Breaking News
Home / ಜಿಲ್ಲೆ / ಬೆಂಗಳೂರು / ಬಿಗ್ ನ್ಯೂಸ್ : ರಾಜ್ಯದಲ್ಲಿ ಮತ್ತೆ ಎರಡು ವಾರ ‘ಶಾಲಾ-ಕಾಲೇಜು’ ಬಂದ್.?

ಬಿಗ್ ನ್ಯೂಸ್ : ರಾಜ್ಯದಲ್ಲಿ ಮತ್ತೆ ಎರಡು ವಾರ ‘ಶಾಲಾ-ಕಾಲೇಜು’ ಬಂದ್.?

Spread the love

ಬೆಂಗಳೂರು : ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಕೆಯನ್ನು ಕಂಡಿತು ಎನ್ನುವಾಗಲೇ, ಈಗ ಕೊರೋನಾ ಎರಡನೇ ಅಲೆಯ ಮುನ್ಸೂಚನೆ ರಾಜ್ಯದಲ್ಲಿ ಎದ್ದಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸೋಂಕಿನ ನಿಯಂತ್ರಣದ ಸಲುವಾಗಿ ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ.

 

ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚು ಹೆಚ್ಚುಗೊಳ್ಳುತ್ತಿರುವ ಬೆನ್ನಲ್ಲೇ, ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ, ಮಹತ್ವದ ನಿರ್ಧಾರ ಕೈಗೊಳ್ಳೋದಕ್ಕೆ, ವೈದ್ಯಕೀಯ ಹಾಗೂ ಆರೋಗ್ಯ ಸಚಿವರಿಗೆ ತನ್ನ ಶಿಫಾರಸ್ಸುಗಳ ವರದಿಯನ್ನು ಸಲ್ಲಿಸಿದೆ. ಈ ವರದಿಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಎರಡು ವಾರಗಳ ಕಾಲ ಶಾಲಾ-ಕಾಲೇಜು ಬಂದ್ ಮಾಡುವುದು, ಕುರಿತಂತೆ, ಒಂಭತ್ತು ಟಫ್ ರೂಲ್ಸ್ ಜಾರಿಗೆ ಸೂಚಿಸಿದೆ.

 

ಎರಡು ವಾರ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬೇಕು. ಯಾವುದೇ ಪ್ರತಿಭಟನೆ, Rally, ಸಮಾವೇಶಕ್ಕೆ ಅವಕಾಶ ಕೊಡಬಾರದು. ಜಿಮ್ ಗಳನ್ನು ತಕ್ಷಣದಿಂದಲೇ ಬಂದ್ ಮಾಡಬೇಕು. ಬಿಬಿಎಂಪಿ ವ್ಯಾಪ್ತಿಯ ಜಿಮ್ ಗಳನ್ನು ಮುಚ್ಚಬೇಕು ಎಂದು ಶಿಫಾರಸ್ಸು ಮಾಡಿದೆ.

ಇನ್ನೂ ಮುಂದುವರೆದು, ಅಪಾರ್ಟ್ಮೆಂಟ್ ಒಳಗಿನ ಪಾರ್ಟಿ ಹಾಲ್, ರೀಡಿಂಗ್ ರೂಂ, ಜಿಮ್, ಸ್ವಿಮ್ಮಿಂಗ್ ಪೂಲ್ ಬಂದ್ ಮಾಡಬೇಕು. ಒಳಾಂಗಣ ಕಾರ್ಯಕ್ರಮಗಳಿಗೆ 100 ಜನಕ್ಕೆ ಮಾತ್ರ ಅವಕಾಶ ನೀಡಬೇಕು. ಹೊರಾಂಗಣ ಕಾರ್ಯಕ್ರಮಗಳಿಗೆ 200 ಜನಕ್ಕೆ ಮಾತ್ರವೇ ಅವಕಾಶ ನೀಡಬೇಕು ಎಂಬುದಾಗಿ ಸೂಚಿಸಿದೆ. ಇಂತಹ ಶಿಫಾರಸ್ಸು ವರದಿಯನ್ನು ಆರೋಗ್ಯ ಸಚಿವರಿಗೆ ಸಲ್ಲಿಸಿದ್ದು, ಕೊರೋನಾ ನಿಯಂತ್ರಣಕ್ಕಾಗಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸುಗಳಿಗೆ ರಾಜ್ಯ ಸರ್ಕಾರ ಒಕೆ ಅಂದ್ರೇ.. ರಾಜ್ಯದಲ್ಲಿ ಮತ್ತೆ ಎರಡು ವಾರ ಶಾಲಾ-ಕಾಲೇಜು ಬಂದ್ ಆಗಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ