Breaking News

ಸರ್ಕಾರದ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ, ಮುಷ್ಕರ ಮುಂದುವರಿಕೆ: ಕೋಡಿಹಳ್ಳಿ ಚಂದ್ರಶೇಖರ್

Spread the love

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಮೂರನೇ ದಿನ ಮುಂದುವರಿಯುತ್ತಿದ್ದು ಇಲಾಖೆ ನೌಕರರ ಭವಿಷ್ಯ, ಜೀವನದ ಅನೇಕ ಪ್ರಶ್ನೆಗಳನ್ನು ಸರ್ಕಾರದ ಮುಂದಿಡಲಾಗಿದೆ. ನೌಕರರ ಜೀವನ ಸುಧಾರಣೆಗೆ ಸರ್ಕಾರ ತಾರತಮ್ಯ ನೀತಿಯನ್ನು ಅನುಸರಿಸಬಾರದು ಎಂದು ರಾಜ್ಯ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸರ್ಕಾರ ವೇತನ ಶ್ರೇಣಿಯ ವ್ಯತ್ಯಾಸ ಮಾಡುತ್ತಿದೆ. ಸಾರಿಗೆ ನೌಕರರ ವಿಚಾರದಲ್ಲಿ ತಾರತಮ್ಯ ಮಾಡ್ತಿದ್ದಾರೆ. ನಿನ್ನೆಯ ಸಭೆಯಲ್ಲಿ ಯಾವುದೇ ತೀರ್ಮಾನಗಳು ಆಗಿಲ್ಲ. ರಾಜ್ಯ ಸರ್ಕಾರ ನಮ್ಮ‌ ಬೇಡಿಕೆಯನ್ನ ಈಡೇರಿಸಲೇಬೇಕು. ಯಾವ ನೌಕರರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ದಿಟ್ಟತನದಿಂದ ಹೋರಾಡಿ, ಪರಿಹಾರ ಕಂಡುಕೊಳ್ಳಲಿ. ಸಾರಿಗೆ ನೌಕರರ ಆತ್ಮಹತ್ಯೆ ವಿಷಾದನೀಯ. ನೋಟಿಸ್ ನೀಡಿ ಸರ್ಕಾರ ಬೆದರಿಕೆ ತಂತ್ರ ಮಾಡುತ್ತಿದೆ. ಇದಕ್ಕೆ ಸಾರಿಗೆ ನೌಕರರು ಹೆದರುವುದಿಲ್ಲ ಎಂದು ಹೇಳಿದ್ದಾರೆ.

40 ವರ್ಷದ ಮೇಲಾದರೂ ಕೂಡ ಸರ್ಕಾರ ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ವೇತನ ಜಾರಿಗೆ ತಂದಿಲ್ಲ. 6ನೇ ವೇತನ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು. ಆ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೂಡಲೇ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ