Breaking News
Home / ಜಿಲ್ಲೆ / ಬೆಂಗಳೂರು / ಅಘೋಷಿತ ಲಾಕ್​ಡೌನ್ ವೇಳೆಯೂ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ; ಇವರಷ್ಟೇ ಮಾತ್ರ ಪ್ರಯಾಣಿಸಬಹುದು?

ಅಘೋಷಿತ ಲಾಕ್​ಡೌನ್ ವೇಳೆಯೂ ಬಿಎಂಟಿಸಿ ಬಸ್ ಸಂಚಾರಕ್ಕೆ ಅನುಮತಿ; ಇವರಷ್ಟೇ ಮಾತ್ರ ಪ್ರಯಾಣಿಸಬಹುದು?

Spread the love

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್ ಘೋಷಣೆ ಮಾಡಿದೆ. ಈ ವೇಳೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ವೇಳೆ ಎಲ್ಲ ಸಾರಿಗೆ ಓಡಾಟವನ್ನು ನಿಷೇಧಿಸಲಾಗಿದೆ. ಆದರೆ, ಕೆಲವು ನಿರ್ದಿಷ್ಟ ಉದ್ಯೋಗಿಗಳ ಓಡಾಟದ ಅನುಕೂಲಕ್ಕಾಗಿ ಬಿಎಂಟಿಸಿ ಬಸ್ ಓಡಾಟಕ್ಕೆ ಅನುಮತಿ ನೀಡಲಾಗಿದೆ.

ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಿಎಂಟಿಸಿ ಬಸ್ ಓಡಾಡಲಿವೆ. ಸರ್ಕಾರಿ ನೌಕರರು, ಇತರೆ ಸರ್ಕಾರಿ ಸಂಸ್ಥೆಗಳ ನೌಕರರು ಹಾಗೂ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಮಾತ್ರ ಪ್ರಯಾಣಕ್ಕೆ‌ ಅವಕಾಶ ಕಲ್ಪಸಲಾಗಿದೆ. ಅದಕ್ಕಾಗಿ ಬಿಎಂಟಿಸಿ ವಲಯವಾರು ಬಸ್ ವಿಂಗಡನೆ ಮಾಡಿದೆ. ಎಲ್ಲಾ ಆರು ವಲಯಗಳಲ್ಲೂ ನಿಗದಿತ ಬಸ್​ಗಳು ಮಾತ್ರ ಓಡಾಟ ಮಾಡಲಿವೆ. ಪೂರ್ವ ವಲಯಕ್ಕೆ ಒಟ್ಟು 26 ಬಸ್‌ಗಳು, ಪಶ್ಚಿಮ ವಲಯಕ್ಕೆ ಒಟ್ಟು 29 ಬಸ್‌ಗಳು, ಉತ್ತರ ವಲಯಕ್ಕೆ 39 ಬಸ್ ಗಳು, ದಕ್ಷಿಣ ವಲಯಕ್ಕೆ 30 ಬಸ್‌ಗಳು, ಈಶಾನ್ಯ ವಿಭಾಗದಿಂದ 27 ಬಸ್‌ಗಳ ಓಡಾಟ, ಕೇಂದ್ರ ವಲಯದಿಂದ‌ 6 ಬಸ್‌ಗಳ ಸೇವೆ (Mejestic to KIA) ಕಲ್ಪಿಸಲಾಗಿದೆ.

ಯಾರಿಗಾಗಿ ಈ ವ್ಯವಸ್ಥೆ.!?

    • ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಸಿಬ್ಬಂದಿಗಳು

 

    • ಪೊಲೀಸ್, ಅಗ್ನಿ ಶಾಮಕ, ಗೃಹ ರಕ್ಷಕ ದಳ, ಪೊಲೀಸ್ ತುರ್ತು ಸೇವಾ ಸಿಬ್ಬಂದಿಗಳು

 

    • ಬಿಬಿಎಂಪಿ, ಬೆಸ್ಕಾಂ, ಬಿಡಬ್ಲ್ಯೂ‌ಎಸ್‌ಎಸ್‌ಬಿ ಸಿಬ್ಬಂದಿಗಳು

 

    • ರೋಗಿಗಳು ಹಾಗೂ ಅವರ ಸಹಾಯಕರು

 

    • ಮೇಲ್ಕಂಡ ಸಿಬ್ಬಂದಿಗಳು ಅವರ ಭಾವ ಚಿತ್ರವಿರುವ ಗುರುತಿನ ಚೀಟಿ ಕಡ್ಡಾಯ

 

    • ರೋಗಿಗಳು ಅವರ ವೈದ್ಯಕೀಯ ವರದಿ ಕಡ್ಡಾಯ

 

  • ಇದರ ಹೊರತು ಸಾರ್ವಜನಿಕರು ಓಡಾಟಕ್ಕೆ ಬಸ್ ಬಳಸುವಂತಿಲ್ಲ

Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ