Breaking News
Home / ಮಂಗಳೂರು / ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

ಇನ್ನೆರಡು ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ 24 ವರ್ಷದ ಪಿಎಸ್​ಐ ಕರೊನಾಗೆ ಬಲಿ!

Spread the love

ಮಂಗಳೂರು: ಅವರ ವಯಸ್ಸಿನ್ನೂ 24 ವರ್ಷ. ಚಿಕ್ಕ ವಯಸ್ಸಿಗೆ ಪೊಲೀಸ್​ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಕೋಲಾರ ಮೂಲದ ಯುವತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಆಗಿದ್ದರು. 7 ತಿಂಗಳ ಗರ್ಭಿಣಿ ಆಗಿದ್ದ ಅವರು ಹೆರಿಗೆ ರಜೆ ಮೇಲೆ ತವರಿಗೆ ಹೋಗಿದ್ದರು. ಎಲ್ಲವೂ ಸರಿಯಾಗಿದ್ದರೆ ಇನ್ನೆರಡು ತಿಂಗಳಲ್ಲಿ ಆ ಮನೆಗೆ ಪುಟ್ಟ ಕಂದನ ಆಗಮನದ ಖುಷಿಯ ಹೂರಣವೇ ತುಂಬಿರುತ್ತಿತ್ತು. ಅಷ್ಟರಲ್ಲಿ ಕ್ರೂರಿ ಕರೊನಾ ಗರ್ಭಿಣಿ ಪಿಎಸ್​ಐ ಅನ್ನು ಬಲಿ ಪಡೆದು ಎಲ್ಲವನ್ನೂ ಮಣ್ಣು ಪಾಲು ಮಾಡಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವಿರುಪಾಕ್ಷಿ ಗ್ರಾಮದ ಶಾಮಿಲಿ (24) ಕೋವಿಡ್​ಗೆ ಬಲಿಯಾದ ಪಿಎಸ್​ಐ. ಜ.12ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರೊಬೆಷನರಿ ಪಿಎಸ್​ಐ ಆಗಿ ಕರ್ತವ್ಯಕ್ಕೆ ಸೇರಿದ್ದ ಶಾಮಿಲಿ, ಮಂಗಳೂರಿನ ಎಸ್ಪಿ‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದ ಹಿನ್ನೆಲೆ ಕರೊನಾ ವ್ಯಾಕ್ಸಿನ್ ಪಡೆದಿರಲಿಲ್ಲ. ಮೇ 2ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಹಿನ್ನೆಲೆ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಶಾಮಿಲಿಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು(ಮಂಗಳವಾರ) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ


Spread the love

About Laxminews 24x7

Check Also

ಫಾಝಿಲ್‌ ಕೊಲೆ ಪ್ರಕರಣ: ಆರೋಪಿಗಳು 14 ದಿನ ಪೊಲೀಸ್‌ ಕಸ್ಟಡಿಗೆ

Spread the love ಮಂಗಳೂರು: ಸುರತ್ಕಲ್‌ನಲ್ಲಿ ನಡೆದ ಮಹಮ್ಮದ್‌ ಫಾಝಿಲ್‌ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರು ಮಂದಿ ಆರೋಪಿಗಳನ್ನು ನ್ಯಾಯಾಲಯವು 14 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ