸ್, ಊರನ್ನು ಕಾಪಾಡಿಕೊಳ್ಳಲು ಮುಂದಾದ ಜನ !

ಗ್ರಾಮಗಳಲ್ಲೇ ಕೊರೊನಾ ತಡೆಗೆ ಸ್ವಂತ ಟಫ್ ರೂಲ್ಸ್, ಊರನ್ನು ಕಾಪಾಡಿಕೊಳ್ಳಲು ಮುಂದಾದ ಜನ !

Spread the love

ಗದಗ: ರಾಜ್ಯದಲ್ಲೆಡೆ ಕೊರೊನಾ ಮಹಾಮಾರಿ ಅಟ್ಟಹಾಸ ಮೆರಿತಿದೆ. ಅದರಲ್ಲೂ ಕರ್ನಾಟಕದಲ್ಲಿ‌ ಆಗ್ತಿರೋ ಸಾವಿನ ಸಂಖ್ಯೆ ಭಾರತದ ಎರಡನೇ ಸ್ಥಾನದಲ್ಲಿದೆ. ನಗರದಲ್ಲಿ ವ್ಯಾಪಕವಾಗಿ ಹರಡಿದ್ದ ಕಣ್ಣಿಗೆ ಕಾಣದ ಮಾಯಾವಿ ಇದೀಗ ಹಳ್ಳಿ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಅದಕ್ಕಂತಾನೆ‌ ಈ ಗ್ರಾಮದವರು ಮಾಡಿರೋ ಪ್ಲ್ಯಾನ್ ಏನು ಗೊತ್ತಾ. ಕೋವಿಡ್ ಎರಡನೇ ಅಲೆ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಮುಂದಾಗಿದ್ದು, ಗ್ರಾಮದಲ್ಲಿ ಮಾಸ್ಕ್ ಹಾಕದೇ ತಿರುಗುವವರಿಗೆ 100 ರೂ, ದಂಡ, ಹಾಗೂ ಅವಧಿ ಮೀರಿ ಅಂಗಡಿ ಮುಂಗ್ಗಟ್ಟು ತೆರದವರಿಗೆ 500 ರೂ, ಗಳ ದಂಡ ಹಾಕಲು ತಿರ್ಮಾನ ಕೈಗೊಳ್ಳಲಾಗಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷ ಮುತ್ತು ರಾಯರಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ಕಾರ್ಯಪಡೆಯ ಸಭೆಯಲ್ಲಿ ಈ ತೀರ್ಮಾನ ತಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಮುತ್ತು ರಾಯರಡ್ಡಿ, ಗ್ರಾಮದ ಸರಕಾರಿ ಆಸ್ಪತ್ರೆ, ಆವರಣ ಸೇರಿದಂತೆ ಸಿಬ್ಬಂದಿಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಶುದ್ಧ ಕುಡಿಯುವ ನೀರು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಸಿಬ್ಬಂದಿಗಳು ಗ್ರಾಮದ ಪ್ರತಿ ವಾರ್ಡ್ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಗ್ರಾಮದಲ್ಲಿ ಜನಜಂಗುಳಿ ಸೇರದಂತೆ ಪೊಲೀಸರು ಆಗಾಗ ಗ್ರಾಮಕ್ಕೆ ಭೇಟಿ ಕೊಡಬೇಕು. ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಅಧ್ಯಕ್ಷ ಮುತ್ತು ರಾಯರಡ್ಡಿ ಮನವಿ ಮಾಡಿದರು. ಹೌದು ಕೊರೊನಾ ಮಾಹಾಮಾರಿ ಅಬ್ಬರ ದಿನದಿಂದ ದಿನಕ್ಕೆ ಆರ್ಭಟಿಸುತ್ತಿದೆ. ಜನತೆಯೂ ಸಹ ಇದರಿಂದ ಬಚಾವ್ ಆಗೋಕೆ ಮುಂಜಾಗೃತ ಕ್ರಮಗಳನ್ನ ತೆಗೆದುಕೊಳ್ತಿಲ್ಲ. ಸರಕಾರ‌ ಸಹ ಏನೆಲ್ಲ ಕಟ್ಟುನಿಟ್ಟಿನ ಕ್ರಮ ಕೈಗೊಂಡ್ರೂ ಸೋಂಕಿತರ ಸಂಖ್ಯೆ ಏರುತ್ತಲೆ ಇದೆ. ಇನ್ನು ಇಷ್ಟು‌ ದಿನ ನಗರವಾಸಿಗಳ ಜೀವ ಹಿಂಡುತ್ತಿದ್ದ ಕೊರೊನಾ ವೈರಸ್ ಇದೀಗ ಗ್ರಾಮಿಣ ಮಟ್ಟಕ್ಕೂ ಎಂಟ್ರಿ ಕೊಡ್ತಿದೆ. ನಗರದಲ್ಲಿ ಅದೆಷ್ಟೇ ಲಾಕ್ಡೌನ್ ಜಾರಿ ತಂದ್ರೂ ಜನತೆ ಮಾತ್ರ ಎಚ್ಚೆತ್ತುಕೊಳ್ತಿಲ್ಲ.ಆದರೆ‌ ಹಳ್ಳಿಗಳಲ್ಲಿ ಮಾತ್ರ ಗ್ರಾಮ ಪಂಚಾಯತ ಮಟ್ಟದಲ್ಲಿ ಕೊರೊನಾ ಎಂಟ್ರಿ ಕೊಡದ ಹಾಗೆ ಗ್ರಾಮದಲ್ಲಿ ದಿಗ್ಭಂದನ ಹಾಕೊಂಡಿದಾರೆ.

ಹೌದು, ಗದಗ ಜಿಲ್ಲೆ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮ ಸಂಪೂರ್ಣ ದಿಗ್ಭಂದನವಾಗಿದ್ದು ಕೊರೊನಾ ಹರಡದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಗ್ರಾಮದಲ್ಲಿ ಬೇರೆ ಯಾರೂ ಎಂಟ್ರಿ‌ಕೊಡದ ಹಾಗೆ ನಿಗಾ ವಹಿಸಿದ್ದಾರೆ. ಮಾಸ್ಕ ಹಾಕದೇ ಇರೋರಿಗೆ 100 ರೂ.ದಂಡ, ಅವಧಿ ಮೀರಿ ಅಂಗಡಿ ಮುಂಗ್ಗಟ್ಟು ತೆರೆದವರಿಗೆ 500 ರೂ.ದಂಡ ಹಾಕುತ್ತಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ‌ರು ಹಾಗೂ ಸಿಬ್ಬಂದಿ ಟಾಸ್ಕ್ ಫೋರ್ಸ ಸಮಿತಿ ಮಾಡಿಕೊಂಡಿದ್ದು ಸೋಂಕು ನಿಯಂತ್ರಣಕ್ಕೆ ಹೊರಜಿಲ್ಲೆ, ಹೊರರಾಜ್ಯದಿಂದ ಬರುವವರ ಬಗ್ಗೆ ಪ್ರತಿದಿನ ಮಾಹಿತಿ ಸಂಗ್ರಹಿಸುವಂತೆ ಒತ್ತು ನೀಡಲಾಗಿದೆ. ಗ್ರಾಮದಲ್ಲಿ ಪಾಸಿಟಿವ್ ಬಂದವರಿಗೆ ಮನೆಯಲ್ಲೇ ಇರಿ‌ ಅಂತ ತಿಳಿ ಹೇಳಲಾಗಿದ್ದು ಅದ್ಯಾಗ್ಯೂ ಅವರು ಹೊರಬಂದಲ್ಲಿ ಅವರ ಮನೆ ಮುಂದೆ ಬೇಲಿ ಹಚ್ಚಿ ಅವರಿಗೆ ಈ ಮೂಲಕ ಜಾಗೃತಿ ಮೂಡಿಸೋ ಕಾರ್ಯಕ್ಕೆ ಮುಂದಾಗ್ತಿದೆ.
ಒಟ್ಟಾರೆ ನಗರದಲ್ಲಿರೋ ನಾಗರಿಕರೂ ಸಹ ಲಾಕ್ಡೌನ್ ನಿಯಮಗಳನ್ನ ಪಾಲಿಸ್ತಿಲ್ಲ‌. ಆದರೆ ಗ್ರಾಮೀಣ ಭಾಗದಲ್ಲಿ ಮಾತ್ರ ಗ್ರಾಮಸ್ಥರ ಸಹಕಾರದಲ್ಲಿ ಕೊರೊನಾ ಕಟ್ಟಿಹಾಕೋಕೆ ಪಣ ತೊಟ್ಟಿದ್ದಾರೆ. ಅದೇನೆ ಇರಲಿ ದೇಶವ್ಯಾಪಿ ಹರಡಿರೋ ಮಾರಿಯನ್ನ ನಗರದಲ್ಲಾಗಲಿ ಅಥವಾ ಗ್ರಾಮೀಣದಲ್ಲಾಗಲಿ ಕಟ್ಟಿಹಾಕೋದೊಂದೆ ಕೆಲಸ.


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ