Breaking News
Home / Uncategorized / ಸಮಾಜಕ್ಕೆ ಮಾರಕವಾಗಿರುವ  6000 ಕೆ.ಜಿ. ತಂಬಾಕು ಉತ್ಪನ್ನಗಳನ್ನು ವಶಕ್ಕೆ: ಅಶೋಕ ತೇಲಿ 

ಸಮಾಜಕ್ಕೆ ಮಾರಕವಾಗಿರುವ  6000 ಕೆ.ಜಿ. ತಂಬಾಕು ಉತ್ಪನ್ನಗಳನ್ನು ವಶಕ್ಕೆ: ಅಶೋಕ ತೇಲಿ 

Spread the love

ಬೆಳಗಾವಿ : ಬೆಳಗಾವಿ ಉಪವಿಭಾಗಾಧಿಕಾರಿ ಅಶೋಕ ತೇಲಿ ಇಂದು ಖಾನಾಪುರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 6,000 ಕೆಜಿ  ಅಕ್ರಮ ತಂಬಾಕು ವಶಕ್ಕೆ ಪಡೆಯಲಾಗಿದೆ.
 ಖಾನಾಪುರದ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟಿರುವ ಸಮಾಜಕ್ಕೆ ಮಾರಕವಾಗಿರುವ  6000 ಕೆ.ಜಿ. ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂರು ಸಾವಿರ ಕೆಜಿ ಬಿಡಿ ತಂಬಾಕು ವಶಪಡಿಸಿಕೊಂಡಿದ್ದು, ಇದರಲ್ಲಿ ಲೇಬಲ್, ಪ್ಯಾಕಿಂಗ್ ಇರಲಿಲ್ಲ. ಇನ್ನೂ ಮೂರು ಸಾವಿರ ಕೆಜಿ ಅಕ್ರಮ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಎಪ್ಪತ್ತು ಕೆಜಿ ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ.
3000 ಕೆಜಿ ಸಡಿಲವಾದ ತಂಬಾಕು, ಮತ್ತೊಂದು 3000 ಕೆಜಿ ತಂಬಾಕು ಉತ್ಪನ್ನಗಳು ಅವರ ಅನುಮತಿ ಕೂಡ ತೆಗೆದುಕೊಂಡಿರಲಿಲ್ಲ. ತಂಬಾಕು ಉತ್ಪನ್ನಗಳು ಸರಿಯಾದ ಪ್ಯಾಕೇಜ್, ಲೇಬಲಿಂಗ್, ವಾರ್ಮಿಂಗ್ ಸಂದೇಶ / ಚಿತ್ರ ಮತ್ತು ನಿಕೋಟಿನ್ ಮತ್ತು ಟಾರ್ ವಿಷಯಗಳ ವಿವರಗಳನ್ನು ಹೊಂದಿರಬೇಕು.
ಆದರೆ ಇವು ಇದರಲ್ಲಿ ಇರಲಿಲ್ಲ ಹೀಗಾಗಿ ಅದನ್ನು ವಶಕ್ಕೆ ಪಡೆಯಲಾಗಿದೆ  ಎಂದು ಅಶೋಕ ತೇಲಿ ತಿಳಿಸಿದ್ದಾರೆ.
ಡಬ್ಲ್ಯುಎಚ್‌ಒ ವರದಿಗಳ ಪ್ರಕಾರ, ಪ್ರತಿ ವರ್ಷ ಭಾರತದಲ್ಲಿ ಧೂಮಪಾನ, ತಂಬಾಕು, ಚೂಯಿಂಗ್ ಮುಂತಾದ ಸಮಸ್ಯೆಗಳಿಂದಾಗಿ 10 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.  ಅದರ ಮಾರಾಟವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.  ತಂಬಾಕು ಸಂಬಂಧಿತ ಸಮಸ್ಯೆಗಳಿಂದ ಭಾರತದಲ್ಲಿ ಪ್ರತಿ ವರ್ಷ 12 ಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.
 
ದಾಳಿ ವೇಳೆ ಖಾನಾಪುರ ಪಿಎಸ್ಐ ಬಸನಗೌಡ ಪಾಟೀಲ, ಆಹಾರ ಶಿರಸ್ತೇದಾರ ರವಿಕುಮಾರ ಉದಾನಶೆಟ್ಟಿ, ತಾಲ್ಲೂಕು ಆರೋಗ್ಯಾಧಿಕಾರಿ ನಾಂದ್ರೆ, ಇತರ  ಆಹಾರ ಸುರಕ್ಷತಾ ಅಧಿಕಾರಿಗಳು, ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Spread the love

About Laxminews 24x7

Check Also

ಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್

Spread the loveಭೀಕರ ಅಪಘಾತದಲ್ಲಿ ಗಾಯಗೊಂಡ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಬೆಂಗಳೂರು, ಮೇ. 03 : ಬೆಂಗಳೂರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ