Breaking News

ನನ್ನ ಕಣ್ಮುಂದೆ ನಮ್ಮ ಜನರು ಸೋಂಕಿತರಾಗೋದನ್ನು ನೋಡಲಾರೆ:ಒಂದೇ ದಿನ 10,576 ಪ್ರಕರಣಗಳು ವರದಿ

Spread the love

ಮುಂಬೈ: ಮಹಾರಾಷ್ಟ್ರ ಕೊರೊನಾ ಸೋಂಕಿತರಲ್ಲಿ ಮಹಾ ದಾಖಲೆಯನ್ನು ಬರೆದಿದ್ದು, ಬುಧವಾರ ಒಂದೇ ದಿನ 10,576 ಪ್ರಕರಣಗಳು ವರದಿಯಾಗಿವೆ. ಬುಧವಾರ ಕೊರೊನಾಗೆ ಮಹಾರಾಷ್ಟ್ರದಲ್ಲಿ 280 ಜನರನ್ನು ಬಲಿ ಪಡೆದುಕೊಂಡಿದೆ.

ದೇಶದಲ್ಲಿ ಇದುವರೆಗೂ 11 ಲಕ್ಷಕ್ಕೂ ಅಧಿಕ ಜನರು ಕೊರೊನಾ ಪ್ರಕರಣಗಳಿವೆ. ಮಹಾರಾಷ್ಟ್ರ ಕೊರೊನಾ ಪೀಡಿತ ರಾಜ್ಯಗಳಲ್ಲಿ ಮೊದಲ ಸ್ಥಾನದಲ್ಲಿದೆ. 24 ಗಂಟೆಯಲ್ಲಿ 10,576 ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 3,37,607ಕ್ಕೆ ಏರಿಕೆಯಾಗಿದೆ. ಇದುವರೆಗೂ ಮಹಾರಾಷ್ಟ್ರದಲ್ಲಿ 12,556 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಬುಧವಾರ 1,310 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

ಸಾಮ್ನಾ ಪತ್ರಿಕೆಗೆ ಸಂದರ್ಶನ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ನಾನು ಡೊನಾಲ್ಡ್ ಟ್ರಂಪ್ ಅಲ್ಲ. ನನ್ನ ಕಣ್ಮುಂದೆ ನಮ್ಮ ಜನರು ಸೋಂಕಿತರಾಗೋದನ್ನು ನೋಡಲಾರೆ ಎಂದು ಹೇಳಿದ್ದಾರೆ. ಸಂದರ್ಶನದ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಂಚಿಕೆಯ ಈ ವಾರ ಪ್ರಸಾರವಾಗಲಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ