Breaking News
Home / ರಾಜಕೀಯ / ಕ್ಷಮೆ ಕೇಳಿದ್ದು ಸುಳ್ಳು ಸುದ್ದಿ ಎಂದ ತೇಜಸ್ವಿಗೆ ಸಾಕ್ಷ್ಯ ಇದೆ ಎಂದು ತಿರುಗೇಟು ನೀಡಿದ Newsminute ಸಂಪಾದಕಿ

ಕ್ಷಮೆ ಕೇಳಿದ್ದು ಸುಳ್ಳು ಸುದ್ದಿ ಎಂದ ತೇಜಸ್ವಿಗೆ ಸಾಕ್ಷ್ಯ ಇದೆ ಎಂದು ತಿರುಗೇಟು ನೀಡಿದ Newsminute ಸಂಪಾದಕಿ

Spread the love

ಧನ್ಯಾ ರಾಜೇಂದ್ರನ್ (Photo: Twitter) – ತೇಜಸ್ವಿ ಸೂರ್ಯ

ಬೆಂಗಳೂರು, ಮೇ 7: ಬಿಬಿಎಂಪಿಯಲ್ಲಿ ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ ಎಂಬ ಆರೋಪದ ಬೆನ್ನಿಗೇ ನಡೆದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ತಾನು ಕ್ಷಮೆಯಾಚಿಸಿದ್ದೇನೆ ಎಂಬ ಸುದ್ದಿಯನ್ನು ನಿರಾಕರಿಸಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ Thenewsminute.com ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ತಿರುಗೇಟು ನೀಡಿದ್ದು, ನಮ್ಮ ಬಳಿ ದಾಖಲೆಗಳಿವೆ ಇದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿಯಿಂದ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಮೊದಲು ಆರೋಪಿಸಿ ನಂತರ ಅದಕ್ಕೆ ಕೋಮು ಬಣ್ಣ ಹಚ್ಚುವ ಯತ್ನ ನಡೆಸಿ ವಿವಾದಕ್ಕೀಡಾಗಿದ್ದ ಬೆಂಗಳೂರು ದಕ್ಷಿಣ ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಗುರುವಾರ ಸಂಜೆ ಮತ್ತೆ ಬೆಂಗಳೂರು ದಕ್ಷಿಣ ವಲಯದ ಬಿಬಿಎಂಪಿ ವಾರ್ ರೂಂಗೆ ತೆರಳಿ ಕ್ಷಮೆ ಯಾಚಿಸಿದ್ದಾರೆ ಎಂದು Thenewsminute.com ವರದಿ ಮಾಡಿತ್ತು. ಇದನ್ನು ನಿರಾಕರಿಸಿದ ಸಂಸದ ತೇಜಸ್ವಿ ಸೂರ್ಯ ‘ಇದು ಸುಳ್ಳು ಸುದ್ದಿ’ ಎಂದು ಟ್ವೀಟ್ ಮಾಡಿದ್ದರು.

ಇದರ ಬೆನ್ನಿಗೇ Thenewsminute.com ಸಂಪಾದಕಿ ಧನ್ಯಾ ರಾಜೇಂದ್ರನ್ ಅವರು ಟ್ವೀಟ್ ಮಾಡಿ, ”ಯಾವುದು ಸುಳ್ಳು ಸುದ್ದಿ ? ನೀವು ಅಲ್ಲಿಗೆ (ಬಿಬಿಎಂಪಿ ವಾರ್ ರೂಂ) ಹೋಗಿದ್ದೀರಿ. ನಂಬರ್ ಗಳು ಸೋರಿಕೆಯಾದ ಬಗ್ಗೆ ಹಾಗೂ ಕಿರುಕುಳ ನೀಡಿರುವ ಬಗ್ಗೆ ನೀವು ಕ್ಷಮಿಸಿ ಎಂದಿದ್ದೀರಿ. ತನಗೆ ನೀಡಲಾದ ಪಟ್ಟಿಯನ್ನು ಓದಿದ್ದೇನೆ ಎಂದು ನೀವು ತಿಳಿಸಿದ್ದೀರಿ. ಮುಸ್ಲಿಮರ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬಂತೆ ಬಿಂಬಿಸಲಾಗುತ್ತಿದೆ ಎಂಬುದನ್ನೂ ಹೇಳಿದ್ದೀರಿ. ನನಗೆ ಹೇಗೆ ಗೊತ್ತು? ನನ್ನ ಬಳಿ ಆಡಿಯೋ ಇದೆ” ಎಂದು ತಿರುಗೇಟು ನೀಡಿದ್ದಾರೆ.

”ಆದರೆ newsminute ವರದಿಯಲ್ಲಿ ಒಂದು ಸಮಸ್ಯೆ ಇದೆ. ತೇಜಸ್ವಿ ಸೂರ್ಯ ತಾನು ‘ಕೋಮುವಾದಿ ಅಥವಾ ಜಾತಿವಾದಿ’ ಅಲ್ಲ ಎಂದು ಹೇಳಿದ್ದಾರೆಂದು ನಾವು ವರದಿ ಮಾಡಿದ್ದೆವು. ಆದರೆ 15 ನಿಮಿಷದ ಆಡಿಯೋದಲ್ಲಿ ಅದು ಇಲ್ಲ. ಬಹುಷ ಅದು ನಮಗೆ ಸಿಗದ ಭಾಷಣದಲ್ಲಿ ಇರಬಹುದು. ಅದಾಗ್ಯೂ ನೀವು ಅದನ್ನು ಹೇಳಿಲ್ಲದಿದ್ದರೆ ನಾವು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಅವರು 16 ಮುಸ್ಲಿಂ ಸಿಬ್ಬಂದಿ ಜೊತೆ ಮಾತನಾಡಿಲ್ಲ ಮತ್ತು ಅವರೊಂದಿಗೆ ಕ್ಷಮೆ ಕೇಳಿಲ್ಲ ಎಂದು ನಿಮ್ಮ ಕಚೇರಿ ನಮ್ಮ ವರದಿಗಾರನಿಗೆ ತಿಳಿಸಿದೆ. ಅದನ್ನೇ ನಾವು ನಮ್ಮ ವರದಿಯಲ್ಲಿ ಹೇಳಿದ್ದೇವೆ. ಧನ್ಯವಾದಗಳು. ನನ್ನ ನಂಬರ್ ಕೂಡಾ ಸೋರಿಕೆ ಆಗಿದೆ ಮತ್ತು ನನ್ನ ಹೆತ್ತವರನ್ನು ನಿಂದಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ವಾರ್ ರೂಂಗೆ ತಿಳಿಸಿದ್ದಾರೆ. ಎಲ್ಲರೂ ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಕೊರೋನ ಸಾಂಕ್ರಾಮಿಕದ ಕಡೆ ಗಮನಹರಿಸಬೇಕು. ನಾವು ಎಲ್ಲಾ ಹೇಳಿಕೆಗಳನ್ನು ನಮ್ಮ ಸುದ್ದಿಯಲ್ಲಿ ಅಪ್ಡೇಟ್ ಮಾಡುತ್ತೇವೆ. ಇನ್ನು ಮುಂದೆ ಈ ಬಗ್ಗೆ ಟ್ವೀಟ್ ಮಾಡುವುದಿಲ್ಲ. ನಮಗೆ ಮಾಡಲು ಬೇರೆ ಕೆಲಸಗಳಿವೆ ಎಂದು ಧನ್ಯಾ ರಾಜೇಂದ್ರನ್ ತಿಳಿಸಿದ್ದಾರೆ.

 


Spread the love

About Laxminews 24x7

Check Also

ಪಾನಿಪುರಿ ಮಾರುವ ಜ್ಯೂನೀಯರ್ ಮೋದಿ; ಮೋದಿ ತರಾನೇ..ಆದ್ರೆ ಅಲ್ಲ!

Spread the loveನವದೆಹಲಿ: ಗುಜರಾತ್‌ನ ಪಾನಿ ಪುರಿ ಮಾರಾಟಗಾರ ಅನಿಲ್ ಭಾಯಿ ಠಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲುವ ಹಾಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ