Breaking News
Home / ಜಿಲ್ಲೆ / ಚಿಕ್ಕ ಮಂಗಳೂರು / ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ…………

ಕಾಫಿನಾಡ ಕಾಡಲ್ಲಿ ಬಂಗಾರದ ಕಾಡೆಮ್ಮೆ ಪತ್ತೆ…………

Spread the love

ಚಿಕ್ಕಮಗಳೂರು: 1980-90 ದಶಕದಲ್ಲಿ ಕಣ್ಮರೆಯಾಗಿದ್ದ ಅಪರೂಪದ ಕಾಟಿ ತಳಿಯ ಕಾಡೆಮ್ಮೆ ಸಂತತಿ ಮತ್ತೆ ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಮುತ್ತೋಡಿ ವಲಯದಲ್ಲಿ ಪತ್ತೆಯಾಗಿದೆ.

ಕಾಡೆಮ್ಮೆಗಳು ಬಹುತೇಕ ಕಪ್ಪು ಬಣ್ಣದಿಂದ ಕೂಡಿರುತ್ತವೆ. ಆದರೆ ಕಾಟಿ ತಳಿಯ ಈ ಕಾಡೆಮ್ಮೆ ಬಂಗಾರದ ಬಣ್ಣದಿಂದ ಕಂಗೊಳಿಸುತ್ತಿದೆ. ಈ ಅಪರೂಪದ ಕಾಡೆಮ್ಮೆ ಬಣ್ಣ ಹಾಗೂ ಮೈಕಟ್ಟು ನೋಡುಗರಲ್ಲಿ ಅಚ್ಚರಿ ಮೂಡಿಸಿದರೂ 80-90ರ ದಶಕದಲ್ಲಿ ಈ ತಳಿಯ ಕಾಡೆಮ್ಮೆಗಳು ಕಾಫಿನಾಡ ಅರಣ್ಯದಲ್ಲಿ ಇತ್ತು. ಆಗ ಇಂದರ್ಫಿಸ್ಟ್ ಎಂಬ ಕಾಯಿಲೆಯಿಂದ ಈ ತಳಿ ಸಂಪೂರ್ಣ ನಾಶವಾಗಿತ್ತು. ಇದೀಗ ಮತ್ತೆ ಈ ತಳಿಯ ಕಾಡೆಮ್ಮೆ ಪತ್ತೆಯಾಗಿರೋದು ಈ ತಳಿಗಳ ಬೆಳವಣಿಗೆಯಾಗಿದೆ ಎಂದೇ ಭಾವಿಸಲಾಗಿದೆ.

ಹುಲಿಗಳಲ್ಲಿ ಬಿಳಿ ಹುಲಿ, ಚಿರತೆಗಳಲ್ಲಿ ಕಪ್ಪು ಚಿರತೆ ಇರುವಂತೆ ಕಾಡೆಮ್ಮೆಗಳಲ್ಲಿ ಈ ರೀತಿ ಕಂಡು ಬರಲಿದೆ. ಇದನ್ನ ಇಂಗ್ಲಿಷಿನಲ್ಲಿ ಗಾರ್ ಎಂದು ಕರೆಯುತ್ತಾರೆ. ಈ ಸಂತತಿ ಈಗ ಮತ್ತೆ ಹೆಚ್ಚಾಗಿರೋದ್ರಿಂದ ಈ ರೀತಿ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಚಿನ್ನದ ಲೇಪನದಂತೆ ಹೊಳೆಯುವ ಕಾಡೆಮ್ಮೆಯೊಂದು ಕಂಡಿದ್ದು. ಈ ಭಾಗದಲ್ಲಿ ಈ ರೀತಿಯ ಕಾಡೆಮ್ಮೆ ಕಾಣ ಸಿಗುವುದು ವಿಶೇಷ.

ಜಿಲ್ಲೆಯ ಮುತ್ತೋಡಿ ಅರಣ್ಯ ಹಲವು ವಿಚಿತ್ರ ಹಾಗೂ ವೈವಿಧ್ಯಮಯ ಘಟನೆಗೆ ಸಾಕ್ಷಿಯಾಗಿದೆ. ಈಗ ಸುಮಾರು 30-40 ವರ್ಷಗಳ ಹಿಂದೆಯೇ ನಾಶವಾಗಿರುವ ಪ್ರಾಣಿಗಳ ಸಂತತಿ ಒಂದು ಮತ್ತೆ ಅಭಿವೃದ್ಧಿ ಆಗಿರುವಂಥದ್ದು ಬೆಳಕಿಗೆ ಬಂದಂತಿದೆ. ಈ ಕಾಡೆಮ್ಮೆ ಇರುವುದು ಅಪರೂಪ, ನಿಸರ್ಗದಲ್ಲಿ ಅನೇಕ ವಿಸ್ಮಯಗಳು ನಡೆಯುತ್ತದೆ. ಅಂತಹಾ ವಿಸ್ಮಯಗಳಲ್ಲಿ ಇದು ಕೂಡ ಸಹಜ. ನೋಡಲು ಬಂಗಾರದ ಲೇಪನವಾದಂತೆ ಕಾಣೋ ಈ ಕಾಡೆಮ್ಮೆ ನೋಡುಗರ ಗಮನ ಸೆಳೆದಿದೆ.


Spread the love

About Laxminews 24x7

Check Also

ಬಹುಭಾಷಾ ನಟ ಪ್ರಕಾಶ್ ರೈ ಮತ ಚಲಾಯಿಸಿದ್ದು ಯಾರಿಗೆ ಗೊತ್ತಾ?

Spread the love ಲೋಕಸಭೆ ಚುನಾವಣೆ 2024 ರ ಎರಡನೇ ಹಂತದಲ್ಲಿ ಇಂದು ಶುಕ್ರವಾರ (ಏಪ್ರಿಲ್ 26) ಆರಂಭವಾಗಿದೆ. 13 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ