Breaking News
Home / Uncategorized / ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವಿ : ಮುಷ್ಕರ ನಿರತ ‘ಸಾರಿಗೆ ನೌಕರ’ರಿಗೆ ಅಧಿಕಾರಿಗಳಿಂದ ‘ಬ್ಲಾಕ್‌ಮೇಲ್’.?

ಕೆಲಸಕ್ಕೆ ಬರದಿದ್ದರೆ ವಜಾ ಮಾಡ್ತೀವಿ : ಮುಷ್ಕರ ನಿರತ ‘ಸಾರಿಗೆ ನೌಕರ’ರಿಗೆ ಅಧಿಕಾರಿಗಳಿಂದ ‘ಬ್ಲಾಕ್‌ಮೇಲ್’.?

Spread the love

ಬೆಂಗಳೂರು : ರಾಜ್ಯ ಸರ್ಕಾರವು ಈಗಾಗಲೇ 8 ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿದೆ. ಆದ್ರೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು, 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಬೇಕು ಎನ್ನುವ ಬೇಡಿಕೆ ಮಾತ್ರ ಈಡೇರಿಸೋದಕ್ಕೆ ಬಿಲ್ ಕುಲ್ ನೋ ಎಂದಿದೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಇಂದು ಕಾಲಿಟ್ಟಿದೆ. ಇಂತಹ ನೌಕರರನ್ನು ಮನವೊಲಿಸುವ ಬದಲಾಗಿ, ಕೆಲಸಕ್ಕೆ ಬಾರದಿದ್ದರೇ ವಜಾ ಮಾಡ್ತೀವಿ ಎಂಬುದಾಗಿ ಅನೇಕ ಮುಷ್ಕರ ನಿರತ ನೌಕರರಿಗೆ ಅಧಿಕಾರಿಗಳಿಂದ ಬ್ಲಾಕ್ ಮೇಲ್ ತಂತ್ರವನ್ನು ಉಪಯೋಗಿಸುತ್ತಿದೆ ಎನ್ನಲಾಗಿದೆ.

 

ಈ ಕುರಿತಂತೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಡಿಪೋ ಕಂಡಕ್ಟರ್ ಒಬ್ಬರು ಮಾತನಾಡಿದ್ದು, ನೀನೊಬ್ಬನೇ ತರಬೇತಿ ನಿರತ ಕಂಡಕ್ಟರ್ ಇದ್ದೀಯಾ.? ಕೆಲಸಕ್ಕೆ ಬರದಿದ್ದರೇ ವಡಾ ಮಾಡ್ತೀವಿ ಎಂಬುದಾಗಿ ಅಧಿಕಾರಿಗಳು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಇದರಿಂದಾಗಿ ವಿಧಿಯಿಲ್ಲದೇ ತಾವು ಕೆಲಸಕ್ಕೆ ಬಂದಿರೋದಾಗಿ ಹೇಳಿದ್ದಾರೆ.

ಅಂದಹಾಗೇ, ಮುಷ್ಕರ ನಿರತರ ಸಾರಿಗೆ ನೌಕರರ ಕೆಲ ಬೇಡಿಕೆ ಈಡೇರಿಸೋದಕ್ಕೆ ಸರ್ಕಾರ ನಕಾರ ವ್ಯಕ್ತ ಪಡಿಸಿದೆ. ಹೀಗಾಗಿ ಮುಷ್ಕರ ಮುಂದುವರೆದಿದ್ದು, ಮುಷ್ಕರ ನಿರತ ಬಿಎಂಟಿಸಿ 96 ತರಬೇತಿ ನೌಕರರನ್ನು ವಜಾಕೂಡ ಮಾಡಿದೆ. ಅಲ್ಲದೇ ಸಾರಿಗೆ ನೌಕರ ಕ್ವಾಟ್ರಾಸ್ ಗೂ ನೋಟಿಸ್ ಹಚ್ಚಿರುವಂತ ಇಲಾಖೆ, ಕೆಲಸಕ್ಕೆ ಹಾಜರಾಗದಿದ್ದರೇ ಕ್ವಾಟ್ರಾಸ್ ಖಾಲಿ ಮಾಡಿ ಎಂಬುದಾಗಿ ಎಚ್ಚರಿಕೆ ನೀಡಿದೆ. ಈ ಮೂಲಕ ಮುಷ್ಕರ ನಿರತ ಸಾರಿಗೆ ಸಿಬ್ಬಂದಿಗಳಿಗೆ ಕೆಲಸಕ್ಕೆ ಹಾಜರಾಗಲು ಬ್ಲಾಕ್ ಮೇಲ್ ತಂತ್ರಗಾರಿಕೆಯನ್ನು ಅನುಸರಿಸಿದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ