Breaking News
Home / ರಾಜಕೀಯ / ಕೋವಿಡ್‌ ನಿರ್ವಹಣೆ: ಸರ್ಕಾರದ ವೈಫಲ್ಯಕ್ಕೆ ಖಂಡಿಸಿ ಆನ್‌ಲೈನ್‌ ಚಳವಳಿ

ಕೋವಿಡ್‌ ನಿರ್ವಹಣೆ: ಸರ್ಕಾರದ ವೈಫಲ್ಯಕ್ಕೆ ಖಂಡಿಸಿ ಆನ್‌ಲೈನ್‌ ಚಳವಳಿ

Spread the love

ವಿಜಯಪುರ: ಕೋವಿಡ್-19 ಎರಡನೇ ಅಲೆಯನ್ನು ತಡೆಗಟ್ಟುವಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ಶನಿವಾರ ಆನ್‌ಲೈನ್‌ ಮೂಲಕ ಪ್ರತಿಭಟನೆ ನಡೆಸಲಾಯಿತು.

ಕೋವಿಡ್‌ನಿಂದ ಹಳ್ಳಿ, ನಗರಗಳಲ್ಲಿ ಸಾಕಷ್ಟು ಜನರ ಸಾವು ನೋವುಗಳನ್ನು ಸಂಭವಿಸುತ್ತಿದ್ದರೂ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಲುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ರಾಜಧಾನಿ ಬೆಂಗಳೂರಿನಿಂದ ಹಿಡಿದು ತಾಲ್ಲೂಕು ಮಟ್ಟದವರೆಗೆ ಆಮ್ಲಜನಕ, ಹಾಸಿಗೆ, ಔಷಧ, ಅಂಬುಲೆನ್ಸ್‌, ಐಸಿಯು ಹಾಗೂ ಆರೋಗ್ಯ ಸಿಬ್ಬಂದಿಗಳ ತೀವ್ರ ಕೊರತೆ ಕಂಡುಬರುತ್ತಿದೆ. ಅಲ್ಲದೆ, ಕೋವಿಡ್ ಲಸಿಕೆಗಳ ತೀವ್ರ ಕೊರತೆಯೂ ಇದೆ ಎಂದು ದೂರಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಸೌಲಭ್ಯಗಳು ಸಾಲದೇ ಇರುವುದರಿಂದ ಜನಸಾಮಾನ್ಯರು ಖಾಸಗಿ ಆಸ್ಪತ್ರೆಗಳತ್ತ ಧಾವಿಸುತ್ತಿದ್ದಾರೆ. ಆದರೆ, ಅಲ್ಲಿನ ದುಬಾರಿ ವೆಚ್ಚವನ್ನು ಭರಿಸಲಾಗದೇ ಅಸಹಾಯಕತೆಯಿಂದ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಇಂದಿನ ಆರೋಗ್ಯ ವ್ಯವಸ್ಥೆಯಲ್ಲಿನ ಬಿಕ್ಕಟ್ಟನ್ನು ಅತೀ ತುರ್ತು ಎಂದು ಪರಿಗಣಿಸಿ ಎಲ್ಲ ಅಮೂಲ್ಯ ಜೀವಗಳ ರಕ್ಷಣೆಗಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಈ ಕೂಡಲೇ ಸಾಕಷ್ಟು ಆಮ್ಲಜನಕವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.

ಈ ಕೂಡಲೇ ಬೇಡಿಕೆಗನುಗುಣವಾಗಿ ಎಲ್ಲ ಆಸ್ಪತ್ರೆಗಳಿಗೂ ಉಚಿತ ಆಮ್ಲಜನಕ ವಿತರಣೆ ಮಾಡಬೇಕು, ಎಲ್ಲ ನಾಗರಿಕರಿಗೂ ಉಚಿತ ಕೋವಿಡ್ ಲಸಿಕೆ ಹಾಗೂ ಉಚಿತ ಚಿಕಿತ್ಸೆ ಒದಗಿಸಬೇಕು ಎಂದು ಆಗ್ರಹಿಸಿದರು.

ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಕೋವಿಡೇತರ ಕ್ಯಾನ್ಸರ್, ಟಿಬಿ, ದೀರ್ಘಕಾಲದ ಮೂತ್ರಪಿಂಡದ ವೈಫಲ್ಯ, ಹೃದ್ರೋಗ ಹಾಗೂ ನರರೋಗದ ಸಮಸ್ಯೆಗೊಳಗಾದ ರೋಗಿಗಳನ್ನು ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಗಿತಗೊಂಡಿರುವ ಇತರೆ ಲಸಿಕಾ ಕಾರ್ಯಕ್ರಮಗಳನ್ನು ಪುನರಾರಂಭಿಸಿ, ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಆನ್‍ಲೈನ್ ಚಳವಳಿಯಲ್ಲಿ ಎಐಎಎಂಎಸ್‍ಎಸ್‌ನ ಜಿಲ್ಲಾ ಸಂಚಾಲಕಿ ಶಿವಬಾಳಮ್ಮ ಕೊಂಡುಗುಳಿ, ಸಹ ಸಂಚಾಲಕಿ ಗೀತಾ ಹೊಸದುರ್ಗ, ಸದಸ್ಯರಾದ ಶಿವರಂಜನಿ ಎಸ್. ಬಿ., ಸೌಮ್ಯ, ಸುಷ್ಮಾ, ಕಮಲ ತೇಲಿ, ಸೊನಾಲಿ, ಸುಮಯ, ಶಿವರಂಜನಿ ಎಸ್.ಬಿ ಪಾಲ್ಗೊಂಡಿದ್ದರು.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ