Breaking News
Home / ಜಿಲ್ಲೆ / ಬೆಂಗಳೂರು / ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 38,603 ಜನರಿಗೆ ಕೊವಿಡ್ ಸೋಂಕು ದೃಢ, 476 ಜನರು ನಿಧನ

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 38,603 ಜನರಿಗೆ ಕೊವಿಡ್ ಸೋಂಕು ದೃಢ, 476 ಜನರು ನಿಧನ

Spread the love

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 38,603 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಸೋಂಕಿನಿಂದ 476 ಜನರು ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 13,338 ಜನರಿಗೆ ಕೊವಿಡ್ ದೃಢಪಟ್ಟಿದ್ದು, 239 ಜನರು ಅಸುನೀಗಿದ್ದಾರೆ. ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 34,635 ಜನರು ಕೊವಿಡ್ ಸೋಂಕುಮುಕ್ತರಾಗಿ ಆಸ್ಪತ್ರೆಗಳಿಂದ ಗುಣಮುಖರಾಗಿ ಮನೆಗೆ ಹಿಂತಿರುಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರನ್ನೂ ಸೇರಿಸಿ ಈವರೆಗೆ ರಾಜ್ಯದ ಕೊವಿಡ್ ಸೋಂಕಿತರ ಸಂಖ್ಯೆ 22,42,065ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಈವರೆಗೆ 16,16,092 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 22,313 ಜನರ ಸಾವನ್ನಪ್ಪಿದಂತಾಗಿದೆ . ಸದ್ಯ ರಾಜ್ಯದ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ 6, 03,639 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ .

ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ
ಬೆಂಗಳೂರು ನಗರ ಜಿಲ್ಲೆ 13,338, ಹಾಸನ 2,324 , ಬಳ್ಳಾರಿ 2,322, ಮೈಸೂರು 1,980, ತುಮಕೂರು 1,915, ಬೆಳಗಾವಿ 1,748, ಶಿವಮೊಗ್ಗ 1,322, ಉತ್ತರ ಕನ್ನಡ 1,288, ಮಂಡ್ಯ 1,087, ಧಾರವಾಡ 972, ಉಡುಪಿ 897, ದಕ್ಷಿಣ ಕನ್ನಡ 817, ಚಿಕ್ಕಬಳ್ಳಾಪುರ 799, ದಾವಣಗೆರೆ 747, ಚಿಕ್ಕಮಗಳೂರು 732, ಕೋಲಾರ 713, ಕಲಬುರಗಿ 695, ರಾಯಚೂರು 562, ಚಾಮರಾಜನಗರ 516, ಗದಗ 475, ಕೊಪ್ಪಳ 470, ಕೊಡಗು 442, ಬೆಂಗಳೂರು ಗ್ರಾಮಾಂತರ 426, ಚಿತ್ರದುರ್ಗ 407, ರಾಮನಗರ 397, ಯಾದಗಿರಿ 360, ಬಾಗಲಕೋಟೆ 305, ವಿಜಯಪುರ 233, ಬೀದರ್ 172 , ಹಾವೇರಿ ಜಿಲ್ಲೆಯಲ್ಲಿ ಇಂದು 142 ಜನರಿಗೆ ಕೊರೊನಾ ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಮೃತರ ವಿವರ

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 476 ಜನರ ಸಾವನ್ನಪ್ಪಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ 239, ಹಾಸನ ಜಿಲ್ಲೆ 29 , ಬಳ್ಳಾರಿ ಜಿಲ್ಲೆ 17, ಕಲಬುರಗಿ, ಉತ್ತರ ಕನ್ನಡ , ಶಿವಮೊಗ್ಗ ಜಿಲ್ಲೆ 15, ತುಮಕೂರು ಜಿಲ್ಲೆ 14, ಬೆಂಗಳೂರು ಗ್ರಾಮಾಂತರ ಜಿಲ್ಲೆ 13, ಹಾವೇರಿ, ಮಂಡ್ಯ ಜಿಲ್ಲೆ 10, ವಿಜಯಪುರ ಜಿಲ್ಲೆ 9, ಚಾಮರಾಜನಗರ, ಕೋಲಾರ ಜಿಲ್ಲೆ 8, ಬೆಳಗಾವಿ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ರಾಮನಗರ, ಯಾದಗಿರಿ ಜಿಲ್ಲೆ 6, ಧಾರವಾಡ, ಮೈಸೂರು, ಉಡುಪಿ ಜಿಲ್ಲೆ 5, ಬಾಗಲಕೋಟೆ, ಬೀದರ್, ಗದಗ, ಕೊಡಗು, ರಾಯಚೂರು ಜಿಲ್ಲೆ 4, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆ 3, ಕೊಪ್ಪಳ ಜಿಲ್ಲೆ 2, ಚಿತ್ರದುರ್ಗ ಜಿಲ್ಲೆಯಲ್ಲಿ ಓರ್ವ ಕೊವಿಡ್​ನಿಂದ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ