Breaking News
Home / ರಾಜ್ಯ / ಕೋವಿಡ್‌ ಸಮಯದಲ್ಲಿ ರಾಜಕಾರಣ ಮಾಡಿದರೆ ರಕ್ತ ಕುದಿಯುತ್ತೆ: ಸುಮಲತಾ ಅಂಬರೀಶ್‌

ಕೋವಿಡ್‌ ಸಮಯದಲ್ಲಿ ರಾಜಕಾರಣ ಮಾಡಿದರೆ ರಕ್ತ ಕುದಿಯುತ್ತೆ: ಸುಮಲತಾ ಅಂಬರೀಶ್‌

Spread the love

ಮಂಡ್ಯ: ಕೋವಿಡ್‌ ಸಮಯದಲ್ಲಿ ರಾಜಕಾರಣ ಮಾಡಿದರೆ ನನಗೆ ರಕ್ತ ಕುದಿಯುತ್ತದೆ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್‌ ಅವರು ಜಿಲ್ಲೆಯ ಶಾಸಕರ ವಿರುದ್ಧ ಹರಿಹಾಯ್ದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ತಮಗೆ ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲ ಎಂದು ಅರ್ಧದಲ್ಲೇ ಎದ್ದು ಹೊರ ನಡೆದ ಸುಮಲತಾ ಅಂಬರೀಶ್ ಜಾ.ದಳ ಶಾಸಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಎಷ್ಟೋ ಚುನಾವಣೆಗಳನ್ನು ಗೆದ್ದು ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸಲಹೆ ಕೊಡುವುದನ್ನು ಬಿಟ್ಟು ಕಿರುಚಾಡಿಕೊಂಡು ಎಂಜಾಯ್‌ ಮಾಡುತ್ತಿದ್ದಾರೆ. ಇಲ್ಲೇನು ಡ್ರಾಮಾ ನಡೆಯುತ್ತಿದೆಯಾ? ಎಂದು ಪ್ರಶ್ನಿಸಿದರು.

ನಾನು ಒಬ್ಬ ಸಂಸದೆಯಾಗಿ ಆಕ್ಸಿಜನ್ ಸಿಲಿಂಡರ್ ಅನ್ನು ತಂದಿದ್ದೇನೆ. ಈ ಬಗ್ಗೆ ಅವರ ಕ್ಷೇತ್ರದ ಜನತೆ ಕೇಳಿರಬೇಕು. ಅದಕ್ಕಾಗಿ ಒಬ್ಬೊಬ್ಬರೂ ಈ ವಿಷಯದಲ್ಲಿ ರಾಜಕಾರಣ ವಾಡುತ್ತಿದ್ದಾರೆ. ರಾಜಕಾರಣ ಮಾಡಿಕೊಳ್ಳಲಿ, ಮುಂದೆಯೂ ಮಾಡಲಿ.
ನನಗೇನೂ ಬೇಜಾರಿಲ್ಲ. ಕೋವಿಡ್ ಸಮಯದಲ್ಲಿ ಮಾನವೀಯತೆ ತೋರುವುದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು.


Spread the love

About Laxminews 24x7

Check Also

ಹುಬ್ಬಳ್ಳಿ-ಧಾರವಾಡದ ಜನ ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಗೆ ಜಗದೀಶ್​​ ಶೆಟ್ಟರ್‌ ಕೊಡುಗೆ ಏನು? ಲಕ್ಷ್ಮೀ ಹೆಬ್ಬಾಳ್ಕರ್

Spread the love  ಬೆಳಗಾವಿಯಲ್ಲಿ ಮಾತನಾಡಿದ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇದು ನನ್ನ ಕರ್ಮ ಭೂಮಿ ಅಂದ್ರೆ ಸುಮ್ಮನಿರಬೇಕಾ? …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ