Breaking News
Home / ರಾಜಕೀಯ / ಕೊರೊನಾ ಪ್ರಕರಣಗಳಲ್ಲಿ ದೇಶದ ಟಾಪ್ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

ಕೊರೊನಾ ಪ್ರಕರಣಗಳಲ್ಲಿ ದೇಶದ ಟಾಪ್ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ.

Spread the love

ಬೆಂಗಳೂರು: ಕೊರೊನಾ ಪ್ರಕರಣಗಳಲ್ಲಿ ದೇಶದ ಟಾಪ್ 3 ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹೀಗಿದ್ರೂ ರಾಜ್ಯದ ಜನಕ್ಕೆ ಸ್ವಲ್ಪವೂ ಸೀರಿಯಸ್‍ನೆಸ್ ಬಂದಿಲ್ಲ. ಮೊದಲ ದಿನ ಜನತಾ ಕರ್ಫ್ಯೂ ಸಕ್ಸಸ್ ಮಾಡಿದ ಜನ, ಎರಡನೇ ದಿನ ಕ್ಯಾರೆ ಅನ್ಲಿಲ್ಲ. ಹಾಗಾದ್ರೆ ರಾಜ್ಯದಲ್ಲಿ ಜನತಾ ಲಾಕ್‍ಡೌನ್ ಮುಂದುವರಿಯುತ್ತಾ..? ಹೀಗೊಂದು ಸುಳಿವನ್ನ ಸರ್ಕಾರವೇ ನೀಡಿದೆ.

ರಾಜ್ಯದಲ್ಲಿ ಜನತಾ ಕರ್ಫ್ಯೂ ಇಷ್ಟಕ್ಕೆ ಮುಗಿಯುವ ಲಕ್ಷಣ ಕಾಣಿಸ್ತಿಲ್ಲ. ಮೇ 12ಕ್ಕೆ ಅಂತ್ಯವಾಗಬೇಕಿರುವ ಜನತಾ ಲಾಕ್‍ಡೌನ್ ಅನ್ನು ಮೇ 19ವರೆಗೆ ವಿಸ್ತರಿಸುವ ಸಾಧ್ಯತೆಗಳು ದಟ್ಟವಾಗಿದೆ. ಇದಕ್ಕೆ ಕಾರಣ ಬೆಂಗಳೂರಿನಿಂದ ಲಕ್ಷಾಂತರ ಮಂದಿ ವಲಸೆ ಹೋಗಿರೋದು, ಗ್ರಾಮಾಂತರ ಪ್ರದೇಶಗಳಿಗೆ ಸೋಂಕು ಹರಡಿರೋದು. ಜೊತೆಗೆ ಬೆಂಗಳೂರಿನ ಪರಿಸ್ಥಿತಿ ಕೈ ಮೀರಿರೋದು.

ಸದ್ಯ ಕರ್ನಾಟಕದಲ್ಲಿ 14 ದಿನಗಳ ಕಾಲ ಜನತಾ ಕಫ್ರ್ಯೂ ವಿಧಿಸಲಾಗಿದೆ. ಮೇ 12ರವರೆಗೆ ಕರ್ಫ್ಯೂ ಇರಲಿದೆ. ಅಗತ್ಯ ಸೇವೆ, ಅಗತ್ಯ ವಾಣಿಜ್ಯ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಆದರೆ ಇದರಿಂದ ಸೋಂಕು ಎಷ್ಟರಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ ಅನ್ನೋದು ದೊಡ್ಡ ಪ್ರಶ್ನೆ. ಯಾಕಂದ್ರೆ ಒಂದು ಚೈನ್ ಬ್ರೇಕ್ ಆಗಬೇಕಾದ್ರೆ ಕನಿಷ್ಟ 14 ದಿನಗಳ ಕಾಲಾವಕಾಶ ಬೇಕು. ಕೊರೊನಾ ಸರಪಳಿ ಮುರಿಯೋದೇ ಸದ್ಯ ಜನತಾ ಕಫ್ರ್ಯೂನ ಉದ್ದೇಶ. 14 ದಿನಗಳ ನಂತರ ಕರ್ಫ್ಯೂ ತೆಗೆದ್ರೆ ಮತ್ತೆ ಸೋಂಕು ವ್ಯಾಪಿಸುತ್ತೆ. ಹೀಗಾಗಿ 21 ದಿನಗಳ ಕರ್ಫ್ಯೂ ಮುಂದುವರಿಸಿದ್ರೆ ಮಾತ್ರ ಒಂದು ಹಂತಕ್ಕೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು ಅನ್ನೋದು ತಜ್ಞರ ಅಭಿಮತ.

ಜಿಲ್ಲೆಗಳಲ್ಲೂ ಬೆಂಗಳೂರಿನ ಪರಿಸ್ಥಿತಿ. ಆದರೆ ವ್ಯವಸ್ಥೆಯೇ ಕುಸಿದು ಹೋಗಲಿದೆ. ಹೀಗಾಗಿ ಜಿಲ್ಲೆಗಳಲ್ಲಿ ಹುಷಾರಾಗಿರುವಂತೆ ಸೂಚನೆ ಕೊಡಲಾಗಿದೆ. ಆದ್ರೆ ಪರಿಸ್ಥಿತಿ ಇದೇ ರೀತಿ ಮುಂದುವರಿದ್ರೆ, ಜನತಾ ಕರ್ಫ್ಯೂ ಮತ್ತೊಂದು ವಾರಕ್ಕೆ ವಿಸ್ತರಿಸುವ ಕುರಿತು ಸಚಿವ ಜಗದೀಶ್ ಶೆಟ್ಟರ್ ಸುಳಿವು ಕೊಟ್ಟಿದ್ದಾರೆ.

ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಮುಂದುವರಿಯುವ ಸಾಧ್ಯತೆನೇ ಹೆಚ್ಚು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೂಡ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲಾ ಜಿಲ್ಲೆಗಳ ಡಿಸಿ, ಜಿಪಂ ಸಿಇಓ ಮತ್ತು ಡಿಹೆಚ್‍ಓಗಳ ಜೊತೆ ವರ್ಚೂವಲ್ ಸಂವಾದ ನಡೆಸಿ, ಮೇ 12ರ ವರೆಗೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡ್ಬೇಕು. ಯಾವುದೇ ಮುಲಾಜಿಲ್ಲದೆ ಅದನ್ನು ಕಾರ್ಯರೂಪಕ್ಕೆ ತರಬೇಕು. ಜನರು ಓಡಾಡದಂತೆ ಪೊಲೀಸರು ನಿಗಾ ವಹಿಸಬೇಕು. ಈ 14 ದಿನಗಳಲ್ಲಿ ಸೋಂಕು ನಿಯಂತ್ರಣ ಮಾಡಲೇಬೇಕು ಅಂತ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಬೆಂಗಳೂರಿಂದ ಹಳ್ಳಿಗಳಿಗೆ ಹೋಗಿರುವವರ ಬಗ್ಗೆ ನಿಗಾ ಇಡಿ. ಪ್ರತಿ ತಾಲೂಕಿನಲ್ಲಿಯೂ ಕೋವಿಡ್ ಕೇರ್ ಸೆಂಟರ್ ಮಾಡಿ ಎಂದು ಸಿಎಂ ನಿರ್ದೇಶನ ನೀಡಿದ್ದಾರೆ. ಜನತಾ ಕಫ್ರ್ಯೂವನ್ನು ಮತ್ತೊಂದು ವಾರಕ್ಕೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಜನತಾ ಲಾಕ್‍ಡೌನ್ ಮಾರ್ಗಸೂಚಿಯನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರ, ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಹಾಲು ಮಾರಾಟ ಮಾಡಲು ನಂದಿನಿ ಮಳಿಗೆಗಳಿಗೆ ಅವಕಾಶ ನೀಡಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ