Breaking News
Home / Uncategorized / ಜಿಲ್ಲೆಗಳಲ್ಲಿ ಹೇಗಿದೆ ಆಮ್ಲಜನಕ ಸ್ಥಿತಿ ಗತಿ?

ಜಿಲ್ಲೆಗಳಲ್ಲಿ ಹೇಗಿದೆ ಆಮ್ಲಜನಕ ಸ್ಥಿತಿ ಗತಿ?

Spread the love

ಕೋವಿಡ್ ಉಲ್ಬಣಗೊಂಡ ರೋಗಿಗಳಿಗೆ ಪ್ರಾಣವಾಯು ಆಮ್ಲಜನಕದ ಪೂರೈಕೆ ಅತ್ಯಗತ್ಯ. ಆದರೆ ಈಗ ಪ್ರಾಣವಾಯು ತಯಾರಿಸುವುದು ಮತ್ತು ಪೂರೈಕೆಯದ್ದೇ ಚಿಂತೆ. ಚಾಮರಾಜನಗರ ದುರಂತವಂತೂ ಆಡಳಿತ ಯಂತ್ರವನ್ನು ಕಣ್ತೆರೆಯುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಉದಯವಾಣಿ ರಿಯಾಲಿಟಿ ಚೆಕ್‌..

ಹೆಚ್ಚುವರಿ ಬೆಡ್‌ಗೆ ಪ್ರಯತ್ನ; ಬೆಂಗಳೂರು ಗ್ರಾಮಾಂತರ :

ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಐಸಿಯು, ಆಕ್ಸಿಜನ್‌ ಬೆಡ್‌ಗಳಿಗೆ ಖಾಸಗಿ ಆಸ್ಪತ್ರೆ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಹಾಹಾಕಾರ ಉಂಟಾಗಿದೆ. ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 4 ಐಸಿಯು ಬೆಡ್‌, 13 ವೆಂಟಿಲೇಟರ್‌ ಬೆಡ್‌ , 161 ಆಕ್ಸಿಜನ್‌ ಬೆಡ್‌ಗಳಿವೆ. ಖಾಸಗಿ ಆಸ್ಪತ್ರೆಗಳೊಂದಿಗೆ ಸರಕಾರ ಒಪ್ಪಂದ ಮಾಡಿಕೊಂಡು ಸಾಧ್ಯವಾದಷ್ಟು ಹೆಚ್ಚುವರಿ ಬೆಡ್‌ ಸೌಕರ್ಯ ಒದಗಿಸಲು ಪ್ರಯತ್ನಿಸುತ್ತಿದೆ.

ತಯಾರಕ ಸಂಸ್ಥೆಗಳ ಜತೆ ಒಪ್ಪಂದ ; ರಾಮನಗರ :

ತಾಲೂಕು ಬಿಡದಿ ಸಮೀಪವಿರುವ ಬೆಂಟ್ಲೆ ಇಂಡಿಯಾ ಆಕ್ಸಿಜನ್‌ ಸಂಸ್ಥೆ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಆಕ್ಸಿಜನ್‌ ತಯಾರಕ ಸಂಸ್ಥೆಗಳೊಂದಿಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲೆಗೆ ಬೇಕಾಗುವಷ್ಟು ಆಕ್ಸಿಜನ್‌ ಪೂರೈಕೆ ಆಗಲಿದೆ ಎಂದು ಆರೋಗ್ಯಇಲಾಖೆ ಮೂಲಗಳು ತಿಳಿಸಿವೆ. ಹಾರೋಹಳ್ಳಿಯಲ್ಲಿರುವ ಆಕ್ಸಿಜನ್‌ ಘಟಕದಿಂದ ಲಿಕ್ವಿಡ್‌ ಆಕ್ಸಿಜನ್‌ ದಯಾನಂದ ಸಾಗರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಪೂರೈಕೆಯಾಗುತ್ತಿದೆ. ಬಿಡದಿಯ ಬೆಂಟ್ಲೆ ಸಂಸ್ಥೆಯಿಂದ ಕಾನ್ಸಂಟ್ರೇಟೆಡ್‌ ಆಕ್ಸಿಜನ್‌ ಅನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಪೂರೈಸಲು ಒಪ್ಪಂದ ಮಾಡಿಕೊಳ್ಳಲಾಗಿದೆ.

ಆಕ್ಸಿಜನ್‌ ಕೊರತೆ ತಪ್ಪಿದ್ದಲ್ಲ;

ಬೆಳಗಾವಿ :

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚುತ್ತಿರುವುದರಿಂದ ಆಕ್ಸಿಜನ್‌ ಬೇಡಿಕೆಯೂ ಹೆಚ್ಚಾಗುತ್ತಿದೆ. ಬೇರೆ ಕಡೆಯಿಂದ ಪೂರೈಕೆ ಆಗುವ ಆಕ್ಸಿಜನ್‌ ಸದ್ಯ ಜಿಲ್ಲೆಯಲ್ಲಿ 2-3 ದಿನಗಳಿಗೆ ಸಾಕಾಗುವಷ್ಟು ಲಭ್ಯ ಇದ್ದು, ಒಂದು ವೇಳೆ ವಿಳಂಬವಾದರೆ ಕೊರತೆ ಎದುರಿಸಬೇಕಾಗುತ್ತದೆ. ಜಿಲ್ಲೆಗೆ ಬಳ್ಳಾರಿ ಹಾಗೂ ಧಾರವಾಡ ಜಿಲ್ಲೆಗಳಿಂದ ಆಕ್ಸಿಜನ್‌ ಪೂರೈಕೆ ಆಗುತ್ತಿದೆ. ಈ ಎರಡು ಜಿಲ್ಲೆಗಳಿಂದ ಬರುವ ಆಕ್ಸಿಜನ್‌ ಅನ್ನು ನಗರದ ಬಿಮ್ಸ್‌ ಆಸ್ಪತ್ರೆಯ ಘಟಕದಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿಂದ ಬೇರೆ ಕಡೆಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುವ ಕಾರ್ಯ ಮಾಡಲಾಗುತ್ತಿದೆ.

ಹಾಸಿಗೆಗಳ ಕೊರತೆಯೂ ಇದೆ ;

ತುಮಕೂರು :

ಇಲ್ಲಿಯ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಮತ್ತು ಆಕ್ಸಿಜನ್‌ ಕೊರತೆ ಕಂಡು ಬಂದಿದೆ. ಜಿಲ್ಲೆಯಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಹೆಚ್ಚು ಸೋಂಕಿತರಿಗೆ ಸೂಚಿಸಿ ದ್ದಾರೆ. ಜಿಲ್ಲೆಯಲ್ಲಿ ಒಂದು ದಿನಕ್ಕೆ ಎರಡು ಸಾವಿರದ ಮೇಲೆ ಸೋಂಕಿತರು ಕಂಡುಬರುತ್ತಿದ್ದು ಜಿಲ್ಲೆಯಲ್ಲಿ 1,200 ಹಾಸಿಗೆಗಳು ಮಾತ್ರ ಇವೆೆ.

ಮುನ್ನೆಚ್ಚರಿಕೆ ಕ್ರಮ ಅಗತ್ಯ ;

ಮೈಸೂರು :

ಜಿಲ್ಲೆಯಲ್ಲಿ ಪ್ರಸ್ತುತ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಕ್ಸಿಜನ್‌ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಸದ್ಯಕ್ಕೆ ಅಗತ್ಯ ಇರುವಷ್ಟು ಮಾತ್ರ ಆಕ್ಸಿಜನ್‌ ಪೂರೈಕೆಯಾಗುತ್ತಿದೆ. ಒಂದು ವೇಳೆ ಅಗತ್ಯದಷ್ಟು ಪ್ರಮಾಣದ ಆಕ್ಸಿಜನ್‌ ಪೂರೈಕೆಯಾಗದಿದ್ದಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಲಿದೆ. ಜಿÇÉೆಗೆ ಈ ಹಿಂದೆ ದಿನಕ್ಕೆ 22 ಎಂಎಲ್‌ಟಿ ಆಕ್ಸಿಜನ್‌ ಮಾತ್ರ ಬಳಕೆಯಾಗುತ್ತಿತ್ತು. ಇದೀಗ ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ 44 ಎಂಎಲ್‌ಟಿ ಆವಶ್ಯಕತೆ ಎದುರಾಗಿದೆ. ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವಾದರೆ ಮೈಸೂರಿನಲ್ಲೂ ಆಕ್ಸಿಜನ್‌ ಕೊರತೆಯಿಂದ ಸಾವು ಸಂಭವಿಸುವ ಸಾಧ್ಯತೆ ಇದೆ.

ಪೂರೈಕೆಯಲ್ಲಿ ಸಮಸ್ಯೆ ಆಗಿಲ್ಲ;

ದಾವಣಗೆರೆ :

ಜಿಲ್ಲೆಯಲ್ಲಿ ರವಿವಾರದವರೆಗೆ 2,148 ಸಕ್ರಿಯ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಒಟ್ಟು 419 ಸೋಂಕಿತರು ಆಕ್ಸಿಜನ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಆಕ್ಸಿಜನ್‌ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಆಗಿಲ್ಲ.

175 ಆಕ್ಸಿಜನ್‌ ಬೆಡ್‌ ;

ಚಿತ್ರದುರ್ಗ :

ಜಿಲ್ಲಾಸ್ಪತ್ರೆಯಲ್ಲಿ 175 ಆಕ್ಸಿಜನ್‌ ಬೆಡ್‌ಗಳಿದ್ದು, ಎಲ್ಲವೂ ಭರ್ತಿಯಾಗಿವೆ. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ವ್ಯವಸ್ಥೆಯುಳ್ಳ 200 ಬೆಡ್‌ಗಳಿದ್ದು, 86 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಒಂದು ಟ್ಯಾಂಕರ್‌ ಆಕ್ಸಿಜನ್‌ ಲಭ್ಯವಿದ್ದು, ಕೊರತೆ ಇಲ್ಲ.

ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ;

ಧಾರವಾಡ :

ಸದ್ಯ 1,750 ಆಕ್ಸಿಜನ್‌ ಬೆಡ್‌ ಲಭ್ಯವಿದ್ದು, ಎಲ್ಲವೂ ಭರ್ತಿಯಾಗಿವೆ. ಹೆಚ್ಚುವರಿಯಾಗಿ ಇನ್ನೂ 1 ಸಾವಿರ ಬೆಡ್‌ಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆದಷ್ಟು ಬೇಗ ಈ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲೆಯಲ್ಲಿ ಆಕ್ಸಿಜನ್‌ ಘಟಕವಿಲ್ಲ. ಹೀಗಾಗಿ ಬಳ್ಳಾರಿಯ ಜಿಂದಾಲ್‌ನಿಂದ ಆಕ್ಸಿಜನ್‌ ಪೂರೈಕೆಯಿದ್ದು, ಅಗತ್ಯಕ್ಕೆ ತಕ್ಕಷ್ಟು ದಾಸ್ತಾನು ಇದೆ. ಆಕ್ಸಿಜನ್‌ ಕೊರತೆ ಇಲ್ಲ ಎಂದು ಡಿಸಿ ನಿತೇಶ್‌ ಪಾಟೀಲ್‌ಸ್ಪಷ್ಟಪಡಿಸಿದ್ದಾರೆ.

ಕಾಫಿನಾಡಲ್ಲಿ ಆಕ್ಸಿಜನ್‌ ಲಭ್ಯ ;

ಚಿಕ್ಕಮಗಳೂರು :

ಕಾಫಿನಾಡಿನಲ್ಲಿ 2,832 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಸರಕಾರಿ ಆಸ್ಪತ್ರೆಯಲ್ಲಿ 220, ಖಾಸಗಿ ಆಸ್ಪತ್ರೆಯಲ್ಲಿ 130 ಮಂದಿ ಸೋಂಕಿತರಿಗೆ ಆಕ್ಸಿಜನ್‌ ನೀಡಲಾಗುತ್ತಿದೆ. ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆ ಒಂದರಲ್ಲೇ 152 ಜನ ಸೋಂಕಿತರು ಆಕ್ಸಿಜನ್‌ ಬೆಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತೀà ದಿನ 1,900 ಲೀಟರ್‌ ಆಕ್ಸಿಜನ್‌ ಅಗತ್ಯವಿದೆ. ಮಲ್ಲೇಗೌಡ ಸರಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ 6 ಸಾವಿರ ಲೀಟರ್‌ ಲಿಕ್ವಿಡ್‌ ಆಕ್ಸಿಜನ್‌ ಟ್ಯಾಂಕ್‌ ಇದೆ. ಅಲ್ಲದೇ ಬಳ್ಳಾರಿ ಯಿಂದಲೂ ಆಕ್ಸಿಜನ್‌ ತರಿಸಿಕೊಳ್ಳಲಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ 3 ಸಾವಿರ ಲೀಟರ್‌ ಆಕ್ಸಿಜನ್‌ ಲಭ್ಯವಿದೆ.

ಒತ್ತಡ ಕಡಿಮೆ ಮಾಡಿದ ಘಟಕ ;

ಶಿವಮೊಗ್ಗ :

ಕೋವಿಡ್ ಮೊದಲ ಅಲೆ ಹೆಚ್ಚಿದ ಸಂದರ್ಭದಲ್ಲಿ ಆಕ್ಸಿಜನ್‌ ಕೊರತೆ ಎದುರಾದಾಗ ಜಿಲ್ಲೆಯಲ್ಲಿ 19 ಕೆಎಲ್‌ಡಿ (ಕಿಲೋ ಪರ್‌ ಡೇ) ಘಟಕ ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ಅತೀà ಹೆಚ್ಚು ರೋಗಿಗಳು ದಾಖಲಾಗಿರುವ ಮೆಗ್ಗಾನ್‌ ಮೇಲಿನ ಒತ್ತಡವನ್ನು ಇದು ಕಡಿಮೆ ಮಾಡಿದೆ. ಪ್ರಸ್ತುತ 300ಕ್ಕೂ ಹೆಚ್ಚು ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಕ್ಸಿಜನ್‌ ಪೂರೈಕೆ ಮಾಡಲಾಗುತ್ತಿದೆ. ಪ್ರತೀà ದಿನ 700 ರಿಂದ 800 ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಮುಂದೆ ಆಕ್ಸಿಜನ್‌ ಆಭಾವ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮೂರು ದಿನಗಳಿಗೊಮ್ಮೆ ಬಳ್ಳಾರಿಯಿಂದ ಒಂದು ಲಾರಿ ಆಕ್ಸಿಜನ್‌ ಪೂರೈಕೆಯಾಗುತ್ತಿದ್ದು ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ

ಕಾರವಾರದಲ್ಲಿ ಕೊರತೆಯಿಲ್ಲ ;

ಉತ್ತರ ಕನ್ನಡ :

ಜಿಲ್ಲೆಯಲ್ಲಿ ವೈದ್ಯಕೀಯ ಉದ್ದೇಶಕ್ಕೆ ಬಳಸುವ ಆಕ್ಸಿಜನ್‌ ಕೊರತೆಯಿಲ್ಲ. ಕುಮಟಾದ ಬೆಟುRಳಿ ಬಳಿ ಆಕ್ಸಿಜನ್‌ ಸಂಗ್ರಹ ಟ್ಯಾಂಕ್‌ ಇದ್ದು, ಇದು 13 ಕೆಎಲ್‌ ಆಕ್ಸಿಜನ್‌ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿಂದ ಜಿಲ್ಲೆಯ ಕಾರವಾರ ಕ್ರಿಮ್ಸ್‌ ಆಸ್ಪತ್ರೆ ಸೇರಿದಂತೆ ಎಲ್ಲ 12 ತಾಲೂಕು ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಆಸ್ಪತ್ರೆಗೆ ಅವಶ್ಯ ಇರುವಷ್ಟು ಆಕ್ಸಿಜನ್‌ ಪೂರೈಸಲಾಗುತ್ತಿದೆ. ಪದ್ಮಾವತಿ ಗ್ಯಾಸ್‌ ಎಂಬ ಸಂಸ್ಥೆ ಆಕ್ಸಿಜನ್‌ ಪೂರೈಸುತ್ತಿದ್ದು, ಬೆಟುRಳಿ ಬಳಿಯ ಸಂಗ್ರಹ ಟ್ಯಾಂಕ್‌ಗೆ ಬಳ್ಳಾರಿಯಿಂದ ಆಕ್ಸಿಜನ್‌ ಸರಬರಾಜಾಗುತ್ತದೆ. ಶಿರಸಿ ಸರಕಾರಿ ಆಸ್ಪತ್ರೆ ಹಾಗೂ ಕಾರವಾರ ಕ್ರಿಮ್ಸ್‌ನಲ್ಲಿ ಸರಕಾರಿ ಆಕ್ಸಿಜನ್‌ ಸಂಗ್ರಹ ಘಟಕ ಹಾಗೂ ಉತ್ಪಾದನ ಘಟಕ ಸ್ಥಾಪನೆಗೆ ಪ್ರಯತ್ನಗಳು ನಡೆದಿವೆ.

ನಿತ್ಯ 12 ಕೆಎಲ್‌ ಆಕ್ಸಿಜನ್‌ ಅಗತ್ಯ ;

ಬೀದರ್‌ :

ಕೋವಿಡ್‌ ಸೋಂಕಿತರಿಗಾಗಿ ಬ್ರಿಮ್ಸ್‌ ಮತ್ತು ಇತರ ಆಸ್ಪತ್ರೆಗಳು ಸೇರಿ 860 ಆಕ್ಸಿಜನ್‌ ಸೌಲಭ್ಯವುಳ್ಳ ಹಾಸಿಗೆಗಳಿದ್ದು, 670 ಪಾಸಿಟಿವ್‌ ರೋಗಿಗಳು ಆಕ್ಸಿಜನ್‌ನಲ್ಲಿದ್ದಾರೆ. ಬೀದರ್‌ ಬ್ರಿಮ್ಸ್‌ ಆಸ್ಪತ್ರೆಯಲ್ಲಿ 14 ಕಿಲೋ ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಟ್ಯಾಂಕ್‌ ಇದೆ. ಒಂದು ದಿನ ಕರ್ನಾಟಕ ಗ್ಯಾಸ್‌ ಏಜೆನ್ಸಿ ಮತ್ತೂಂದು ದಿನ ಪ್ರಾಕ್ಸ್‌ ಏರ್‌ ಏಜೆನ್ಸಿಯಿಂದ ಆಕ್ಸಿಜನ್‌ ಸರಬರಾಜು ಮಾಡುತ್ತಿದ್ದಾರೆ. ಪ್ರತೀà ದಿನಕ್ಕೆ 12 ಕೆ.ಎಲ್‌ ಆಕ್ಸಿಜನ್‌ ಅಗತ್ಯವಿದೆ.

ಕಿಮ್ಸ್‌ ಆಸ್ಪತ್ರೆಯಲ್ಲಿ ಇಲ್ಲ ಕೊರತೆ ;

ಹುಬ್ಬಳ್ಳಿ :

ಕಿಮ್ಸ್‌ ಆಸ್ಪತ್ರೆಯಲ್ಲಿ ಸುಮಾರು 800 ಕೊರೊನಾ ಸೋಂಕಿತರು ಆಕ್ಸಿಜನ್‌ ಬೆಡ್‌ನ‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿತ್ಯ 10 ಸಾವಿರ ಲೀಟರ್‌ ಆಕ್ಸಿಜನ್‌ ಅಗತ್ಯವಿದ್ದು, ಯಾವುದೇ ಕೊರತೆ ಉಂಟಾಗಿಲ್ಲ ಎಂದು ಕಿಮ್ಸ್‌ ಮೂಲಗಳು ತಿಳಿಸಿವೆ. 20 ಸಾವಿರ ಲೀಟರ್‌ (20 ಕೆಎಲ್‌) ಸಾಮರ್ಥ್ಯದ ಎರಡು ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಸ್ಟೋರೇಜ್‌ ಟ್ಯಾಂಕ್‌ (ಎಂಎಲ್‌ಒಎಸ್‌ಟಿ)ಘಟಕಗಳು ಇದ್ದು, ಹೊಸಪೇಟೆಯ ಜಿಂದಾಲ್‌ ಕಂಪೆನಿ ಪ್ರತೀà ದಿನ 15 ಟನ್‌ ಆಕ್ಸಿಜನ್‌ ಸರಬರಾಜು ಮಾಡುತ್ತಿದೆ. ಹೀಗಾಗಿ ಸದ್ಯ ಕಿಮ್ಸ್‌ನಲ್ಲಿ ಆಕ್ಸಿಜನ್‌ ಕೊರತೆ ಕಂಡುಬಂದಿಲ್ಲ.


Spread the love

About Laxminews 24x7

Check Also

ಮೇ 7ರಂದು ಮತದಾನ: ಮದ್ಯ ಮಾರಾಟ ನಿರ್ಬಂಧ ಮಾಹಿತಿ

Spread the loveಚಿಕ್ಕಮಗಳೂರು, ಮೇ 04: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ