Breaking News
Home / ರಾಜ್ಯ / ಖಾಕಿಯೊಳಗೊಬ್ಬ ಸೃಜನಶೀಲ ಕಲಾವಿದ

ಖಾಕಿಯೊಳಗೊಬ್ಬ ಸೃಜನಶೀಲ ಕಲಾವಿದ

Spread the love

ಕಲೆಯ ಹವ್ಯಾಸ ನಮ್ಮ ವ್ಯಕ್ತಿ . ಕೌಶಲ್ಯ ಹಾಗೂ ಜೀವನ ಪಥದಲ್ಲಿ ಎಂದಿಗೂ ಸ್ಫೂರ್ತಿ ನೆಲೆಯಾಗಿರುತ್ತದೆ ಎಂಬುದು ಸುಳ್ಳಲ್ಲ. ನಮ್ಮ ವೃತ್ತಿ ಯಾವುದೇ ಇರಲಿ ಆದರೆ, ನಮ್ಮೊಳಗಿನ ಕಲಾ ಪ್ರತಿಭೆ ಹವ್ಯಾಸವಾಗಿ ಇಂತಹ ಒಂದು ಅಪರೂಪದ ಪ್ರತಿಭೆ ಹಾವೇರಿ ಜಿಲ್ಲೆಯ ಶಿಗ್ಗಾವಿಯ ಶ್ರೀರಾಮುಲು ಕೆ. ಎಂದರೆ ತಪ್ಪಲ್ಲ. ಕೆ.ಶ್ರೀರಾಮುಲು ಅವರುಹೆಚ್.ಸಿ. 215, ಕೆ.ಎಸ್.ಆರ್.ಪಿ. ಹತ್ತನೇ ಪಡೆಯಲ್ಲಿ ಪೋಲೀಸ್ ಹವಾಲ್ದಾರ್ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಕುಪ್ಪಸ್ವಾಮಿ ರೆಡ್ಡಿ, ತಾಯಿ ಸುಶೀಲಮ್ಮ . ಇವರ ಮೂಲ ಸ್ಥಳ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ. ಈ ಬಾರಿಯ ಮುಖ್ಯಮಂತ್ರಿಯವರ ಬಂಗಾರದ ಪದಕ ಪಡೆದ ಹೆಮ್ಮೆಯ ಪೋಲೀಸ್ ಹವಾಲ್ದಾರ್ ಆಗಿದ್ದಾರೆ.

ಮೂಲತಃ ಚಿತ್ರೆಯಲ್ಲಿ ಡಿಪ್ಲೆಮೊ ಪದವಿ ಪಡೆದ ಇವರಿಗೆ ಚಿತ್ರಕಲೆಗೆ ಮೂಲ ಸ್ಪೂರ್ತಿ ಇವರ ತಾಯಿ. ನಾಲ್ಕನೇ ತರಗತಿಯಲ್ಲಿದ್ದಾಗ ತನ್ನ ಗೆಳೆಯರು ಬಿಡಿಸುತ್ತಿದ್ದ ಚಿತ್ರಗಳನ್ನು ನೋಡಿ ಇವರಲ್ಲಿಯೂ ಚಿತ್ರಗಳ ಬಗ್ಗೆ ಆಸಕ್ತಿ ಮೂಡಿತು. ನಂತರ ಚಿತ್ರ ಬರೆಯುವ ಹವ್ಯಾಸ ಪ್ರಾರಂಭವಾಯಿತು ಎನ್ನುತ್ತಾರೆ ಶ್ರೀರಾಮುಲು.

ಬಾಲ್ಯದ ಇವರ ಚಿತ್ರಕಲಾ ತರಬೇತಿ ನೋಡಿ ಕಲಿ-ಮಾಡಿ ತಿಳಿ ಮಾದರಿಯದ್ದು, ಕಾರಣ ಇವರು ಕಲಿಯುವ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಿರಲಿಲ್ಲ. ಎಂಟನೇ ತರಗತಿಗೆ ಬಂದಾಗ ಖ್ಯಾತ ಕಲಾವಿರಾದ ಜಿ.ಕೆ.ಶಿವಣ್ಣ ಅವರು ನನಗೆ ಸೀನಿಯರ್ ಡ್ರಾಯಿಂಗ್ ಎಕ್ಸಾಮ್ ಬರೆಸಿದರು, ಇವರೇ ನನ್ನ ಮೊದಲ ಚಿತ್ರಕಲಾ ಗುರುಗಳು ಎಂದು ಸ್ಮರಿಸುತ್ತಾರೆ. ಆಗ ನಾನು ಚಳ್ಳಕರೆಯ ಪ್ರೌಢಶಾಲೆಯಲ್ಲಿ ಹಂಗಾಮಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದೆ.ನಂತರ ಬೆಂಗಳೂರಿಗೆ ಬಂದ ಮೇಲೆ ಇವರ ಸಂಪರ್ಕವಿರಲಿಲ್ಲ. ನನಗೆ ಅವರ ನೆನಪೂ ಇರಲಿಲ್ಲ.

10ನೇ ತರಗತಿಯನ್ನು ಚಳ್ಳಕೆರೆಯ ಬಿಸಿನೀರು ಮುದ್ದಪ್ಪ ಪ್ರೌಢಶಾಲೆಯಲ್ಲಿ. ನಂತರ ಅಲ್ಲಿಯೇ ಇದ್ದ ರವೀಂದ್ರ ಕಾಲೇಜಿನಲ್ಲಿ ಚಿತ್ರಕಲೆಯ (ಕಮರ್ಷಿಯಲ್ ಆರ್ಟ್) ಡಿಪೆÇ್ಲಮಾ ಮುಗಿಸಿ 1999ರಲ್ಲಿ ಪೋಲೀಸ್ ಇಲಾಖೆಯ ಕೆ.ಎಸ್.ಆರ್.ಪಿ. ವಿಭಾಗಕ್ಕೆ ಸೇರ್ಪಡೆಯಾದರು.

ಪೋಲೀಸ್ ಇಲಾಖೆಗೆ ಬಂದ ಮೇಲೆ ಇಲಾಖೆಗೆ ಬೇಕಾದ ಸೈನ್ ಬೋರ್ಡ್ ಹಾಗು ವಾಹನಗಳಿಗೆ ಹೆಸರು ಬರೆಯುವುದು, ಹಿರಿಯ ಅಧಿಕಾರಿಗಳು ಬಂದಾಗ ಕಾರ್ಯಕ್ರಮಗಳಿಗೆ ಕಲಾತ್ಮಕವಾಗಿ ವೇದಿಕೆ ಸಿದ್ಧಪಡಿಸುವುದು. ಹಿರಿಯ ಅಧಿಕಾರಿಗಳ ಭಾವಚಿತ್ರ ರಚಿಸಿ ಕೊಡುವುದು ಹೀಗೆ ಕರ್ತವ್ಯದ ಜೊತೆ ಜೊತೆಯಲ್ಲಿ ಚಿತ್ರಕಲೆಯನ್ನು ಮುಂದುವರಿಸಿದೆ ಎನ್ನುತ್ತಾರೆ ರಾಮುಲು.

2018ರಲ್ಲಿ ಪೋಲಿಸ್ ಇಲಾಖೆಯಲ್ಲಿ ಇದ್ದು ಚಿತ್ರಕಲೆಯಲ್ಲಿ ಆಸಕ್ತಿ ಇದ್ದ ಪೋಲೀಸ್ ಮತ್ತು ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಅಂದಿನ ಐಜಿಪಿಗಳಾಗಿದ್ದ ನೀಲಮಣಿರಾಜು ಅವರ ಅಧ್ಯಕ್ಷತೆಯಲ್ಲಿ, ಖ್ಯಾತ ಚಲನಚಿತ್ರನಟರಾದ ಯಶ್ ಅವರಿಂದ ಇವರ ಸಮೂಹ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು ಇವರ ಹೆಗ್ಗಳಿಕೆ.
ಅಂದು ನಡೆದ ಈ ಕಲಾಪ್ರದರ್ಶನ ಬಹಳ ಅದ್ದೂರಿಯಾಗಿ ನಡೆದು, ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಅಲ್ಲದೆ ಪೋಲೀಸರೆಂದರೆ ಕೇವಲ ಕ್ರಿಮಿನಲ್‍ಗಳನ್ನು ಹಿಡಿಯುದರಲ್ಲೇ ಇರುತ್ತಾರೆ ಎಂದು ಕೊಂಡಿದ್ದವರಿಗೆ ಅಚ್ಚರಿ ಮೂಡಿಸಿತ್ತು.

ಕಲಾತ್ಮಕತೆ ಮತ್ತು ಸೃಜನಶೀಲತೆ ಇರುವವರು ಇಲ್ಲೂ ಇದ್ದಾರೆ ಎನ್ನುವುದನ್ನು ಈ ಕಾರ್ಯಕ್ರಮ ನಿರೂಪಿಸಿತು. ಆ ಮೂಲಕ ಶ್ರೀರಾಮುಲು ಇಡೀ ಕಲಾವಲಯಕ್ಕೆ ಪರಿಚಿತರಾದರು. ರಿಯಾಲಿಸ್ಟಿಕ್ ತಂತ್ರಗಾರಿಕೆಯಲ್ಲಿ ಪಳಗಿರುವುದು ಇವರ ವಿಶೇಷತೆ.

ಬೆಟಾಲಿಯನ್‍ನಿಗೆ ಉನ್ನತಾಧಿಕಾರಿಯಾಗಿ ಬಂದ ಸುಂದರರಾಜ್ ಅವರು ಇವರ ಚಿತ್ರಕಲೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು, ಶಿಗ್ಗಾವಿ ತಾಲ್ಲೂಕಿನ ಗಂಗೇಬಾವಿ ಇವರು ಗ್ರಾಮದ ಪೋಲಿಸ್ ಪಬ್ಲಿಕ್ ಶಾ¯ಯ ಮಕ್ಕಳಿಗೆ ಬಿಡುವಿನ ವೇಳೆ ಕಲಾ ತರಗತಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಅಲ್ಲಿನ ಗೋಡೆಗಳನ್ನು ಕಲಾತ್ಮಕತೆಯಿಂದ ಚಿತ್ರಗಳ ಮೂಲಕ ಶ್ರೀರಾಮುಲು ರೂಪಿಸಿದ್ದಾರೆ.

ಪೋಲೀಸ್ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆ ಕಾರ್ಯಕ್ರಮಗಳಲ್ಲಿ ಕಲಾತ್ಮಕತೆಯ ಸ್ಪರ್ಶ ಮೂಡಿಸುತ್ತಿದ್ದಾರೆ. ಇವರ ತಂಡದ ಮೈಸೂರು ಲಾನ್ಸೆರ್ ಶೌರ್ಯ ಹಸಿರಾಗಿಸಿದ ಖಾಕಿ ಕಲಾವಿದರು ಎಂಬ ಪೋಲಿಸ್ ಕಲಾವಿದರ ಶಿಬಿರದಲ್ಲಿ ರಚಿಸಿದ ಕಲಾಕೃತಿಗಳು ಬೆಂಗಳೂರು ಪೋಲೀಸ್ ಆಯುಕ್ತರ ಕಚೇರಿಯ ಗ್ಯಾಲರಿಯಲ್ಲೂ ಪ್ರದರ್ಶನಗೊಂಡಿವೆ.

ತಮ್ಮ ಕಲೆಯ ಮೂಲಕವೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೂ ಪರಿಚಯವಾದರು. ಇವರಲ್ಲಿನ ಕಲಾ ಪ್ರತಿಭೆಯ ಜೊತೆಗೆ, ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆಗಳನ್ನು ನೋಡಿ ಮೆಚ್ಚಿಕೊಂಡ ಅವರು, ಇವರನ್ನು ಪ್ರೋತ್ಸಾಹಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ಸಿಗೆ ಶಿಫಾರಸು ಮಾಡಿದ್ದರಿಂದ ಶ್ರೀರಾಮುಲು ಅವರಿಗೆ 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿದೆ.

ಬರದ ನಾಡಾದ ಚಳ್ಳಕೆರೆಯಿಂದ ಬಂದ ಈ ಸೃಜನಶೀಲ ಕಲಾ ಮನಸ್ಸಿನ ಪೋಲಿಸ್ ಹವಾಲ್ದಾರ್ ಇಂದು ರಾಜ್ಯ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ ಅತ್ಯುತ್ತಮ ಕಲಾವಿದನಾಗಿ ಬೆಳೆಯಲಿ ಎಂಬ ಹಾರೈಕೆಗಳೊಂದಿಗೆ.
#ಶಿವಣ್ಣ ಜಿ.ಕೆ. ಕಲಾವಿದರು


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ