Breaking News
Home / ಜಿಲ್ಲೆ / ಬೆಂಗಳೂರು / ಪ್ರಾಣವಾಯು ರಥಕ್ಕೆ ಸಾರಥಿಗಳಿವರು.

ಪ್ರಾಣವಾಯು ರಥಕ್ಕೆ ಸಾರಥಿಗಳಿವರು.

Spread the love

ಬೆಂಗಳೂರು: ಇವರು ಕೊರೊನಾ 2ನೇ ಅಲೆಯ ನಡುವೆ ನೈಜ ಹೀರೋಗಳು. ನಿತ್ಯ ನೂರಾರು ಕಿ.ಮೀ. ದೂರದಿಂದ ಆಮ್ಲಜನಕವನ್ನು ಹೊತ್ತು ತರುತ್ತಾರೆ, ಆಸ್ಪತ್ರೆಗಳಿಗೆ ಹಂಚುತ್ತಾರೆ, ರೋಗಿಗಳ ಪಾಲಿಗೆ ಪ್ರಾಣವಾಯುವೇ ಆಗಿದ್ದಾರೆ.

– ಕೋವಿಡ್ ಮುಂಚೂಣಿ ಸೇನಾನಿಗಳಾಗಿದ್ದರೂ ಎಲೆಮರೆಯ ಕಾಯಿಗಳಂತಿರುವ ಆಮ್ಲಜನಕ ಟ್ಯಾಂಕರ್‌ಗಳ ಚಾಲಕರ ಸುದ್ದಿ ಇದು.

ಟ್ಯಾಂಕರ್‌ ಚಾಲನೆ ಸುಲಭವಲ್ಲ :

ಆಮ್ಲಜನಕ ಟ್ಯಾಂಕರ್‌ಗಳನ್ನು ಇತರ ವಾಹನ ಗಳಂತೆ ಚಲಾಯಿಸುವಂತಿಲ್ಲ. ಆಮ್ಲಜನಕವು ದಹನ ಪೂರಕವಾಗಿರುವುದರಿಂದ ಅಪಾಯ. ಹಾಗಾಗಿ ಎಂಜಿನ್‌ ಬಿಸಿಯಾಗದಂತೆ ತಾಸಿಗೆ 50 ಕಿ.ಮೀ. ವೇಗದಲ್ಲೇ ಚಾಲನೆ ಮಾಡಬೇಕು. ಆದ್ದರಿಂದ ಒಂದು ಟ್ರಿಪ್‌ಗೆ ವಾರಗಟ್ಟಲೆ ಹಿಡಿಯುತ್ತದೆ. ಬೆಂಕಿ ಅವಘಡಗಳಿಂದ ಕನಿಷ್ಠ ಒಂದು ಕಿ.ಮೀ. ಅಂತರ ಕಾಯ್ದುಕೊಳ್ಳಬೇಕಾಗುತ್ತದೆ.

ಈ ಮಧ್ಯೆ ರಾಜ್ಯಾದ್ಯಂತ ಬಿಗಿ ಕರ್ಫ್ಯೂ ಇರು ವುದರಿಂದ ಊಟ- ಉಪಾ ಹಾರದ ವ್ಯವಸ್ಥೆ ಇರುವುದಿಲ್ಲ. ವಿತರಕ ಕಂಪೆನಿ ವ್ಯವಸ್ಥೆ ಮಾಡುವ ಆಹಾರ ಪೊಟ್ಟಣವನ್ನು ಮಾರ್ಗ ಮಧ್ಯೆ ಪಡೆದು ಉಂಡು-ತಿಂದು ಮುಂದಿನ ದಾರಿ ಹಿಡಿಯಬೇಕು.

ಹೆಂಡತಿ-ಮಕ್ಕಳ ಮುಖ ನೋಡಿಲ್ಲ :

ವಾರಗಟ್ಟಲೆಯಿಂದ ಹೆಂಡತಿ-ಮಕ್ಕಳ ಮುಖ ನೋಡಲು ಆಗಿಲ್ಲ. ದಿನಕ್ಕೆ 12 ತಾಸು ಟ್ಯಾಂಕರ್‌ನಲ್ಲೇ ಇರುತ್ತೇವೆ. ಮನೆಗೆ ಹೋಗುವಷ್ಟರಲ್ಲಿ ಇನ್ಯಾವುದೋ ಆಸ್ಪತ್ರೆಗೆ ಆಮ್ಲಜನಕ ತಲುಪಿಸುವಂತೆ ತುರ್ತು ಕರೆ ಬರುತ್ತದೆ ಎಂದು ಆಮ್ಲಜನಕ ಟ್ಯಾಂಕರ್‌ ಚಾಲಕ ಶಬರೀಶ್‌ ಸತ್ಯನಾರಾಯಣನ್‌ ಹೇಳಿದ್ದಾರೆ.

ನಿತ್ಯ ಈ ಮೊದಲು ಒಂದು ಅಥವಾ ಎರಡು ಟ್ರಿಪ್‌ ಆಗುತ್ತಿತ್ತು. ಈಗ ಕನಿಷ್ಠ 6ರಿಂದ 9 ಟ್ರಿಪ್‌ ಬೆಂಗ ಳೂರಿನಲ್ಲೇ ಪೂರೈಸುತ್ತಿದ್ದೇವೆ. ಸಕಾಲದಲ್ಲಿ ಆಮ್ಲಜನಕ ತಲುಪಿಸುವುದೇ ಸವಾಲು. ಮೊದಲ 2 ಅನ್‌ಲೋಡ್‌ ಬೇಗ ಆಗುತ್ತದೆ. ಬಳಿಕ ಒತ್ತಡದ ಕೊರತೆ ಆಗು ವುದರಿಂದ ನಿಧಾನವಾಗುತ್ತದೆ ಎಂದು ಮತ್ತೂಬ್ಬ ಚಾಲಕ ಮುರುಗೇಶನ್‌ ವಿವರಿಸಿದ್ದಾರೆ.

200 ಟ್ಯಾಂಕರ್‌; 500 ಚಾಲಕರು :

ರಾಜ್ಯದಲ್ಲಿ 6ರಿಂದ 7 ಆಮ್ಲಜನಕ ಉತ್ಪಾದನ ಘಟಕಗಳಿವೆ. ಈ ಪೈಕಿ ಬಳ್ಳಾರಿಯ ಜಿಂದಾಲ್‌ನಲ್ಲಿ ಇರುವ ಐನಾಕ್ಸ್‌, ಪ್ರಾಕ್ಸ್‌ ಏರ್‌, ಲಿಂಡೆ ಎಂಬ ಮೂರು ಕಂಪೆನಿಗಳು ಪ್ರಮುಖ. ರಾಜ್ಯದಲ್ಲಿ ಸುಮಾರು 200 ಆಮ್ಲಜನಕ ಟ್ಯಾಂಕರ್‌ಗಳಿದ್ದು, 400ರಿಂದ 500 ಚಾಲಕರಿದ್ದಾರೆ. ಇವ ರೆಲ್ಲರೂ ತರಬೇತಿ ಪಡೆ ದಿರುತ್ತಾರೆ. ಇನ್ನು 45 ವರ್ಷ ಮೀರಿರದ ಮತ್ತು ಹೃದ್ರೋಗ, ಮಧುಮೇಹ ದಂತಹ ಕಾಯಿಲೆ ಇರದವರನ್ನು ಈ ಕರ್ತವ್ಯಕ್ಕೆ ನೇಮಿಸಲಾಗಿರುತ್ತದೆ.

ಬಸ್‌ ಚಾಲಕರಿಗೆ ಮೊರೆ? :

ತರಬೇತಿ ಪಡೆದ ಆಮ್ಲಜನಕ ಟ್ಯಾಂಕರ್‌ ಚಾಲಕರ ಸಂಖ್ಯೆ ವಿರಳ ಇರುವುದರಿಂದ ಸಾರಿಗೆ ನಿಗಮಗಳ ಚಾಲಕರ ಮೊರೆಹೋಗಲು ಸರಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ವಿವಿಧ ನಿಗಮಗಳಲ್ಲಿ ಅರ್ಹ ಚಾಲಕರ ಹುಡುಕಾಟ ನಡೆಯುತ್ತಿದೆ. ಮೊದಲ ಬ್ಯಾಚ್‌ನಲ್ಲಿ 30 ಚಾಲಕರ ಆಯ್ಕೆಗೆ ಸಿದ್ಧತೆ ನಡೆದಿದೆ. ಇವರಿಗೆ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಷ್ಟಗಳ ನಡುವೆ ನಮ್ಮ ಶ್ರಮ ನೂರಾರು ಜೀವಗಳನ್ನು ಉಳಿಸುತ್ತದೆ ಎಂಬ ತೃಪ್ತಿ ಯೊಂದೇ ನಮಗೆ ಸಮಾಧಾನ ಮತ್ತು ಪ್ರೇರಣೆ.–ಶಬರೀಶ್‌ ಸತ್ಯನಾರಾಯಣನ್‌,ಆಮ್ಲಜನಕ ಟ್ಯಾಂಕರ್‌ ಚಾಲಕ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ