Breaking News
Home / ಹುಬ್ಬಳ್ಳಿ / ರೈಲ್ವೆ ಇಲಾಖೆ ಹುಬ್ಬಳ್ಳಿ ವಿಭಾಗದಿಂದ ಪಾರ್ಸೆಲ್ ಸಾಗಣೆಗೆ ಎನ್.ಎಂ.ಜಿ ರೇಕ್ ಗಳ ಬಳಕೆಗೆ ನಿರ್ಧರಿಸಿದೆ.
HUBLI#NEWS#RAILWAT#
HUBLIRAILWAY STATION

ರೈಲ್ವೆ ಇಲಾಖೆ ಹುಬ್ಬಳ್ಳಿ ವಿಭಾಗದಿಂದ ಪಾರ್ಸೆಲ್ ಸಾಗಣೆಗೆ ಎನ್.ಎಂ.ಜಿ ರೇಕ್ ಗಳ ಬಳಕೆಗೆ ನಿರ್ಧರಿಸಿದೆ.

Spread the love

ಹುಬ್ಬಳ್ಳಿ: ರೈಲ್ವೆ ಇಲಾಖೆ ಹುಬ್ಬಳ್ಳಿ ವಿಭಾಗದಿಂದ ಪಾರ್ಸೆಲ್ ಸಾಗಣೆಗೆ ಎನ್.ಎಂ.ಜಿ ರೇಕ್ ಗಳ ಬಳಕೆಗೆ ನಿರ್ಧರಿಸಿದೆ.

ಭಾರತೀಯ ರೈಲ್ವೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹುಬ್ಬಳ್ಳಿ ವಿಭಾಗವು ಬಳಕೆಯಾಗದ ಸಾಮಾನ್ಯ ದ್ವಿತಿಯ ದರ್ಜೆಯ ಕೋಚ್ ಗಳನ್ನು ಪಾರ್ಸೆಲ್ ಸಾಗಣೆಗೆ ಬಳಸಿಕೊಂಡಿತ್ತು. ಇದೀಗ ಬಳಕೆಯಾಗದ ಎನ್.ಎಂ.ಜಿ ರೇಕ್ ಗಳನ್ನು ಪಾರ್ಸೆಲ್ ಸಾಗಣೆಗೆ ಉಪಯೋಗಿಸಿದೆ.

ಎನ್.ಎಂ.ಜಿ ರೇಕ್ ಗಳನ್ನು ಸಾಮಾನ್ಯವಾಗಿ ವಾಹನಗಳ ಸಾಗಾಣಿಕೆಗೆ ಬಳಸಲಾಗುತ್ತದೆ. 25 ಎನ್.ಎಂ. ವ್ಯಾಗನ್ ಗಳ ಮೂಲಕ 210 ಟನ್ ವಸ್ತುಗಳನ್ನು ಗೋವಾ ರಾಜ್ಯದ ವಾಸ್ಕೋಡ ಗಾಮಾ ನಿಲ್ದಾಣದಿಂದ ಹರ್ಯಾಣದ ಖೋರಿ ನಿಲ್ದಾಣಕ್ಕೆ ಏ.23ರಂದು ಸಾಗಣೆ ಮಾಡಿತು. ಪಾರ್ಸೆಲ್ ಮಾಡಲಾದ ಸರಕುಗಲಲ್ಲಿ ಟೈರ್, ಆಹಾರೋತ್ಪನ್ನಗಳು, ಮತ್ತು ಇತರ ವಸ್ತುಗಳು ಸೇರಿವೆ. ಇವುಗಳ ಮೂಲಕ ವಿಭಾಗಕ್ಕೆ 12 ಲಕ್ಷ ಆದಾಯ ಲಭಿಸಿದೆ.

ಇದಕ್ಕೂ ಮುನ್ನ ಏ.16ರಂದು ಮಾಡಿದ್ದ ಪಾರ್ಸೆಲ್ ಮೂಲಕ 11.7 ಲಕ್ಷ ಆದಾಯ ಬಂದಿತ್ತು. ಹುಬ್ಬಳ್ಳಿ ವಿಭಾಗವು 2021 ಏಪ್ರಿಲ್ ವರೆಗೆ 1.06 ಕೋಟಿ ರೂಪಾಯಿಗಳ ಪಾರ್ಸೆಲ್ ಆದಾಯಗಳನ್ನು ಗಳಿಸಿದೆ.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ