Breaking News
Home / ಜಿಲ್ಲೆ / ಬೆಳಗಾವಿ ಜಿಲ್ಲಾ ಆಸ್ಪತ್ರೆ ಭೀಮ್ಸ್ ಸುತ್ತ ಮುತ್ತಲು ನಿಷೇದಾಜ್ಞೆ, ಮೂವರನ್ನು ವಶಕ್ಕೆ ಪಡೆದಪೋಲೀಸರು,

ಬೆಳಗಾವಿ ಜಿಲ್ಲಾ ಆಸ್ಪತ್ರೆ ಭೀಮ್ಸ್ ಸುತ್ತ ಮುತ್ತಲು ನಿಷೇದಾಜ್ಞೆ, ಮೂವರನ್ನು ವಶಕ್ಕೆ ಪಡೆದಪೋಲೀಸರು,

Spread the love

ಬೆಳಗಾವಿ- ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಕೋವೀಡ್ ವಾರ್ಡಿನಲ್ಲಿ ಕಿಡಗೇಡಿಗಳು ನಡೆಸಿದ ಹಲ್ಲೆ ಮತ್ತು ಹಿಂಸಾಚಾರ ಪ್ರಕರಣಕ್ಕೆ ಸಮಂಧಿಸಿದೆ ಪೋಲೀಸರು ಮೂವರನ್ನು ವಶಕ್ಕೆ ಪಡೆದು,ವಿಚಾರಣೆ ಆರಂಭಿಸಿದ್ದಾರೆ.

ನಿನ್ನೆ ರಾತ್ರಿ ನಡೆದ ಕಿಡಗೇಡಿಗಳ ಪುಂಡಾಟಿಕೆಗೆ ಐವರು ಜನ ಗಾಯಗೊಂಡಿದ್ದು ಒಂದು ಅಂಬ್ಯುಲೆನ್ಸ್ ಸಂಪೂರ್ಣವಾಗಿ ಭಸ್ಮವಾಗಿ ಪೋಲೀಸ್ ವಾಹನ ಸೇರಿದಂತೆ ಒಟ್ಟು ಐದು ವಾಹನಗಳು ಜಖಂಗೊಂಡಿವೆ.

COVID-19 Patient Dies In Karnataka Hospital, Family Torches Ambulance

ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೋಲೀಸರು, ಮೂವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ,ಬೆಳಗಾವಿಯ ಎಪಿಎಂಸಿ ಪೋಲೀಸರು ಇಡೀ ರಾತ್ರಿ ಆರೋಪಿಗಳ ಪತ್ತೆಗೆ ಶ್ರಮಿಸಿದ್ದು ಹಿಂಸಾಚಾರಕ್ಕೆ ಸಮಂಧಿಸಿದಂತೆ ಇನ್ನೂ ಹಲವಾರು ಜನರು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ.

ನಿನ್ನೆ ರಾತ್ರಿ ಘಟನೆಯ ಬಳಿಕ ಮುಖ್ಯಮಂತ್ರಿಗಳು ಘಟನೆಯ ಕುರಿತು ವರದಿ ನೀಡಲು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ ಹಿನ್ನಲೆಯಲ್ಲಿ ಅಮಲನ್ ಬಿಸ್ವಾಸ ಅವರು ನಿನ್ನೆ ಮದ್ಯರಾತ್ರಿಯೇ ಸಭೆ ನಡೆಸಿ ಭೀಮ್ಸ್ ಅಧಿಕಾರಿಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ,ನಗರ ಪೋಲೀಸ್ ಆಯುಕ್ತರು ಮತ್ತು ಪ್ರಾದೇಶಿಕ ಆಯುಕ್ತರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಭೀಮ್ಸ್ ವೈದ್ಯರನ್ನು ಭೇಟಿಯಾಗಿ,ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾ ಆಸ್ಪತ್ರೆ ಭೀಮ್ಸ್ ಸುತ್ತ ಮುತ್ತಲು ನಿಷೇದಾಜ್ಞೆ ಜಾರಿಯಲ್ಲಿದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ