Breaking News
Home / ಜಿಲ್ಲೆ / ಬೆಂಗಳೂರು / ಇಲ್ಲೊಬ್ಬ ಹೆಣ್ಮಗಳು ತನ್ನ ಪತಿಯನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕೇಳಿದರೆ ಎದೆ ಝಲ್ಲೆನ್ನುತ್ತದೆ.

ಇಲ್ಲೊಬ್ಬ ಹೆಣ್ಮಗಳು ತನ್ನ ಪತಿಯನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕೇಳಿದರೆ ಎದೆ ಝಲ್ಲೆನ್ನುತ್ತದೆ.

Spread the love

ಬೆಂಗಳೂರು – ಕೊರೋನಾ ದಿನದಿಂದ ದಿನಕ್ಕೆ ಎಂತೆಂತವರ ಜೀವವನ್ನು ಕಸಿದುಕೊಳ್ಳುತ್ತಿದೆ ಎಂದು ನೋಡಿದಾಗ ನಿಂತಲ್ಲೇ ಕುಸಿದು ಬೀಳುವಂತಾಗಿದೆ.
ಪತ್ನಿ ಪತಿಯನ್ನು ಉಳಿಸಿಕೊಳ್ಳಲು, ತಾಯಿ ಮಗನನ್ನು ಉಳಿಸಿಕೊಳ್ಳಲು, ಮಗ ತಂದೆ-ತಾಯಿಯನ್ನು ಉಳಿಸಿಕೊಳ್ಳಲು ಹೆಣಗಾಡುವುದನ್ನು ಕೇಳಿದರೆ ಈ ಜೀವನದ ಮೇಲಿನ ಭರವಸೆಯೇ ಹೊರಟು ಹೋಗುವಂತಾಗಿದೆ.
ಇಲ್ಲೊಬ್ಬ ಹೆಣ್ಮಗಳು ತನ್ನ ಪತಿಯನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕೇಳಿದರೆ ಎದೆ ಝಲ್ಲೆನ್ನುತ್ತದೆ. ಇದು ಒಬ್ಬ ಹೆಣ್ಮಗಳ ಕಥೆಯಲ್ಲ, ಸಾವಿರಾರು ಜನರು ಕ್ಷಣ 7ಣವೂ ಪಡುತ್ತಿರುವ ಪಾಡು. ಇದಕ್ಕೊಂದು ಅಂತ್ಯ ಬೇಕಾಗಿದೆ. ಕೊರೋನಾ ನಿಯಂತ್ರಿಸಲು ನಾವು ಶಕ್ಯರಾಗದಿದ್ದರೆ, ನಮ್ಮನ್ನು ನಿಯಂತ್ರಿಸಿಕೊಳ್ಳಲೂ ನಮ್ಮಿಂದಾಗುವುದಿಲ್ಲವೇ?
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ಸುಮಾ ಎನ್ನುವ ಮಹಿಳೆ ಸಾವಿರಾರು ಜನರಿಗೆ ನಿತ್ಯ ಸಹಾಯ ಮಾಡುತ್ತಿರುತ್ತಾರೆ. ಆದರೆ ತಾವು ಹಾಗೂ ತಮ್ಮ ಪತಿ ಸಂಕಷ್ಟಕ್ಕೊಳಗಾದಾಗ ಪರಿಹಾರ ಸಿಗದೆ ಪತಿಯನ್ನು ಕಳೆದುಕೊಡ ಪರಿ ನೋಡಿ… ಅವರೇ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ… ಓದಿ.
ಸ್ನೇಹಿತರೆ,
 ನಾವಿಬ್ರೂ ಜ್ವರ ಮತ್ತು ಚಳಿ ಎಂದು ಮೂರು ಬಾರಿ ಸ್ವಾಬ್ ಟೆಸ್ಟ್ ಅನ್ನು ಮಾಡಿಸಿದೆವು. ನೆಗೆಟಿವ್ ಎಂಬ ವರದಿ ಬಂದಿತು. ಜ್ವರ ಜಾಸ್ತಿಯಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಲು ತುಂಬಾ ಪರದಾಡಿದೆವು. ಪಾಸಿಟಿವ್ ಇಲ್ಲಾ ಅಂತಾ BU ನಂಬರ್ ಕೂಡ ಜನರೇಟ್ ಆಗ್ಲಿಲ್ಲ. BU ನಂಬರ್ ಇಲ್ಲದೇ, ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ.
ನಾನ್ ಕೊವಿಡ್ ಪೇಷೆಂಟ್ ಅಂತಾ ಕೋರಿದರೂ, ಯಾರೂ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಿಲ್ಲ. ಕೊನೆಗೆ ನಮ್ಮ ಸಂಬಂಧಿಕರ ನೆರವಿಂದ ಶುಕ್ರವಾರದಂದು  ರಾಮಯ್ಯ ಆಸ್ಪತ್ರೆಗೆ ಇಬ್ಬರೂ ದಾಖಲು ಗೊಂಡೆವು. ಅಡ್ಮಿಟ್ ಆದ ಮೇಲೆ ಶಿಷ್ಟಾಚಾರ ಎಂದುಕೊಂಡು ಯಾವುದೇ ಇಂಜಕ್ಷನ್, ಆಕ್ಸಿಜನ್ ಕೊಡುವುದಕ್ಕೆ ಎರಡು ದಿನ ತಡ ಮಾಡಿದರು. Saturation level ಕಡಿಮೆ ಆದಾಗ ಇಂಜಕ್ಷನ್ ಆಕ್ಸಿಜನ್ ಕೊಟ್ಟರು. ನನ್ನ ಯಜಮಾನರು ನನಗೆ ಕರೆ ಮಾಡಿ ಇಲ್ಲಿ ತುಂಬಾ ಕಷ್ಟ ಆಗುತ್ತಿದೆ ಬಾ ಎಂದಾಗ ತಕ್ಷಣ ಅವರ ಬ್ಲಾಕ್ ಗೆ ಓಡಿ ಹೋಗಿ ನರ್ಸ್ ಗೆ ವರದಿ ಮಾಡಿದೆ.
ನನ್ನ ಆಕ್ಸಿ ಮೀಟರ್ ನಲ್ಲಿ ಪರೀಕ್ಷೆ ಮಾಡಿದಾಗ, ಯಾವಾಗ್ಲೂ 98 ಇರುತಿತ್ತು. ಆದ್ರೆ ಅದು 84 ಕ್ಕೇ ಇಳಿಕೆಗೊಂಡಿತ್ತು. ತಕ್ಷಣ ಫೋನ್ ಮಾಡಿ ತಿಳಿಸಿದೆ. ಆಕ್ಸಿಜನ್ ಸ್ಟ್ರೆಚ್ಚರ್ ಸಿಗದೇ, duty ಡಾಕ್ಟರ್ ಕೂಡ ಸಿಗದೇ, ಅಲ್ಲೆ ಇದ್ದ ಕೋವಿಡ್ ಪೇಷಂಟ್ ಸಹಾಯದಿಂದ ನಾನೇ ಅವರನ್ನು ಸ್ಟ್ರೆಚ್ಚ ರ್ ಗೆ ಶಿಫ್ಟ್ ಮಾಡಿದೆ. CPR ಎಲ್ಲಾ ಮಾಡಿದೆವು. ಓಡುತ್ತಲೇ ಹೋಗಿ ICU ಗೆ ಶಿಫ್ಟ್ ಮಾಡಿದೆವು. ಆದ್ರೆ 51,45,35 ಎಂದು ಇಳಿಕೆ ಆಗುತ್ತಲೇ ಪ್ರಾಣ ಪಕ್ಷಿ ಹೋಗೆ.. ಬಿಟ್ಟಿತು. 
ನನ್ನ ಆರೋಗ್ಯ ಇನ್ನು ಸ್ಥಿರವಾಗಬೇಕು.  ದಯವಿಟ್ಟು ನನಗಾದ ಅನ್ಯಾಯ ಯಾರಿಗೂ ಆಗಬಾರದು. ಇಂತಹ ಸೂಕ್ಷ್ಮತೆ ಗಳ ಬಗ್ಗೆ ಚರ್ಚಿಸಿ  ಥ್ರಾಕ್ಸ್  ( HRCT throx ) ಪರೀಕ್ಷೆಗೂ BU ನಂಬರ್ ಜನರೇಟ್ ಮಾಡೋ ರೀತಿ ಮಾಡಿ. ಸರ್, ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಸಂಪರ್ಕಾಧಿಕಾರಿಯಾಗಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ಆದ್ರೆ ಆಸ್ಪತ್ರೆಯಲ್ಲಿ ಇದ್ದುಕೊಂಡೇ ನನ್ನ ಪತಿಯನ್ನು ಉಳಿಸಿಕೊಳ್ಳುವಲ್ಲಿ ನಾನು ವಿಫಲಗೊಂಡೆ ಎಂಬುದು ಬಹುವಾಗಿ ಕಾಡುತ್ತಿದೆ

Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ